ಚಾಮರಾಜಪೇಟೆ ಈದ್ಗಾ ಮೈದಾನ ಬಳಿ ಗಣೇಶ ಪ್ರತಿಷ್ಠಾಪನೆ: ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು
ಚಾಮರಾಜಪೇಟೆ ಈದ್ಗಾ ಮೈದಾನ ಬಳಿ ಗಣೇಶ ಪ್ರತಿಷ್ಠಾಪನೆ ಹಿನ್ನೆಲೆ ಈದ್ಗಾ ಮೈದಾನ ಬಳಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.
ಬೆಂಗಳೂರು: ಚಾಮರಾಜಪೇಟೆ (Chamrajpete) ಈದ್ಗಾ ಮೈದಾನ (Idgah Maidan) ಬಳಿ ಗಣೇಶ ಪ್ರತಿಷ್ಠಾಪನೆ (Ganesh Chaturthi) ಹಿನ್ನೆಲೆ ಈದ್ಗಾ ಮೈದಾನ ಬಳಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಈದ್ಗಾ ಮೈದಾನದ ಮುಂಭಾಗ ಒಂದು ವಾರ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಮುಂದಿನ ಭಾನುವಾರದಂದು ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುವುದು. ಪಾದರಾಯನಪುರದಿಂದ ಅದ್ದೂರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ.
ಶಾಸಕ ಜಮೀರ್ ಅಹ್ಮದ್ ಅವರಿಗೆ ಇಷ್ಟು ದಿವಸ ಗಣೇಶನ ಮೇಲೆ ಇಲ್ಲದ ಪ್ರೀತಿ ಈಗ ಎಲ್ಲಿಂದ ಬಂತು? 20 ವರ್ಷದಿಂದ ಗೆದ್ದಾಗಿಂದ ಯಾವತ್ತೂ ಗಣೇಶ ಹಬ್ಬ ಮಾಡಿಲ್ಲ. ಜಮೀರ್ ಈಗ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಜಮೀರ್ ಕಚೇರಿಯಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಚಾಮರಾಜಪೇಟೆ ಸ್ಥಳೀಯ ನಾಗರಿಕರ ಹರೀಶ್ ವಾಗ್ದಾಳಿ ಮಾಡಿದ್ದಾರೆ.
ಇಷ್ಟು ದಿವಸ ಜನರನ್ನು ಗೂಬೆ ಮಾಡಿದ್ದು ಆಯ್ತು. ಮುಂದೆ ಜನರೇ ಜಮೀರ್ರನ್ನ ಗೂಬೆ ಮಾಡುತ್ತಾರೆ. ಎಲೆಕ್ಷನ್ ಬರ್ತಿರೋದರಿಂದ ಹೊಸ ನಾಟಕ ಶುರು ಮಾಡಿದ್ದಾರೆ. ಜನರು ದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಗೆ ಜಮೀರ್ಗೆ ತಕ್ಕ ಪಾಠ ಕಲಿಸುತ್ತಾರೆ. ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸೋದು ಬೇಡ ಅಂತ ಸುಪ್ರೀಂ ಕೋರ್ಟ್ಗೆ ಹೋದರು. ಈಗ ಗಣೇಶ ಕೂರಿಸ್ತೀನಿ ಅಂತ ಹೊಸದಾಗಿ ಹೇಳುತ್ತಿದ್ದಾರೆ. ಜಮೀರ್ ಅವರ ನಡೆ, ಅವರಿಗೆ ಸೂಕ್ತವಲ್ಲ ಎಂದು ಕಿಡಿಕಾರಿದರು.
ಚಾಮರಾಜಪೇಟೆಯಲ್ಲಿ ಮತ್ತೆ ತಾರಕಕ್ಕೇರಿದ ಗಣೇಶೋತ್ಸವ ಗದ್ದಲ: ಮೆರವಣಿಗೆ ವಿಚಾರವಾಗಿ ಸಮಿತಿ, ಪೊಲೀಸರ ನಡುವೆ ಸಮರ
ಬೆಂಗಳೂರು: ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಗದ್ದಲ ಮತ್ತೆ ತಾರಕಕ್ಕೇರಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ವಿಚಾರವಾಗಿ ಗಣೇಶೋತ್ಸವ ಸಮಿತಿ ಮತ್ತು ಪೊಲೀಸರ ನಡುವೆ ಸಮರ ಉಂಟಾಗಿದೆ. ನಿನ್ನೆ ಪೊಲೀಸರು, ಗಣೇಶೋತ್ಸವ ಸಮಿತಿ ನಡುವೆ ಭಾರಿ ಗಲಾಟೆಯಾಗಿದ್ದು, ವಿರೋಧದ ನಡುವೆಯೂ ಮೈದಾನದ ಎದುರು 2ನೇ ಮುಖ್ಯರಸ್ತೆಯಲ್ಲಿರುವ ಅಯ್ಯಪ್ಪ ದೇಗುಲ ಬಳಿ ಇಂದು ಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದಿನಿಂದ 7 ದಿನಗಳ ಕಾಲ 4ನೇ ವರ್ಷದ ಗಣೇಶೋತ್ಸವ ನಡೆಯಲಿದ್ದು, ಗಣೇಶ ಮೆರವಣಿಗೆಯ ರೂಟ್ ಮ್ಯಾಪ್ನ್ನು ಸಮಿತಿ ಸಿದ್ಧಪಡಿಸಿದೆ.
ಸೆ.10ರ ಮಧ್ಯಾಹ್ನ ಪಾದರಾಯನಪುರದಿಂದ ಗಣೇಶನ ಮೂರ್ತಿ ಮೆರವಣಿಗೆ ಆರಂಭವಾಗಲಿದ್ದು, ಜೆ.ಜೆ ಆರ್ ನಗರ, ಪಾದರಾಯನಪುರ, ಚಾಮರಾಜಪೇಟೆಯ ಮುಖ್ಯ ರಸ್ತೆಗಳ ಮುಖಾಂತರ ಮೆರವಣಿಗೆ ಸಾಗಿ, ಮೈಸೂರು ರಸ್ತೆಯ ಮೂಲಕ ಟೌನ್ ಹಾಲ್ವರೆಗೆ ಅದ್ದೂರಿ ಮೆರವಣಿಗೆಗೆ ಸಿದ್ದತೆ ಮಾಡಲಾಗುತ್ತಿದೆ. ಆದರೆ ಮೆರವಣಿಗೆಗೆ ಸ್ಥಳೀಯ ಪೊಲೀಸರಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಅನುಮತಿ ಸಿಗದಿದ್ದರೂ ಪಾದರಾಯನಪುರದಿಂದ ಮೆರವಣಿಗೆ ಮಾಡೇ ಮಾಡ್ತೀವಿ ಅಂತ ಸಮಿತಿ ಹೇಳುತ್ತಿದೆ.
ಗಣೇಶನ ಮೆರವಣಿಗೆ ರೂಟ್ ಮ್ಯಾಪ್ ನಾಳೆ ಫೈನಲ್: ಸಮಿತಿ ಕಾರ್ಯದರ್ಶಿ ಸುನೀಲ್ ವೆಂಕಟೇಶ್
ಈ ಕುರಿತಾಗಿ ಚಾಮರಾಜಪೇಟೆ ಗಣೇಶ ಉತ್ಸವ ಸಮಿತಿ ಕಾರ್ಯದರ್ಶಿ ಸುನೀಲ್ ವೆಂಕಟೇಶ್ ಹೇಳಿಕೆ ನೀಡಿದ್ದು, ನೆನ್ನೆ ಮೆರವಣಿಗೆ ರೂಟ್‌ಮ್ಯಾಪ್ ಬಗ್ಗೆ ಕೆಲವು ಗೊಂದಲಗಳಿತ್ತು. ಈ ಬಗ್ಗೆ ಪೊಲೀಸರಿಗೆ ಅನುಮತಿಗಾಗಿ ಮನವಿ ಮಾಡಿದ್ವಿ. ಆದರೆ ಅವರಿಂದ ಸರಿಯಾದ ಪ್ರತಿಕ್ರಿಯೆ ಬರ್ಲಿಲ್ಲ. ಗಣೇಶನ ಮೆರವಣಿಗೆ ರೂಟ್ ಮ್ಯಾಪ್ ಕೊಡಿ ಎಂದು ಕೇಳಿದ್ರು. ಅದರಂತೆ ನಾವು ರೂಟ್ ಮ್ಯಾಪ್ ಕೊಟ್ಟಿದ್ವಿ, ಅದಕ್ಕೆ ಒಪ್ಪಿರಲಿಲ್ಲ. ಜೊತೆಗೆ ದೊಡ್ಡ ಗಣೇಶ ಕೂರಿಸೋದು ಬೇಡ ಕೇವಲ 2 ಅಡಿ ಅಥವಾ 4 ಅಡಿ ಗಣೇಶನನ್ನು ಕೂರಿಸಲು ಹೇಳಿದ್ರು. ಹೀಗಾಗಿ ನಿನ್ನೆ ಪೊಲೀಸ್ ಸ್ಟೇಷನ್ ಮುತ್ತಿಗೆಗೆ ಮುಂದಾಗಿದ್ದೇವು. ಕೋವಿಡ್ ವರ್ಷ ಬಿಟ್ಟು ಉಳಿದ ಎಲ್ಲಾ ವರ್ಷಗಳು ನಾವು ಗಣೇಶನನ್ನು ಕೂರಿಸಿದ್ದೇವೆ.
ಹೀಗಾಗಿ ಈ ಬಾರಿಯೂ ಗಣೇಶನನ್ನು ಕೂರಿಸಿದ್ದೇವೆ. ಎಲ್ಲಾ ಗೊಂದಲ ಕ್ಲಿಯರ್ ಆಗಿದೆ. ನಾಳೆ ನಾಡಿದ್ದು ಕಮೀಷನರ್‌ನ್ನು ಭೇಟಯಾಗಿ ರೂಟ್ ಮ್ಯಾಪ್ ವಿಚಾರವಾಗಿ ಫೈನಲ್ ಮಾಡ್ತೇವೆ. 7 ದಿನಗಳ ಕಾಲ ಗಣಪನನ್ನು ಕೂರಿಸಲಾಗುತ್ತೆ. ಪ್ರತಿ ದಿನವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇಂದು ಸಂಜೆ 7 ಗಂಟೆಗೆ ಪೂಜೆ ಮಾಡಿ ಪ್ರಸಾದ ವಿತರಣೆ ಮಾಡ್ತೆವೆ. ಗಣಪತಿ ವಿಸರ್ಜನೆಯ ದಿನ 100 ಕ್ಕೂ ಹೆಚ್ಚು ಸಮಿತಿಗಳು ಕೈ ಜೋಡಿಸಲಿವೆ. ಏಳನೇ ದಿನ ದೊಡ್ಡ ಮಟ್ಟದಲ್ಲಿ ಮೆರವಣಿಗೆ ಮಾಡಿ, ವಿಸರ್ಜನೆ ಮಾಡ್ತೆವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:36 pm, Sun, 4 September 22