ವಿಜಯಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಿಂದಗಿ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯ ಪ್ರಚಾರದಲ್ಲಿ ಸತತವಾಗಿ ತೊಡಗಿಕೊಂಡಿದ್ದಾರೆ. ನಿರಂತರ ಪ್ರಚಾರದಿಂದ ಬಳಲಿರುವ ಅವರು, ಇದೀಗ ಫಿಸಿಯೋಥೆರಪಿ ಹಾಗೂ ಮಸಾಜ್ ಟ್ರೀಟ್ಮೆಂಟ್ ಮೊರೆ ಹೋಗಿದ್ದಾರೆ. ಮಂಡಿನೋವು, ಸೊಂಟ ನೋವು ಸಮಸ್ಯೆಗೆ ಮಾಜಿ ಪ್ರಧಾನಿ ಚಿಕಿತ್ಸೆ ಪಡೆದಿದ್ದಾರೆ. ವಿಜಯಪುರ ನಗರದ ವೈದ್ಯ ಡಾ. ಬಾಬು ಅವರು ಚಿಕಿತ್ಸೆ ನೀಡುತ್ತಿದ್ದಾರೆ. ನಿನ್ನೆ (ಅಕ್ಟೋಬರ್ 27) ಪ್ರಚಾರದ ವೇಳೆ ಬೈಕ್ ಮೇಲೆ ಹತ್ತಿ ದೇವೇಗೌಡರು ಪ್ರಚಾರ ನಡೆಸಿದ್ದರು. ದೇವೇಗೌಡರು ಕಳೆದ 10 ದಿನಗಳಿಂದ ಪಿಜಿಯೋಥೆರಪಿ ಹಾಗೂ ಮಸಾಜ್ ಮೊರೆ ಹೋಗಿದ್ದು, ದಿನಕ್ಕೆ ಎರಡು ಬಾರಿ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಡಾ.ಬಾಬು ಚಿಕಿತ್ಸೆ ನೀಡುತ್ತಿದ್ದಾರೆ.
2023 ಚುನಾವಣೆಯಲ್ಲಿ ಇರ್ತೀನೋ ಗೊತ್ತಿಲ್ಲ; ಜೀವನದ ಅಂತ್ಯದಲ್ಲಿ ಜೆಡಿಎಸ್ಗೆ ಬೆಂಬಲ ನೀಡಿ: ಹೆಚ್ಡಿ ದೇವೇಗೌಡ
ನಾನು ಮುಂದಿನ ಚುನಾವಣೆಗೆ ಭಾಷಣ ಮಾಡ್ತೀನೋ ಗೊತ್ತಿಲ್ಲ. 2023ರ ಚುನಾವಣೆಯಲ್ಲಿ ನಾನು ಇರ್ತಿನೋ ಇಲ್ವೊ ಗೊತ್ತಿಲ್ಲ. ನನ್ನ ಜೀವನದ ಅಂತ್ಯದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲವನ್ನ ನೀಡಿ ಎಂದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಭಾಷಣ ಮಾಡುತ್ತಾ ನಿನ್ನೆ (ಅಕ್ಟೋಬರ್ 27) ನುಡಿದಿದ್ದರು. ಟೀಕೆ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ನವರ ಮಾತಿಗೆ ಯಾವುದೇ ಮನ್ನಣೆ ಕೊಡಬೇಕಿಲ್ಲ ಎಂದು ಅವರು ಹೇಳಿಕೆ ನೀಡಿದ್ದರು.
ಕಾಂಗ್ರೆಸ್, ಬಿಜೆಪಿಯವರು ಹಣ ಹಂಚಲು ಬರುತ್ತಾರೆ: ಹೆಚ್ಡಿ ಕುಮಾರಸ್ವಾಮಿ ಹೇಳಿಕೆ
ಅಕ್ಟೋಬರ್ 30 ರಂದು ವಿಜಯಪುರ ಜಿಲ್ಲೆ ಸಿಂದಗಿ ಉಪಚುನಾವಣೆ ನಡೆಯಲಿದೆ. ನಾಳೆಯಿಂದ ಹಣ ಹಂಚಲು ಶುರು ಮಾಡುತ್ತಾರೆ. ಕಾಂಗ್ರೆಸ್, ಬಿಜೆಪಿಯವರು ಹಣ ಹಂಚಲು ಆರಂಭಿಸ್ತಾರೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳೋಕೆ ಏನೂ ಇಲ್ಲ. ಹೀಗಾಗಿ ಹಣ ಹಂಚಿ ಮತ ಕೇಳಲು ನಿಮ್ಮ ಬಳಿ ಬರ್ತಾರೆ ಎಂದು ಸಿಂದಗಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ನಿನ್ನೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಇಬ್ಬರು ಆರೋಪಿಗಳು ಅರೆಸ್ಟ್!
Published On - 9:50 am, Thu, 28 October 21