ವಿಜಯಪುರ: ಇಂದಿನಿಂದ ರಾಜ್ಯಪಾಲರ ಜಿಲ್ಲಾ ಪ್ರವಾಸ; ಬೆಳಿಗ್ಗೆ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ 2 ದಿನ ಪ್ರವಾಸ ಕೈಗೊಳ್ಳಲಿದ್ದು, ಇಂದು ಸಂಜೆ 4.25ಕ್ಕೆ ರಾಜ್ಯಪಾಲರು ಗೋಲಗುಮ್ಮಟ ವೀಕ್ಷಿಸಲಿದ್ದಾರೆ. ಬಳಿಕ ಸಂಜೆ 4.55ಕ್ಕೆ ಬಾರಾಕಮಾನ್ ಸ್ಮಾರಕ ವೀಕ್ಷಿಸಲಿದ್ದು, ಸಂಜೆ 5.55ಕ್ಕೆ ಬಾರಾಕಮಾನ್​ನಿಂದ ಗವರ್ನರ್​ ತೆರಳಲಿದ್ದಾರೆ.

ವಿಜಯಪುರ: ಇಂದಿನಿಂದ ರಾಜ್ಯಪಾಲರ ಜಿಲ್ಲಾ ಪ್ರವಾಸ; ಬೆಳಿಗ್ಗೆ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Edited By:

Updated on: Nov 08, 2021 | 11:42 AM

ವಿಜಯಪುರ: ಇಂದು ಮತ್ತು ನಾಳೆ ವಿಜಯಪುರ ಜಿಲ್ಲೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಲಿದ್ದಾರೆ. ರಾಜ್ಯಪಾಲರು ಇಂದಿನಿಂದ (ನವೆಂಬರ್ 8) ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಬೆಳಗ್ಗೆ 10.45ಕ್ಕೆ ಬೆಂಗಳೂರಿನಿಂದ ಕಲಬುರಗಿಗೆ ವಿಮಾನದ ಮೂಲಕ ಪ್ರಯಾಣ ಮಾಡಲಿದ್ದಾರೆ. ಬಳಿಕ ಕಲಬುರಗಿಯಿಂದ ಮಧ್ಯಾಹ್ನ 3.40ಕ್ಕೆ ವಿಜಯಪುರಕ್ಕೆ ಆಗಮಿಸಲಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ 2 ದಿನ ಪ್ರವಾಸ ಕೈಗೊಳ್ಳಲಿದ್ದು, ಇಂದು ಸಂಜೆ 4.25ಕ್ಕೆ ರಾಜ್ಯಪಾಲರು ಗೋಲಗುಮ್ಮಟ ವೀಕ್ಷಿಸಲಿದ್ದಾರೆ. ಬಳಿಕ ಸಂಜೆ 4.55ಕ್ಕೆ ಬಾರಾಕಮಾನ್ ಸ್ಮಾರಕ ವೀಕ್ಷಿಸಲಿದ್ದು, ಸಂಜೆ 5.55ಕ್ಕೆ ಬಾರಾಕಮಾನ್​ನಿಂದ ಗವರ್ನರ್​ ತೆರಳಲಿದ್ದಾರೆ.

ಇಂದು ಬೆಳಿಗ್ಗೆ 10 ರಿಂದ ಸಾಯಂಕಾಲ 6ರವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕ್ಕಮಹಾದೇವಿ ಮಹಿಳಾ ವಿವಿ ವಸತಿ ನಿಲಯದಲ್ಲಿ ರಾಜ್ಯಪಾಲರು ವಾಸ್ತವ್ಯ ಹೂಡಲಿದ್ದಾರೆ.

ನಾಳೆ (ನವೆಂಬರ್ 9) ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರು ಭಾಗಿಯಾಗಲಿದ್ದಾರೆ. ಘಟಿಕೋತ್ಸವ ಅಧ್ಯಕ್ಷತೆ ವಹಿಸುವ ಥಾವರ್ ಚಂದ್ ಗೆಹ್ಲೋಟ್, ಕಾರ್ಯಕ್ರಮದ ಬಳಿಕ ರಸ್ತೆ ಮಾರ್ಗವಾಗಿ ಕಲಬುರಗಿಗೆ ಪ್ರಯಾಣಿಸಲಿದ್ದಾರೆ. ನಂತರ ಕಲಬುರಗಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

ಮಹಾನಗರ ಪಾಲಿಕೆಯಿಂದ ರಸ್ತೆ ದುರಸ್ತಿ ಕಾರ್ಯ
ಇಂದು ಹಾಗೂ‌ ನಾಳೆ ರಾಜ್ಯಪಾಲರ ವಿಜಯಪುರ ಜಿಲ್ಲಾ ಪ್ರವಾಸ ಇದ್ದು, ರಾಜ್ಯಪಾಲರ ಪ್ರವಾಸ ಹಿನ್ನಲೆ ಗೋಲಗುಮ್ಮಟ ಹಾಗೂ‌ ಬಾರಾಕಮಾನ್ ಸ್ಮಾರಕಗಳಲ್ಲಿ ಮಹಾನಗರ ಪಾಲಿಕೆಯಿಂದ ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿದೆ. ತೆಗ್ಗು ಗುಂಡಿಗಳೇ ತುಂಬಿದ್ದ ರಸ್ತೆಗಳಿಗೆ ಶುಕ್ರದೆಸೆ ಬಂದಿದ್ದು, ಹದಗೆಟ್ಟಿದ್ದ ರಸ್ತೆಗಳು ರಾತ್ರೋರಾತ್ರಿ ರಿಪೇರಿ ಮಾಡಲು ಶುರು ಮಾಡಿದ್ದಾರೆ. ರಾಜ್ಯಪಾಲರ‌ ಆಗಮನ ಹಿನ್ನಲೆ ರಾತ್ರೋರಾತ್ರಿ ಗೋಳಗುಮ್ಮಟ ಮಾರ್ಗದ ರಸ್ತೆ ಡಾಂಬರಿಕರಣ ಆರಂಭವಾಗಿದೆ. ಇಂದು ಸಾಯಂಕಾಲ 4.25ಕ್ಕೆ ವಿಜಯಪುರ ನಗರದ ಗೋಳಗುಮ್ಮಟ ಹಾಗೂ ಬಾರಾಕಮಾನ್ ಅನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಕ್ಷಿಸಲಿದ್ದಾರೆ.

ಇದನ್ನೂ ಓದಿ:

ಇಂದಿನಿಂದ ಸಿಎಂ ಬೊಮ್ಮಾಯಿ ಜಿಲ್ಲಾ ಪ್ರವಾಸ; ಬೆಳಗಾವಿಯಲ್ಲಿ ತಟ್ಟಲಿದೆ ರೈತರ ಪ್ರತಿಭಟನೆಯ ಬಿಸಿ!

CM Basavaraj Bommai: ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರ ಜೊತೆ ನಾಡದೇವತೆ ಚಾಮುಂಡಿ ದರ್ಶನ

Published On - 8:57 am, Mon, 8 November 21