ಬಿಜೆಪಿ ಜೊತೆ ಮೈತ್ರಿ ಬೆಳೆಸುವ ಆತುರ, ಕಾತುರ ನಮಗಂತೂ ಇಲ್ಲ: ಸಿಎಂ ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ
ಮೈತ್ರಿ ಬಗ್ಗೆ ಎರಡು ಪಕ್ಷಗಳ ನಾಯಕರಿಗಿಂತ ಮಾಧ್ಯಮದವರಿಗೆ ಹೆಚ್ಚು ಕುತೂಹಲವಿದ್ದಂತಿದೆ ಎಂದು ಹೇಳಿದರು. ಪಕ್ಷದ ರಾಜ್ಯಾಧ್ಯಾಕ್ಷನಾಗಿದ್ದರೂ ತಾವು ನಿಲುವು ಪ್ರಕಟಿಸಲಾಗದು ಅಂತ ಅವರು ಹೇಳಿದ್ದು, ಪಕ್ಷದ ನಿರ್ಧಾರಗಳನ್ನು ಕುಮಾರಸ್ವಾಮಿ ಮತ್ತು ದೇವೇಗೌಡರೇ ತೆಗೆದುಕೊಳ್ಳುತ್ತಾರೆ ಅಂತ ಸೂಚಿಸಿದಂತಿತ್ತು.
ಬೆಂಗಳೂರು: ಜೆಡಿಎಸ್ ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ತಾವು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಪಕ್ಷ ಸೇರಿದ್ದಕ್ಕೆ ಯಾವುದೇ ಕೊರಗು ಪಶ್ಚಾತ್ತಾಪ ಇಲ್ಲ ಎಂದು ಹೇಳಿದರು. ನಗರದಲ್ಲಿಂದು ಪತ್ರಿಕಾ ಗೋಷ್ಟಿ ಕರೆದು ಮಾತಾಡಿದ ಅವರು, ಮಂತ್ರಿಯಾಗಲಿಲ್ಲ ಅನ್ನೋ ಕೊರಗಿಗಿಂತ ಹೆಚ್ಚು; ಕಷ್ಟ ಕಾಲದಲ್ಲಿ ಹೆಚ್ ಡಿ ದೇವೇಗೌಡ (HD Devegowda) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಜೊತೆ ನಿಂತುಕೊಂಡ ಆತ್ಮತೃಪ್ತಿ ಇದೆ ಎಂದು ಅವರು ಹೇಳಿದರು. 92 ವರ್ಷದ ದೇವೇಗೌಡರ ಜೊತೆ 42 ವರ್ಷದ ಸ್ನೇಹ-ಬಾಂಧವ್ಯ ಇದೆ ಎಂದು ಹೇಳಿದ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಲಿಲ್ಲ. ಮೈತ್ರಿ ಬಗ್ಗೆ ಎರಡು ಪಕ್ಷಗಳ ನಾಯಕರಿಗಿಂತ ಮಾಧ್ಯಮದವರಿಗೆ ಹೆಚ್ಚು ಕುತೂಹಲವಿದ್ದಂತಿದೆ ಎಂದು ಹೇಳಿದರು. ಪಕ್ಷದ ರಾಜ್ಯಾಧ್ಯಾಕ್ಷನಾಗಿದ್ದರೂ ತಾವು ನಿಲುವು ಪ್ರಕಟಿಸಲಾಗದು ಅಂತ ಅವರು ಹೇಳಿದ್ದು, ಪಕ್ಷದ ನಿರ್ಧಾರಗಳನ್ನು ಕುಮಾರಸ್ವಾಮಿ ಮತ್ತು ದೇವೇಗೌಡರೇ ತೆಗೆದುಕೊಳ್ಳುತ್ತಾರೆ ಅಂತ ಸೂಚಿಸಿದಂತಿತ್ತು. ಬಿಜೆಪಿ ಜೊತೆ ಮೈತ್ರಿ ಬೆಳೆಸುವ ಆತುರ, ಕಾತುರ ನಮಗಿಲ್ಲ ಎಂದ ಇಬ್ರಾಹಿಂ ಮಾತಿನಲ್ಲಿ ಈ ಹೊಸ ಬೆಳವಣಿಗೆಯ ಬಗ್ಗೆ ಹೆಚ್ಚು ಉತ್ಸಾಹವೇನೂ ಕಾಣಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ