20 ಸಾವಿರ ಬೆಟ್ಟಿಂಗ್ ಆಸೆಗಾಗಿ ಹುಚ್ಚು ಸಾಹಸಕ್ಕೆ ಕೈ ಹಾಕಿ ಪ್ರಾಣ ಕಳೆದುಕೊಂಡ ವ್ಯಕ್ತಿ; ಇದು ವ್ಯವಸ್ಥಿತ ಕೊಲೆ ಎಂದು ಕುಟುಂಬಸ್ಥರ ಆರೋಪ

| Updated By: ಆಯೇಷಾ ಬಾನು

Updated on: May 09, 2022 | 4:48 PM

ಪ್ರಕಾಶ ಹಾಗೂ ಸ್ನೇಹಿತರು ಕೆರೆಯನ್ನು ಈಜಿ ದಾಟಿದರೆ 20 ಸಾವಿರ ನೀಡೋದಾಗಿ ಬೆಟ್ಟಿಂಗ್ ಕಟ್ಟಿದರು. 20 ಸಾವಿರ ಬೆಟ್ಟಿಂಗ್ ಆಸೆಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರಕಾಶ ನೀರಿಗಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿ ಹಾಗೂ ಸರಿಯಾಗಿ ದಡ ಗುರುತಿಸಲಾಗದೆ ಕೈ ಸೋತು ಪ್ರಕಾಶ ನೀರು ಪಾಲಾಗಿದ್ದಾರೆ.

20 ಸಾವಿರ ಬೆಟ್ಟಿಂಗ್ ಆಸೆಗಾಗಿ ಹುಚ್ಚು ಸಾಹಸಕ್ಕೆ ಕೈ ಹಾಕಿ ಪ್ರಾಣ ಕಳೆದುಕೊಂಡ ವ್ಯಕ್ತಿ; ಇದು ವ್ಯವಸ್ಥಿತ ಕೊಲೆ ಎಂದು ಕುಟುಂಬಸ್ಥರ ಆರೋಪ
ಘಟನೆ ನಡೆದ ಸ್ಥಳ
Follow us on

ವಿಜಯಪುರ: 20 ಸಾವಿರ ಬೆಟ್ಟಿಂಗ್ ಆಸೆಗಾಗಿ ಹುಚ್ಚು ಸಾಹಸಕ್ಕೆ ಕೈ ಹಾಕಿ ವ್ಯಕ್ತಿ ನೀರು ಪಾಲಾದ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದಲ್ಲಿ ನಡೆದಿದೆ. ದ್ಯಾಬೇರಿ ಗ್ರಾಮದ ಪ್ರಕಾಶ್ ಮೋರೆ (45) ಮೃತ ವ್ಯಕ್ತಿ. ನಿನ್ನೆ ಸಾಯಂಕಾಲ ದ್ಯಾಬೇರಿ ಗ್ರಾಮದ ಬಳಿಯಿರುವ ಕೆರೆಯಲ್ಲಿ ಈಜಲು ಪ್ರಕಾಶ ಬೆಟ್ಟಿಂಗ್ ಕಟ್ಟಿದ್ದರು. ನಿನ್ನೆ ಮಧ್ಯಾಹ್ನ ಪಾರ್ಟಿ ಮಾಡಿ ಮದ್ಯ ಸೇವಿಸಿ ಕೆರೆ ಬಳಿ ಬಂದಿದ್ದ ಪ್ರಕಾಶ ಹಾಗೂ ಸ್ನೇಹಿತರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೆರೆಯನ್ನು ಈಜಿ ದಾಟಿದರೆ 20 ಸಾವಿರ ನೀಡೋದಾಗಿ ಬೆಟ್ಟಿಂಗ್ ಕಟ್ಟಿದರು. 20 ಸಾವಿರ ಬೆಟ್ಟಿಂಗ್ ಆಸೆಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರಕಾಶ ನೀರಿಗಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿ ಹಾಗೂ ಸರಿಯಾಗಿ ದಡ ಗುರುತಿಸಲಾಗದೆ ಕೈ ಸೋತು ಪ್ರಕಾಶ ನೀರು ಪಾಲಾಗಿದ್ದಾರೆ. ಪ್ರಕಾಶ ನೀರು ಪಾಲಾಗುತ್ತಿದ್ದಂತೆ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಇಂದು ಕೆರೆಯಿಂದ ಪ್ರಕಾಶ ಶವ ಹೊರತೆಗೆದಿದ್ದಾರೆ. ಆದರೆ ಮೃತ ಪ್ರಕಾಶ ಪತ್ನಿ ಹಾಗೂ ಕುಟುಂಬದವರು ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪ ಮಾಡಿದ್ದಾರೆ. ಗಣಪತಿ ಧನವಡೆ, ಸಂತೋಷ ಕಂಬಾರ, ಬಾಹುಸಾಬ್ ಸಿಂದೆ, ಬಸವರಾಜ‌ ನಾಟಿಕಾರ ಎಂಬುವವರ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸ್ ತನಿಖೆಯ ಬಳಿಕ ಸತ್ಯಾಂಶ ತಿಳಿದು ಬರಲಿದೆ.

ಮನೆಯೊಂದರಲ್ಲಿ ತಾಯಿ, ಮಗಳ ಶವ ಪತ್ತೆ
ಉಡುಪಿಯ ಆತ್ರಾಡಿ ಮದಗದಲ್ಲಿ ತಾಯಿ, ಮಗಳ ಶವ ಪತ್ತೆಯಾಗಿದೆ. ತಾಯಿ ಚೆಲುವಿ ಮತ್ತು 10 ವರ್ಷದ ಪ್ರಿಯಾ ಮೃತರು. ಮೃತರ ಬಾಯಿಯಲ್ಲಿ ರಕ್ತದ ಕಲೆ ಕಂಡುಬಂದಿದೆ. ತಾಯಿ, ಮಗಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮನೆಯ ಕೋಣೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ತಾಯಿ-ಮಗಳು ಶವ ಸಿಕ್ಕಿದೆ. ಮೃತ ತಾಯಿ ಚೆಲುವಿ ಮಣಿಪಾಲ ಖಾಸಗಿ ಸಂಸ್ಥೆಯಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡುತ್ತಿದ್ದರು. ಸ್ಥಳದಲ್ಲಿ ಶ್ವಾನದಳ, ಬೆರಳಚ್ಚು ತಜ್ಞರು ಮತ್ತು ಎಫ್ಎಸ್ಎಲ್ ತಂಡ ತನಿಖೆ ನಡೆಸುತ್ತಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಭೇಟಿ ನೀಡಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ

ಶೋಕಿ ಮೋಜು‌ ಮಸ್ತಿಗಾಗಿ ಬೈಕ್ ಕಳ್ಳತನ ಮಾಡ್ತಿದ್ದವರು ಅರೆಸ್ಟ್
ಬೆಂಗಳೂರು: ಮೋಜು‌ ಮಸ್ತಿಗಾಗಿ ಬೈಕ್​ಗಳನ್ನ ಕದ್ದು ಮಾರುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರಂ ಪೊಲೀಸರು 9 ಲಕ್ಷ ರೂಪಾಯಿ ಮೌಲ್ಯದ 17 ಬೈಕ್​ಗಳನ್ನು ಜಪ್ತಿ ಮಾಡಿದ್ದಾರೆ.

Published On - 4:33 pm, Mon, 9 May 22