ಜಿ20 ಶೃಂಗಸಭೆಗೆ ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಆಹ್ವಾನಿಸದಿರುವುದು ತಪ್ಪು: ಸಿದ್ದರಾಮಯ್ಯ

ಇದೇ ವಿಚಾರವಾಗಿ ನಗರದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದಾಗ, ಅವರು ಕೇವಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಾತ್ರ ಅಲ್ಲ, ರಾಜ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ, ಹಾಗಾಗಿ ಜಿ20 ಶೃಂಗಸಭೆಗೆ ಅವರನ್ನು ಆಹ್ವಾನಿಸದಿರುವುದು ತಮ್ಮ ಎಣಿಕೆಯಲ್ಲಿ ತಪ್ಪು ಎಂದು ಹೇಳಿದರು.

ಜಿ20 ಶೃಂಗಸಭೆಗೆ ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಆಹ್ವಾನಿಸದಿರುವುದು ತಪ್ಪು: ಸಿದ್ದರಾಮಯ್ಯ
|

Updated on: Sep 09, 2023 | 2:42 PM

ಹುಬ್ಬಳ್ಳಿ: ದೆಹಲಿಯ ಪ್ರಗತಿ ಮೈದಾನದಲ್ಲಿ ಹಾಕಲಾಗಿರುವ ವೈಭವೋಪೇತ ಬಾರತ್ ಮಂಟಪಂ ನಲ್ಲಿ (Bharat Mandapam) ಜಿ20 ಶೃಂಗಸಭೆ ನಡೆಯುತ್ತಿದೆ. 20 ರಾಷ್ಟ್ರಗಳ ಗಣ್ಯಾತಿಗಣ್ಯರಲ್ಲದೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್, ವಿಶ್ವ ವ್ಯಾಪಾರ ಕೇಂದ್ರ, ವಿಶ್ವ ಆರೋಗ್ಯ ಸಂಸ್ಥೆ ಮುಂತಾದ ಸಂಸ್ಥೆಗಳ ಪಧಾದಿಕಾರಿಗಳು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮತ್ತು ರಾಜ್ಯ ಸಬೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಆಹ್ವಾನ ಸಿಕ್ಕಿಲ್ಲ. ಮಾಧ್ಯಮ ಪ್ರತಿನಿಧಿಗಳು ಇದೇ ವಿಚಾರವಾಗಿ ನಗರದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಕೇಳಿದಾಗ, ಅವರು ಕೇವಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಾತ್ರ ಅಲ್ಲ, ರಾಜ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ, ಹಾಗಾಗಿ ಜಿ20 ಶೃಂಗಸಭೆಗೆ ಅವರನ್ನು ಆಹ್ವಾನಿಸದಿರುವುದು ತಮ್ಮ ಎಣಿಕೆಯಲ್ಲಿ ತಪ್ಪು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us