ರಾಜ್ಯ ಸರ್ಕಾರ ಜಾರಿ ಮಾಡಿರೋ ಉಚಿತ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ ಹಾಗೂ ಗೃಹ ಲಕ್ಷ್ಮೀ ಯೋಜನೆ ಹೆಚ್ಚು ಸುದ್ದಿಯಲ್ಲಿದೆ. ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಉಚಿತ ಅಕ್ಕಿ ವಿತರಣೆ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಮಾಸಿಕ ಸಹಾಯ ಧನ ನೀಡಲು ಸರ್ಕಾರ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಉಚಿತ ವಿದ್ಯುತ್ ಯೋಜನೆ (grihashakti scheme) ಫಲಾನುಭವಿಗಳಾಗಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಇಷ್ಟರ ಜೊತೆಗೆ ಹೆಚ್ಚಿನ ವಿದ್ಯುತ್ ಬಿಲ್ ಬಂದಿದೆ ಎಂಬ ಮಾತುಗಳು ಕೇಳಿ ಬಂದಿವೆ. ನಿಗದಿತವಾಗಿ ಬರುವ ಬಿಲ್ ಗಿಂತ ಈಗ ಹೆಚ್ಚು ಮೊತ್ತದ ವಿದ್ಯುತ್ ಬಿಲ್ ಬಂದಿದೆ ಎಂದು ಜನರು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.
ಮಹಿಳಾ ವಿವಿಗೂ ತಟ್ಟಿದ ಹಚ್ಚಿನ ವಿದ್ಯುತ್ ಬಿಲ್ ಬಿಸಿ:
ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವೂ ಆಗಿರೋ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೂ (Karnataka State Akkamahadevi Women’s University) ವಿದ್ಯುತ್ ಶಾಕ್ ತಾಗಿದೆ. 110 ಕ್ಕೂ ಆಧಿಕ ಎಕರೆ ವಿಸ್ತಾರದ ಮಹಿಳಾ ವಿವಿ ಕ್ಯಾಂಪಸ್ ಹಲವಾರು ಕಟ್ಟಡಗಳನ್ನು ಹೊಂದಿದೆ. ವಿವಿ ಆವರಣದಲ್ಲಿ ಸೋಲಾರ್ ವಿದ್ಯುತ್ ಸೌಲಭ್ಯವೂ ಇದೆ. ಇಷ್ಟೆಲ್ಲಾ ಇದ್ದರೂ ಸಹ ಮೇ ತಿಂಗಳಿನ ವಿದ್ಯುತ್ ಬಿಲ್ ನೋಡಿ ಸ್ವತಃ ಕುಲಪತಿಗಳೆ ಶಾಕ್ ಆಗಿದ್ದಾರೆ. ಕಾರಣ ಈ ಬಾರಿ 5 ಲಕ್ಷ ರೂಪಾಯಿಗೂ ಅಧಿಕ ಬಿಲ್ ಬಂದಿದೆ. ಈ ಬಿಲ್ ಕಂಡು ಸ್ವತಃ ಕುಲಪತಿಗಳು ಹಾಗೂ ಆಧಿಕಾರಿಗಳು ಶಾಕ್‌ಗೆ ಒಳಗಾಗಿದ್ದಾರೆ.
ಬಿಲ್ ನಲ್ಲಿ ವ್ಯತ್ಯಾಸ: ವಿಜಯಪುರ ನಗರದ ಹೊರ ಭಾಗದ ತೊರವಿ ಗ್ರಾಮದ ಬಳಿ ದೊಡ್ಡ ಕ್ಯಾಂಪಸ್ ಹೊಂದಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್ 3,39,313 ರೂಪಾಯಿ ಬಂದಿತ್ತು. ಮೇ ತಿಂಗಳ ಬಿಲ್ 5,06,302 ಲಕ್ಷ ರೂಪಾಯಿ ಬಿಲ್ ಬಂದಿದೆ. ಇದು ವಿವಿ ಆಧಿಕಾರಿ ವರ್ಗಕ್ಕೆ ಹಾಗೂ ವಿಸಿ ಅವರಿಗೆ ವಿವಿ ಆಡಳಿತ ಮಂಡಳಿ ಅಚ್ಚರಿಗೆ ಕಾರಣವಾಗಿದೆ. ವಿವಿ ಆವರಣದಲ್ಲಿ ಸೋಲಾರ್ ವಿದ್ಯುತ್ ಸೌಲಭ್ಯವಿದೆ. ಅದನ್ನೇ ಗರಿಷ್ಟ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳುತ್ತೇವೆ. ಆದರೂ ಸಹ ಮೇ ತಿಂಗಳಿನಲ್ಲಿ ಹೆಚ್ಚಿನ ವಿದ್ಯುತ್ ಬಿಲ್ ಬಂದಿದ್ದು ಶಾಕ್ ನೀಡಿದೆ ಎಂದು ಆಧಿಕಾರಿಗಳು ಹೇಳಿದ್ದಾರೆ.
ವಿದ್ಯುತ್ ಬಿಲ್ ಮಿತಿಮೀರಿ ಬಂದಿರುವುದು ಹೇಗೆ:
ಜೂನ್ ತಿಂಗಳ ಬಿಲ್ ವೀಕ್ಷಿಸಿದರೆ ಹಲವು ಏರಿಕೆಗಳು ಕಂಡುಬಂದಿವೆ. ಮೊದಲು ಒಂದು ಕೆವಿ ವ್ಯಾಟ್‌ಗೆ ನಿಗದಿತ ಶುಲ್ಕ 260 ರೂಪಾಯಿ ಇದ್ದಿದ್ದು ಈಗ ಅದನ್ನು 300 ರೂಪಾಯಿಗೆ ಏರಿಸಲಾಗಿದೆ. ನಿಗದಿತ ಸ್ಲ್ಯಾಬ್ ಮೌಲ್ಯವೂ ಯೂನಿಟ್‌ಗೆ 7.50 ರೂಪಾಯಿಗೆ ಏರಿದೆ. ಜೊತೆಗೆ ಎಫ್‌ಎಸಿ ದರವನ್ನೂ ಯೂನಿಟ್‌ಗೆ 2.55 ರೂಪಾಯಿಗೆ ಏರಿಸಲಾಗಿದೆ. ಇದೆಲ್ಲದರ ಪರಿಣಾಮ 5,06,302 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಮಹಿಳಾ ವಿವಿಗೆ ಬಂದಿದೆ.
ಮಹಿಳಾ ವಿಶ್ವವಿದ್ಯಾಲಯ ದೊಡ್ಡ ಕ್ಯಾಂಪಸ್ ಹೊಂದಿದೆ. ನಮ್ಮಲ್ಲಿ ಸೋಲಾರ ಪ್ಯಾನೆಲ್ ನಿಂದಲೂ ವಿದ್ಯುತ್ ಪಡೆಯುತ್ತೇವೆ. ಜೊತೆಗೆ ಹೆಸ್ಕಾಂನಿಂದ ವಿದ್ಯುತ್ ಪಡೆಯುತ್ತೇವೆ. ಸೋಲಾರ್ ಮೂಲಕ ನೈಸರ್ಗಿಕವಾಗಿ ವಿದ್ಯುತ್ ಪಡೆದು ಬಳಸಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳು 2-3 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಈ ಬಾರಿ 5,63,302 ಲಕ್ಷ ರೂಪಾಯಿ ಬಿಲ್ ಬಂದಿದೆ. ಸೋಲಾರ್ ಕಂಪನಿ ಮತ್ತು ಹೆಸ್ಕಾಂ ನಡುವೆ ಯಾವ ರೀತಿಯ ಒಪ್ಪಂದ ಆಗಿದೆ ಎನ್ನುವುದರ ಬಗ್ಗೆ ನಮ್ಮ ವಕೀಲರ ಬಳಿ ಕಾನೂನು ಸಲಹೆ ಪಡೆದುಕೊಂಡು ಮುಂದೆ ವಿದ್ಯುತ್ ಬಿಲ್ ತುಂಬುವ ಬಗ್ಗೆ ವಿಚಾರ ಮಾಡಲಾಗುವುದು ಎನ್ನುತ್ತಾರೆ ಬಿ ಎಸ್ ನಾವಿ, ರಿಜಿಸ್ಟ್ರಾರ್, ಮಹಿಳಾ ವಿವಿ.
ವಿಜಯಪುರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ