ಕೃಷಿ ವಿವಿಗಳು ಇರುವುದು ಕೃಷಿಮೇಳ ಮಾಡಿ ಜಾತ್ರೆ ಮಾಡಲು ಅಲ್ಲ; ಸಂಶೋಧನೆಗಳು, ಯಂತ್ರಗಳು ರೈತರ ಜಮೀನಿಗೆ ತಲುಪಬೇಕು: ಸಿಎಂ
ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಜೊತೆಗೆ ಉದ್ಯೋಗ ಸೃಷ್ಟಿ ಆಗುತ್ತೆ. ಕೃಷಿ ಅವಲಂಬಿತ ರೈತರ ಆದಾಯ ಸಹ ಹೆಚ್ಚಾಗಲು ಸಾಧ್ಯವಾಗುತ್ತದೆ. ಯಾವುದೇ ಸರ್ಕಾರ ಕೃಷಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಮ್ಮ ದೇಶ ಕೃಷಿ ಪ್ರಧಾನವಾದ ರಾಷ್ಟ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಧಾರವಾಡ ಸೆ.09: ಒಣಬೇಸಾಯಕ್ಕೆ ಹೆಚ್ಚು ಗಮನ ಕೊಡುವುದು ಕೃಷಿ ವಿಶ್ವವಿದ್ಯಾಲಯಗಳ (Agriculture University) ಕರ್ತವ್ಯ. ಕೃಷಿ ವಿಶ್ವವಿದ್ಯಾಲಯಗಳು ಇರುವುದು ಕೃಷಿಮೇಳ (Krushimela) ಮಾಡಿ ಜಾತ್ರೆ ಮಾಡಲು ಅಲ್ಲ. ಸಂಶೋಧನೆಗಳು, ಯಂತ್ರಗಳು ರೈತರ ಜಮೀನಿಗೆ ತಲುಪುವಂತೆ ಮಾಡಬೇಕು. ಕೃಷಿ ವಿಶ್ವವಿದ್ಯಾಲಯಗಳ ಪಾತ್ರ ಬಹಳ ಮಹತ್ವ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೂಚಿಸಿದರು. ಇಂದಿನಿಂದ (ಸೆ.09) ನಾಲ್ಕು ದಿನಗಳಕಾಲ ಧಾರವಾಡ ಕೃಷಿ ವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಜೊತೆಗೆ ಉದ್ಯೋಗ ಸೃಷ್ಟಿ ಆಗುತ್ತೆ ಎಂದರು.
ಕೃಷಿ ಅವಲಂಬಿತ ರೈತರ ಆದಾಯ ಸಹ ಹೆಚ್ಚಾಗಲು ಸಾಧ್ಯವಾಗುತ್ತದೆ. ಯಾವುದೇ ಸರ್ಕಾರ ಕೃಷಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಮ್ಮ ದೇಶ ಕೃಷಿ ಪ್ರಧಾನವಾದ ರಾಷ್ಟ್ರ, ಕೆಲವರು ಕೃಷಿಯನ್ನು ಬಿಡುತ್ತಿದ್ದಾರೆ. ಕೃಷಿ ಲಾಭದಾಯಕ ಅಲ್ಲ ಅಂತ ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ಜಿಡಿಪಿ ಬೆಳವಣಿಗೆಗೆ ಕೃಷಿ, ಕೈಗಾರಿಕೆ, ಸೇವಾ ವಲಯ ಗುರುತಿಸುತ್ತೇವೆ. ಕೃಷಿ ವಲಯದಲ್ಲಿ ಹೆಚ್ಚು ಅಭಿವೃದ್ಧಿಯಾದರೆ ಜಿಡಿಪಿ ಬೆಳವಣಿಗೆ ಆಗುತ್ತದೆ. ಜಿಡಿಪಿ ಬೆಳವಣಿಗೆಯಾಗದಿದ್ದರೆ ತಲಾ ಆದಾಯ ಕಡಿಮೆ ಆಗುತ್ತದೆ ಎಂದು ತಿಳಿಸಿದರು.
ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಆಗುತ್ತದೆ. ಉದ್ಯೋಗ ಸೃಷ್ಟಿ ಆಗುತ್ತದೆ. ಕೃಷಿ ಅವಲಂಬಿತ ರೈತರ ಆದಾಯ ಸಹ ಹೆಚ್ಚಾಗಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಕೃಷಿಯನ್ನು ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಇದನ್ನೂ ಓದಿ: ಜಾತ್ಯತೀತ ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿ: ಜೆಡಿಎಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಜಿಡಿಪಿ ಬೆಳವಣಿಗೆಗೆ ಕೃಷಿ, ಕೈಗಾರಿಕೆ, ಸೇವಾ ವಲಯ ಗುರುತಿಸುತ್ತೇವೆ. ಕೃಷಿ ವಲಯದಲ್ಲಿ ಹೆಚ್ಚು ಅಭಿವೃದ್ಧಿಯಾದರೆ ಜಿಡಿಪಿ ಬೆಳವಣಿಗೆ ಆಗುತ್ತದೆ. ಕೃಷಿ ಅವಲಂಬಿತರಿಗೆ ಹೆಚ್ಚು ಆಸಕ್ತಿ ಬರುವಂತೆ ಮಾಡಬೇಕಿದೆ. ಯುವಕರಿಗೆ ಹೆಚ್ಚು ಆಸಕ್ತಿ ಬರುವಂತೆ ಮಾಡಬೇಕಿದೆ. ಎಲ್ಲ ಕೃಷಿ ವಿಶ್ವ ವಿದ್ಯಾಲಯಗಳು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯಕ್ಕೆ ಬರುವವರೆಲ್ಲ ರೈತರ ಮಕ್ಕಳೇ? ರೈತರ ಮಕ್ಕಳಲ್ಲದವರು ಬಿಎಸ್ಸಿ, ಎಂಎಸ್ಸಿ ಅಗ್ರಿ ಓದುವುದು ಕಡಿಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇನ್ನೂ ಬರಗಾಲ ಘೋಷಣೆ ಮಾಡಿಲ್ಲ. ಕೆಲವು ನಿಯಮಾವಳಿ ಬದಲಾವಣೆಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ.ಆದರೆ ಕೇಂದ್ರ ಸರ್ಕಾರ ಉತ್ತರವನ್ನೇ ಕೊಟ್ಟಿಲ್ಲ. ಕಳಸಾ-ಬಂಡೂರಿ, ಮಹದಾಯಿ ಯೋಜನೆಗೆ ಹೋರಾಟ ನಡೆಯುತ್ತಿದೆ. ಒಂದು ಸಲ ಪ್ರಧಾನಿ ಮೋದಿ ಅವರ ಬಳಿ ಸರ್ವಪಕ್ಷ ನಿಯೋಗದಲ್ಲಿ ಹೋಗಿದ್ದೆ. ರೈತ ಹೋರಾಟಗಾರ, ಸ್ವಾಮೀಜಿಗಳು ನಿಯೋಗದಲ್ಲಿ ಇದ್ದರು. ಗೋವಾ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದೆ. ಇಬ್ಬರಲ್ಲಿಯೂ ರಾಜಿ ಮಾಡಿಸಿ ಅಂತ ಕೇಳಿದಿವಿ. ಆದರೆ ಪುಣ್ಯಾತ್ಮ ನರೇಂದ್ರ ಮೋದಿ ರಾಜಿ ಮಾಡಲೇ ಇಲ್ಲ ಎಂದು ವಾಗ್ದಾಳಿ ಮಾಡಿದರು.
ನ್ಯಾಯಾಧೀಕರಣದ ತೀರ್ಪು ಆಗಿತ್ತು. ತೀರ್ಪು ಬಳಿಕ ನೋಟಿಫಿಕೇಷನ್ ಸಹ ಆಯ್ತು. ಈಗ ಗೋವಾ ಸುಪ್ರಿಂಕೋರ್ಟ್‌ಗೆ ಹೋಗಿದೆ. ಮೋದಿ ಗೋವಾದವರನ್ನು ಕರೆದು ಮಾತನಾಡಬೇಕಿತ್ತು. ಆದರೆ ಮಾಡಿಲ್ಲ. ಅರಣ್ಯ ಮತ್ತು ಪರಿಸರ ಸಚಿವಾಲಯ ಕ್ಲಿಯರನ್ಸ್ ಒಂದೆ ಈಗ ಬಾಕಿ ಇದೆ. ಈಗ ಪುನಃ ಸರ್ವಪಕ್ಷ ನಿಯೋಗದಲ್ಲಿ ಹೋಗಬೇಕಿತ್ತು. ಇದಕ್ಕಾಗಿ ಸಮಯ ಕೊಡಿ ಅಂತ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಆದರೆ ಯಾವುದೇ ಸ್ಪಂದನೆ ಬಂದಿಲ್ಲ. ಇವತ್ತು ಸಹ ರೈತ ಹೋರಾಟಗಾರರು ನನ್ನ ಭೇಟಿಯಾಗಿದ್ದಾರೆ. ಹೋರಾಟ ಮಾಡುವ ರೈತರು ಮಾಡಲಿ. ಆದರೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಕ್ಲಿಯರನ್ಸ್ ಕೇಂದ್ರ ಸರ್ಕಾರ ಕೊಡಬೇಕು. ಗೋವಾಗೂ ಬುದ್ಧಿ ಹೇಳುವ ಕೆಲಸ ಆಗಬೇಕು. ಕ್ಲಿಯರನ್ಸ್ ಆದ ತಕ್ಷಣವೇ ಕಾಮಗಾರಿ ಆರಂಭಿಸುತ್ತೇವೆ. ಮಹದಾಯಿಗೆ ಅನುದಾನದ ಕೊರತೆ ಇಲ್ಲ. ಅದಕ್ಕಾಗಿ ಹಣ ಇದ್ದೇ ಇದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ