ಸಂವಿಧಾನ ಮೂಲ ಬರಹದಲ್ಲಿ ರಾಮಾಯಣ ಮಹಾಭಾರತ ನಿದರ್ಶನಗಳನ್ನು ಕ್ಯಾಲಿಗ್ರಫಿಯಲ್ಲಿ ಚಿತ್ರಿಸಿದ್ದಾರೆ – ಸಂಸದ ಪ್ರತಾಪ್

​​ಸನಾತನ ಧರ್ಮದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ/ ಸಾರುವ ಇನ್ನೂ ಸಾಕಷ್ಟು ಉದಾಹರಣೆಗಳನ್ನು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಂಸದ ಪ್ರತಾಪ್ ಸಿಂಹ ಉಲ್ಲೇಖಿಸಿದರು. ಇನ್ನು ಈ ಬಾರಿ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಮಾಡಲು ಸರ್ಕಾರ ಮುಂದಾಗಿರುವ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಅವರು ಅದೆಂಗ್ ಮಾಡ್ತಾರೋ ಮಾಡಲಿ ನೋಡ್ತೀನಿ ಎಂದು ಸರ್ಕಾರಕ್ಕೆ ಸವಾಲ್ ಹಾಕಿದರು.

|

Updated on: Sep 09, 2023 | 4:36 PM

​​ಸನಾತನ ಧರ್ಮ (Sanatana Dharma) ವಿರುದ್ಧ ಬೊಬ್ಬಿಡುತ್ತಿರುವ ಬುದ್ದಿಜೀವಿಗಳಿಗೆ ಒಂದಷ್ಟು ನಿದರ್ಶನಗಳ ಮೂಲಕ ತಿರುಗೇಟು ಕೊಟ್ಟ ಮೈಸೂರು ಸಂಸದ ಪ್ರತಾಪ್ ಸಿಂಹ ಸಂವಿಧಾನ ಮೂಲ ಬರಹದಲ್ಲಿ ರಾಮಾಯಣ ಮಹಾಭಾರತ ನಿದರ್ಶನಗಳನ್ನು (Ramayana and Mahabharata illustrations) ಕ್ಯಾಲಿಗ್ರಫಿಯಲ್ಲಿ (calligraphy) ಚಿತ್ರಿಸಿದ್ದಾರೆ ಎಂದರು. ಜೊತೆಗೆ ​​ಸನಾತನ ಧರ್ಮದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ/ ಸಾರುವ ಇನ್ನೂ ಸಾಕಷ್ಟು ಉದಾಹರಣೆಗಳನ್ನು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಂಸದ ಪ್ರತಾಪ್ ಸಿಂಹ (Mysore MP Pratap Simha) ಉಲ್ಲೇಖಿಸಿದರು.

ಇನ್ನು ಈ ಬಾರಿ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಮಾಡಲು ಸರ್ಕಾರ ಮುಂದಾಗಿರುವ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಅವರು ಅದೆಂಗ್ ಮಾಡ್ತಾರೋ ಮಾಡಲಿ ನೋಡ್ತೀನಿ. ಯಾವ ಸರ್ಕಾರ ಬಂದರೂ ಆಚರಣೆ ಮಾಡುವಂತಿಲ್ಲ ಎಂದು ಸರ್ಕಾರಕ್ಕೆ ಸವಾಲ್ ಹಾಕಿದರು. ಬಹುಸಂಖ್ಯಾತರ ಭಾವನೆಗೆ ಧಕ್ಕೆಯಾಗುತ್ತದೆ. ಏನೇ ಕಷ್ಟ ಬಂದರು ಲಕ್ಷಾಂತರ ಮಂದಿ ಚಾಮುಂಡಿ ತಾಯಿಯ ಬಳಿ ಹೋಗುತ್ತಾರೆ. ಅಂತಾದರಲ್ಲಿ ತಾಯಿಯನ್ನು ತುಚ್ಚವಾಗಿ ಮಾತನಾಡುವವರಿಗೆ ಹೇಗೆ ಅವಕಾಶ ನೀಡ್ತಾರೆ? ಎಂದು ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದರು.

ಬಿ ಎಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿ ಆಗಿದ್ದಾಗ ಸೋಮಣ್ಣ ಹಾಗೂ ನಾವು ಸೇರಿ ಅನುಮತಿಗೆ ಅವಕಾಶ ಕೊಟ್ಟಿರಲಿಲ್ಲ. ಮೈಸೂರಿಗರು ಈ ವಿಚಾರದಲ್ಲಿ ಒಟ್ಟಾಗಬೇಕು. ನಿಮಗೆ ಏನೇ ಕಷ್ಟ ಬಂದರು ತಾಯಿ ಬಳಿ ಬೇಡಿಕೊಳ್ಳುತ್ತಿರಿ. ಅಂತಹ ತಾಯಿಗೆ ಅವಮಾನವಾಗುವಾಗ ನೀವೆಲ್ಲ ಒಟ್ಟಿಗೆ ಹೋರಾಡಬೇಕು. ಈಗ ಮಹಿಷ ದಸರಾ ಮಾಡುವ ನಾಲ್ಕು ಜನರ ಮನೆಯಲ್ಲಿ ಹೋಗಿ ನೋಡಿ. ಅವರ ಹೆಂಡತಿಯರು ಚಾಮುಂಡಿ ತಾಯಿಯನ್ನ ಆರಾಧನೆ ಮಾಡುತ್ತಾರೆ. ಇವರಿಗೆ ಕನಿಷ್ಠ ಅವರ ಮನೆಯವರ ಭಾವನೆಗಳನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಆದರೆ ಇಲ್ಲಿ ಬಂದು ಉದ್ದುದ್ದ ಮಾತನಾಡುತ್ತಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಟಾಂಗ್​ ಕೊಟ್ಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ವಿರೋಧ ಪಕ್ಷಗಳ ನಾಯಕರು ನೀರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ: ಶಿವಕುಮಾರ್
ವಿರೋಧ ಪಕ್ಷಗಳ ನಾಯಕರು ನೀರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ: ಶಿವಕುಮಾರ್
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ