ಹಾವೇರಿಯಲ್ಲಿ ಪಟಾಕಿ ದುರಂತ: ಮೃತ ನಾಲ್ವರ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ ನೀಡಿದ ಮಾಜಿ ಸಿಎಂ ಬೊಮ್ಮಾಯಿ

ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದ ಸಾತೇನಹಳ್ಳಿ ಬಳಿ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಸುಮಾರು ಮೂರು ಲೋಡ ಪಟಾಕಿ ತರಿಸಲಾಗಿತ್ತು. ಆಕಸ್ಮಿಕವಾಗಿ ಬಿದ್ದ ಒಂದೇ ಒಂದು ಬೆಂಕಿ ಕಿಡಿ ಇಡೀ ಗೋದಾಮು ಭಸ್ಮ ಮಾಡುವುದರೊಂದಿಗೆ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಮೃತ ನಾಲ್ವರ ಕುಟುಂಬಗಳಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ 1 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

ಹಾವೇರಿಯಲ್ಲಿ ಪಟಾಕಿ ದುರಂತ: ಮೃತ ನಾಲ್ವರ  ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ ನೀಡಿದ ಮಾಜಿ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2023 | 4:57 PM

ಹಾವೇರಿ, ಸೆಪ್ಟೆಂಬರ್​ 9: ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದ ಸಾತೇನಹಳ್ಳಿ ಬಳಿ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಸುಮಾರು ಮೂರು ಲೋಡ ಪಟಾಕಿ ತರಿಸಲಾಗಿತ್ತು. ವೆಲ್ಡಿಂಗ್ ಕಿಡಿ ಪಟಾಕಿ ಗೋದಾಮಿಗೆ ಸಿಡಿದು ಸುಮಾರು ಒಂದುವರೆ ಕೋಟಿ ರೂ. ಮೌಲ್ಯದ ಪಟಾಕಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗುವುದರೊಂದಿಗೆ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಮೃತ ನಾಲ್ವರ ಕುಟುಂಬಗಳಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (basavaraj bommai) 1 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

ಪರಿಹಾರ ವಿತರಣೆ ಮಾಡಿದ ಬಳಿಕ ಮಾಜಿ ಸಿಎಂ ಬೊಮ್ಮಾಯಿ ಮಾತನಾಡಿ, ಮೊನ್ನೆ ನಡೆದ ಪಟಾಕಿ ದುರಂತದಲ್ಲಿ ಅನಾಹುತ ಆಗಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಸ್ಟಾಕ್ ಮಾಡಿರುವ ಪಟಾಕಿ ಸ್ಪೋಟವಾಗಿದೆ. ಇದರಲ್ಲಿ ನಾಲ್ವರು ಸಾವಾಗಿದ್ದು ದುರ್ದೈವದ ಸಂಗತಿ. ಇಷ್ಟೊಂದು ದೊಡ್ಡ ಪ್ರಮಾಣದ ಪಟಾಕಿ ಸಂಗ್ರಹ ಮಾಡಿದ್ದು ತಪ್ಪು. ಮುಂಜಾಗ್ರತಾ ಮಾರ್ಗಗಳನ್ನು ಇಟ್ಟಿರಬೇಕು. ಆದರೆ ಯಾವುದು ಕಾಣುತ್ತಿಲ್ಲ. ಹಲವಾರು ಲೋಪದೋಷಗಳು ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು.

ಇದನ್ನೂ ಓದಿ: ಹಾವೇರಿ ಪಟಾಕಿ ಅವಘಡ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬಿಗಿಯಾದ ನಿಯಮಗಳನ್ನು ಜಿಲ್ಲಾಧಿಕಾರಿಗಳು ಪಾಲನೆ ಮಾಡಬೇಕು. ಕ್ರಮ ತೆಗೆದುಕೊಳ್ಳದೆ ಹೋದರೆ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ. ಗಾಯಗಳಾಗುವುದಕ್ಕಿಂತ ಸಾವುಗಳೇ ಇಂತಹ ಪ್ರಕರಣಗಳಲ್ಲಿ ಹೆಚ್ಚಾಗುತ್ತವೆ. ಘಟನೆಯಾದಾಗ ಒಂದೊಂದು ಲಕ್ಷ ಪರಿಹಾರ ಕೊಡುತ್ತೇವೆ ಅಂತಾ ಹೇಳಿದ್ದೆವು. ಮಾತು ಕೊಟ್ಟಂತೆ ಇಂದು ಪಕ್ಷದಿಂದ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.

ಘಟನೆ ಹಿನ್ನೆಲೆ

ಕುಮಾರ ಸಾತೇನಹಳ್ಳಿ ಎಂಬುವವನು ಪ್ರತಿವರ್ಷದಂತೆ ಈ ವರ್ಷವೂ ಗಣೇಶ್ ಹಬ್ಬಕ್ಕೆ ಸುಮಾರು ಒಂದುವರೆ ಕೋಟಿ ರುಪಾಯಿ ಮೌಲ್ಯದ ಪಟಾಕಿ ತರಿಸಿದ್ದರು. ಹಾವೇರಿ ಹೊರವಲಯದಲ್ಲಿರುವ ಗೋದಮಿನಲ್ಲಿ ಸುಮಾರು ಮೂರು ಲೋಡ ಪಟಾಕಿ ತರಿಸಿದ್ದ. ಮದ್ಯಾಹ್ನ 12 ಗಂಟೆಗೆ ಸುಮಾರಿಗೆ ಅಂಗಡಿಯ ಗೇಟ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಆ ವೇಳೆಯಲ್ಲಿ ವೆಲ್ಡಿಂಗ್ ಕಿಡಿ ಪಟಾಕಿ ಗೋದಾಮು ಸಿಡಿದು ಬೆಂಕಿ ಹತ್ತಿಕೊಂಡಿತ್ತು.

ಅಲ್ಲಿ ಕೆಲಸ ಮಾಡುತ್ತಿದ್ದ ವಾಸೀಮ್​ನಿಗೆ (32) ಪಟಾಕಿ ಶಬ್ದ ಕೇಳುತ್ತಿದ್ದಂತೆ. ಕಟ್ಟಡದ ಮೇಲಿನಿಂದ ಬಿದ್ದು ಬೆನ್ನು ಮುರಿದುಕೊಂಡಿದ್ದಾನೆ. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಏಕಾಏಕಿ ಪಟಾಕಿ ಗೋದಾಮಿನಲ್ಲಿ ಬೆಂಕಿ ಹೆಚ್ಚಾಗಿದ್ದು, ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಸುಮಾರು 4 ಬೈಕ್​ಗಳು ಸುಟ್ಟು ಭಸ್ಮವಾಗಿದ್ದವು. ಸುಮಾರು ಒಂದುವರೆ ಕೋಟಿ ರೂ. ಮೌಲ್ಯದ ಪಟಾಕಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.