ವಿಜಯಪುರ, ನ.17: ಜಿಲ್ಲೆಯ ತಾಳಿಕೋಟೆ(Talikoti) ಪಟ್ಟಣದ ಕೆಂಬಾವಿ ಕಾಲೋನಿಯ ನಿವಾಸಿಗಳಾದ ಯುವಕ ಇಸಾಕ್ ಜನ್ನಳ್ಳಿ ಹಾಗೂ ಯುವತಿ ಸುಮಯ್ಯ ಡೋಣಿ ಎಂಬುವವರ ಮಧ್ಯೆ ಸ್ನೇಹ ಹುಟ್ಟಿ. ಅದು ಪ್ರೀತಿ(Love)ಯಾಗಿ ಬೆಳೆದು ಪರಸ್ಪರ ಇಷ್ಟಪಟ್ಟಿದ್ದರು. ಇವರ ಸಂಬಂಧಕ್ಕೆ ಯುವತಿ ಸುಮಯ್ಯಾ ಕುಟುಂಬದವರು ತೀವ್ರ ವಿರೋಧ ಮಾಡಿದ್ದರು. ಈ ಹಿನ್ನಲೆ ಇಸಾಕ್ ಹಾಗೂ ಸುಮಯ್ಯಾ ಮನೆ ಬಿಟ್ಟು, ಓಡಿ ಹೋಗಿ ಮುಸ್ಲಿಂ ಧರ್ಮದ ನಿಯಮಗಳಂತೆ ವಿಜಯಪುರದ ದರ್ಗಾವೊಂದರಲ್ಲಿ ನಿಖಾ(ಮದುವೆ) ಮಾಡಿಕೊಂಡಿದ್ದರು. ಇದು ಸುಮಯ್ಯಾ ಪೋಷಕರ ಪಿತ್ತನೆತ್ತಿಗೇರುವಂತೆ ಮಾಡಿದೆ. ಇದೀಗ ನಿಮ್ಮನ್ನು ಹಾಗೂ ಯುವಕ ಇಸಾಕ್ ಮನೆಯವರನ್ನು ಕೊಲೆ ಮಾಡುತ್ತೇವೆ ಎಂದು ಸುಮ್ಯಯಾ ಪೋಷಕರು ಬೆದರಿಕೆ ಹಾಕಿದ್ದಾರಂತೆ.
ಈ ವಿಚಾರವಾಗಿ ಇಸಾಕ್ ಮೇಲೆ ಸುಮಯ್ಯಾಳನ್ನು ಅಪಹರಣ ಮಾಡಿದ್ಧಾನೆಂದು ಯುವತಿಯ ಪೋಷಕರು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರಂತೆ. ತಾಳಿಕೋಟೆ ಪೊಲೀಸರಿದ ಇಸಾಕ್ ಕುಟುಂಬದವರಿಗೆ ಹಿಂಸೆ ಕೊಡಿಸುತ್ತಿದ್ದಾರೆಂದು ಇವರು ಆರೋಪ ಮಾಡಿದ್ದಾರೆ. ಹೀಗಾಗಿ ನಮಗೆ ರಕ್ಷಣೆಬೇಕೆಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಾರೆ. ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ನಾವುಗಳು, ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ. ನಮ್ಮ ಮನೆಯವರಿಂದ ನಮಗೆ ಜೀವ ಬೆದರಿಕೆ ಇದೆ ಎಂದು ಯುವತಿ ಆರೋಪ ಮಾಡಿದ್ದಾಳೆ.
ಇದನ್ನೂ ಓದಿ:ಅನೈತಿಕ ಸಂಬಂಧ; ಪ್ರೀತಿಸಿ ಮದುವೆಯಾದ ಹೆಂಡತಿಗೆ ಕಟ್ಟಿದ ಚಟ್ಟ, ಏನಿದು ಕಥೆ ಅಂತೀರಾ?ಈ ಸ್ಟೋರಿ ಓದಿ
ತಾಳಿಕೋಟೆಯ ಕೆಂಬಾವಿ ಕಾಲೋನಿಯಲ್ಲಿ ಇಸಾಕ್ ಅಜ್ಜ-ಅಜ್ಜಿ ಇರುತ್ತಾರಂತೆ. ಇವರ ಮನೆ ಎದುರಲ್ಲೇ ಸುಮಯ್ಯ ಮನೆ ಇದೆ. ಇಸಾಕ್ ಎಸ್‌ಎಸ್‌ಎಲ್‌ಸಿ ಫೇಲ್ ಆಗಿ ಮೆಕಾನಿಕಲ್ ಕೆಲಸ ಮಾಡುತ್ತಿದ್ದರೆ, ಇತ್ತ ಸುಮಯ್ಯ ಈಗಷ್ಟೇ ಭೀ ಪಾರ್ಮಸಿ ಓದಿ ಮುಗಿಸಿದ್ದು, ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದಾಳೆ. ಇಷ್ಟರ ಮಧ್ಯೆ ಇವರಿಬ್ಬರು ಮನೆಯಿಂದ ಓಡಿ ಹೋಗಿ ಮದುವೆಯಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಆದರೆ, ಯುವತಿ ಸುಮಯ್ಯಳ ಕುಟುಂಬದವರು ಇಸಾಕ್ ಬಡನನಾಗಿದ್ದು, ಗ್ಯಾರೇಜ್ ಕೆಲಸ ಮಾಡುತ್ತಾನೆ. ನಾವು ಶ್ರೀಮಂತರು ಎಂದು ಇವರಿಬ್ಬರ ಮದುವೆಗೆ ವಿರೋಧ ಮಾಡುತ್ತಿದ್ಧರಂತೆ. ಮೇಲಾಗಿ ಪ್ರಭಾವ ಉಳ್ಳವರಾಗಿದ್ದು, ಇಸಾಕ್ ಕುಟುಂಬದ ಮೇಲೆ ಒತ್ತಡ ಹಾಕಿ ಬೆದರಿಕೆ ಹಾಕುತ್ತಿದ್ದಾರಂತೆ. ಇದರಿಂದ ನಮಗೆ ರಕ್ಷಣೆ ಬೇಕು. ತಾಳಿಕೋಟೆ ಪೊಲೀಸರ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಎಸ್ಪಿ ಅವರಿಗೆ ಭೇಟಿಯಾಗಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ.
ಪ್ರೇಮಿಸಿ ಮದುವೆಯಾದ ಇಸಾಕ್ ಹಾಗೂ ಸುಮಯ್ಯ ವಯಸ್ಕರಾಗಿದ್ದು, ಎಸ್ಪಿ ಋಷಿಕೇಶ ಸೋನೆವಣೆ ಅವರು ಸಮಸ್ಯೆಯನ್ನು ಆಲಿಸಿದ್ದಾರೆ. ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದರ ಬಗ್ಗೆಯೂ ಮಾಹಿತಿ ಪಡೆದು ರಕ್ಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಈ ಕುರಿತು ಹೆಚ್ಚಿನ ಮಾಹಿತಿ ಹಾಗೂ ಹೇಳಿಕೆ ನೀಡದ ಅವರು, ಕಾನೂನು ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಒಂದೇ ಗ್ರಾಮ, ಒಂದೇ ಸಮುದಾಯದವರಾಗಿದ್ದರೂ ಸಹ ಬಡವ-ಶ್ರೀಮಂತ ಎಂಬ ಭಾವನೇ ಇಲ್ಲಿ ಪ್ರೇಮಿಗಳಿಗೆ ಸಮಸ್ಯೆಯನ್ನು ತಂದೊಡ್ಡಿದೆ. ಪೊಲೀಸರ ರಕ್ಷಣೆಯೇ ಹೊಸ ದಾಂಪತ್ಯಕ್ಕೆ ಕಾಲಿಟ್ಟವರಿಗೆ ಭರವಸೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ