ಕರೆಂಟ್​ ಶಾಕ್​ ಹೊಡೆದು ಸ್ವಾಧೀನ ಕಳೆದುಕೊಂಡ ನವಿಲು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಡಿರುವ ಮನವಿ ಕರುಣಾಜನಕವಾಗಿದೆ

ಅಷ್ಟೆಲ್ಲಾ ಒಬ್ಬಂಟಿಯಾದ ನನಗೆ ಬೇಸರವಾಗಬಾರೆಂದು ತಮ್ಮ ಜಮೀನಿನ ಕೊನೆಯ ಭಾಗದಲ್ಲಿ ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಅನತಿ ದೂರದಲ್ಲಿ ಓಡಾಡೋ ನಮ್ಮ ಬಂಧುಗಳು ಗೆಳೆಯರು ನನ್ನ ನೋಡಿ ಓಡೋಡಿ ಬರುತ್ತಾರೆ. ನನಗೆ ಧೈರ್ಯ ತುಂಬುತ್ತಾರೆ. ನನ್ನವರನ್ನು ಭೇಟಿಯಾದಾಗ ನನಗೂ ತುಸು ನೆಮ್ಮದಿ ಖುಷಿ ಸಿಗುತ್ತದೆ.

ಕರೆಂಟ್​ ಶಾಕ್​ ಹೊಡೆದು ಸ್ವಾಧೀನ ಕಳೆದುಕೊಂಡ ನವಿಲು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಡಿರುವ ಮನವಿ ಕರುಣಾಜನಕವಾಗಿದೆ
ಕರೆಂಟ್​ ಶಾಕ್​ ಹೊಡೆದು ಸ್ವಾಧೀನ ಕಳೆದುಕೊಂಡ ನವಿಲು
Follow us
ಸಾಧು ಶ್ರೀನಾಥ್​
|

Updated on:May 22, 2023 | 12:02 PM

ನಮ್ಮ ದೇಶದ ರಾಷ್ಟ್ರಪಕ್ಷಿ ನವಿಲು ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಇಂಥ ನವಿಲು ಇದೀಗ ಅಪಾಯದ ಅಂಚಿನಲ್ಲಿದೆ. ರಾಷ್ಟ್ರಪಕ್ಷಿಯ ಸಂತತಿ ಕ್ಷೀಣಿಸುತ್ತಾ ಸಾಗಿದೆ. ಕಾನೂನುಬಾಹಿರವಾಗಿ ನವಿಲುಗಳನ್ನು ಬೇಟೆಯಾಡಿ ಮಾಂಸಕ್ಕಾಗಿ ಬಳಕೆ ಮಾಡಲಾಗುತ್ತಿದೆ. ನವಿಲು ಬೇಟೆಯಾಡುವುದನ್ನು ನಿಷೇಧಿಸಲಾಗಿದೆಯಾದರೂ ಅಕ್ರಮವಾಗಿ ನವಿಲುಗಳ ಮಾರಣಹೋಮ ನಡೆಯುತ್ತಿದೆ. ನವಿಲುಗಳ ರಕ್ಷಣಾ ಕಾರ್ಯವಾಗಬೇಕಿದೆ. ಇತ್ತ ವಿಜಯಪುರ ಜಿಲ್ಲೆಯಲ್ಲಿಯೂ ನವಿಲುಗಳ ಆವಾಸ ಸ್ಥಾನಗಳಿವೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನವಿಲುಗಳ ಗುಂಪುಗಳನ್ನು ಕಾಣುತ್ತೇವೆ. ಇಂಥ ಗುಂಪಿನಲ್ಲಿರೋ ನವಿಲೊಂದು ತೊಂದರಗೆ ಸಿಕ್ಕಿದ್ದು ತನ್ನ ಅಳಲನ್ನು ತೋಡಿಕೊಂಡಿದೆ.

ನನ್ನ ಹೆಸರು ನವಿಲು, ಎಲ್ಲರೂ ನನ್ನನ್ನು ಸಾವಿರ ಕಣ್ಣಿನ ಪಕ್ಷಿ, ಮಯೂರಿ, ಮೋರ ಎಂದು ಕರೆಯುತ್ತಾರೆ. ನಾನು ಈ ದೇಶದ ರಾಷ್ಟ್ರಪಕ್ಷಿ ಎಂಬುದು ನನಗೆ ಹೆಮ್ಮೆಯ ವಿಚಾರ. ವಿಜಯಪುರ ಜಿಲ್ಲೆಯಲ್ಲಿ ನಮ್ಮ ಸಂತತಿ ಹೆಚ್ಚಾಗಿದೆ. ಇಲ್ಲಿನ ವಾತಾವರಣ ನಮಗೆ ಹೇಳಿ ಮಾಡಿಸಿದ ಹಾಗಿದೆ. ಹಿಂಡುಹಿಂಡಾಗಿ ನಾವು ಓಡಾಡುತ್ತಾ, ಎಂಜಾಯ್ ಮಾಡುತ್ತಾ ಇದ್ದೇವೆ.

ವಿಜಯಪುರ ತಾಲೂಕಿನ ಮಖಣಾಪೂರ ಹಾಗೂ ಸುತ್ತಮುತ್ತಮಲ ಗ್ರಾಮಗಳ ಜಮೀನುಗಳಲ್ಲಿ-ಹಳ್ಳಕೊಳ್ಳಗಳಲ್ಲಿ ಓಡಾಡುತ್ತಾ ಆರಾಮಾಗಿದ್ದೇವೆ. ಆದರೆ ಅದ್ಯಾವ ಕೆಟ್ಟ ದೃಷ್ಟಿ ನಮ್ಮ ಮೇಲೆ ಬಿದ್ದಿತೋ ಗೊತ್ತಿಲ್ಲಾ. ಅದು ಕಳೆದ 20 ದಿನಗಳ ಹಿಂದಿನ ಮಾತು. ಅಂದು ಮೋಡಗಟ್ಟಿದ ವಾತಾವರಣ ಉಂಟಾಗಿತ್ತು. ಮಳೆ ಬರೋ ಮುನ್ಸೂಚನೆಯಿತ್ತು. ನನಗೋ ರೆಕ್ಕೆ ಬಿಚ್ಚಿ ಕುಣಿಯೋ ಆಸೆ, ನನ್ನ ಸಂಗಾತಿಯೊಂದಿಗೆ ಬಯಲಿಗೆ ಬಂದು ಮುಗಿಲು ನೋಡೋ ಆಸೆಯಿಂದ ವಿದ್ಯುತ್ ಪ್ರವಹಕ (ಟ್ರಾನ್ಸ್​​ಫಾರ್ಮರ್​) ಮೇಲೇರಿ ನಿಂತಿದ್ದೆ.

ಸಣ್ಣಗೆ ಮಳೆಯಾದ ಕಾರಣ ಒದ್ದೆಯಾಗಿ ಟಿಸಿಯಿಂದ ಕರೆಂಟ್ ಶಾಕ್ ಹೊಡೆಯಿತು. ನನ್ನಾಕೆ ಶಾಕ್ ನಿಂದ ಉಸಿರು ಚೆಲ್ಲಿದಳು. ನಾನು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡು ಬಿದ್ದು ಬಿಟ್ಟೆ. ಇದನ್ನು ಕಂಡ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಗಿರಿಮಲ್ಲ ಪಾಟೀಲ್ ಹಾಗೂ ಇತರರು ಆಗಮಿಸಿ ನನಗೆ ಉಪಚರಿಸಿದರು. ಮೃತಪಟ್ಟಿದ್ದ ನನ್ನ ಸಂಗಾತಿಯ ಅಂತ್ಯಸಂಸ್ಕಾರ ಮಾಡಿ ಪಕ್ಷಿ ಪ್ರೇಮವನ್ನು ಮಾನವೀಯತೆಯನ್ನು ಮರೆದರು.

ಕರೆಂಟ್ ಶಾಕ್ ನಿಂದ ನನ್ನ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಎದ್ದು ಓಡಾಡಲೂ ಸಹ ಅಸಾಧ್ಯವಾಗಿ ಬಿಟ್ಟಿತ್ತು. ರೈತ ಗಿರಿಮಲ್ಲ ಪಾಟೀಲ್ ನನ್ನನ್ನು ಅವರ ಮನೆಯಲ್ಲಿಟ್ಟುಕೊಂಡು ಮಗುವಿನಂತೆ ಸಾಕಿ ಸಲಹುತ್ತಿದ್ದಾರೆ. ನನ್ನ ಪರಿಸ್ಥಿತಿ ಬಗ್ಗೆ ಅರಣ್ಯ ಇಲಾಖೆಯ ಆಧಿಕಾರಿಗಳಿಗೆ ಮಾಹಿತಿ ನೀಡಿದರೂ ಈವರೆಗೆ ಯಾವುದೇ ಅರಣ್ಯ ಇಲಾಖೆ ಆಧಿಕಾರಿಗಳು ಬಂದಿಲ್ಲಾ. ಕಾಟಾಚಾರಕ್ಕೆ ಎಂಬಂತೆ ವೈದ್ಯರೊಬ್ಬರು ಬಂದು ಹೋಗಿದ್ದಾರೆ. ಬಡ ರೈತ ಗಿರಿಮಲ್ಲ ಪಾಟೀಲ್ ನನ್ನ ಪಾಲಿಗೆ ದೇವರಾಗಿದ್ದಾರೆ. ಎದ್ದು ಓಡಾಡಲೂ ಆಗದ ನನ್ನನ್ನು ಗುಣಮುಖ ಮಾಡಲು ಹೋರಾಡುತ್ತಿದ್ದಾರೆ. ಓಡಾಡೋ ಶಕ್ತಿ ಕಳೆದುಕೊಂಡ ನಾನು ನಾಯಿ ನರಿ ಹಾಗೂ ಇತರೆ ಪ್ರಾಣಿಗಳಿಗೆ ಆಹಾರವಾಗಬಾರದೆಂದು ಜತನದಿಂದ ಕಾಪಾಡುತ್ತಿದ್ದಾರೆ.

1963 ರಲ್ಲಿ ಭಾರತ ಸರ್ಕಾರ ನನ್ನನ್ನು ರಾಷ್ಟ್ರೀಯ ಪಕ್ಷಿ ಎಂದು ಘೋಷಣೆ ಮಾಡಿದೆ. ಭಾರತದ ರಾಷ್ಟ್ರಪಕ್ಷಿ ಎಂಬ ಅಭಿಮಾನ ನಮಗಿದೆ. 1972 ರ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ನಮ್ಮನ್ನು ಬೇಟೆಯಾಡುವುದು, ಸಂತತಿ ನಾಶ ಮಾಡುವುದು ನಿಷೇಧ. ಕಾನೂನು ಇದ್ದರೂ ಸಹ ನಮ್ಮ ಸಂತತಿಗೆ ಮನುಕುಲ ವಿರೋಧಿಯೇ ಆಗಿದೆ. ಆದರೆ ಗಿರಿಮಲ್ಲ ಪಾಟೀಲ್ ಅಂಥವರು ನಮ್ಮನ್ನು ಉಳಿಸಿಲು ಮುಂದಾಗಿದ್ದು ಮೆಚ್ಚುಗೆಯ ಸಂಗತಿ.

ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ರಾಷ್ಟ್ರಪಕ್ಷಿಯಾದ ನನ್ನನ್ನು ಮನೆಯಲ್ಲಿ ಸಾಕುವುದು ಕಾನೂನುಬಾಹಿರವಾಗಿದೆ. ಈ ಕಾರಣದಿಂದ ಗಿರಿಮಲ್ಲ ಪಾಟೀಲ್ ಭಯದಲ್ಲೇ ನನಗೆ ಆಶ್ರಯ ನೀಡಿದ್ದಾರೆ. ಅರಣ್ಯಾಧಿಕಾರಿಗಳು ನನ್ನ ಮೇಲೆ ಕೇಸ್ ಹಾಕಿ ಕಾನೂನುಕ್ರಮ ತೆಗೆದುಕೊಂಡರೆ ಹೇಗೆ ಎಂದು ಭಯಗೊಂಡಿದ್ದಾರೆ. ಅಪಾಯದಲ್ಲಿರೋ ನನಗೆ ರಕ್ಷಣೆ ನೀಡಿರುವ ಗಿರಿಮಲ್ಲ ಪಾಟೀಲ್ ಗೆ ಅರಣ್ಯಾಧಿಕಾರಿಗಳ ಅಭಯ ನೀಡಬೇಕಿದೆ.

ಇಲ್ಲವೇ ಅಸ್ವಸ್ಥನಾಗಿರೋ ನನ್ನನ್ನು ಅವರ ಸುಪರ್ದಿಗೆ ತೆಗೆದುಕೊಳ್ಳಬೇಕಿದೆ. ಆದರೆ ಇದ್ಯಾವದರತ್ತ ಅರಣ್ಯಾಧಿಕಾರಿಗಳು ಗಮನ ಹರಿಸದೇ ಇರೋದು ನನಗೆ ನೋವು ಬೇಸರ ತರಿಸಿದೆ. ಗಾಯಗೊಂಡ ನನ್ನ ಆರೈಕೆ ಮಾಡುತ್ತಿರೋ ಗಿರಿಮಲ್ಲ ಪಾಟೀಲ್ ಅವರ ಕಾರ್ಯಕ್ಕೆ ಮಖಣಾಪೂರ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರೆಂಟ್ ಶಾಕ್ ನಿಂದ ಗಾಯಗೊಂಡ ನನ್ನನ್ನು ನಾಯಿ ನರಿಗಳಿಗೆ ಆಹಾರವನ್ನಾಗಿ ಮಾಡದೇ ರಕ್ಷಣೆ ನೀಡಿ ಉಟೋಪಚಾರ ಮಾಡುತ್ತಿರೋದಕ್ಕೆ ಗಿರಿಮಲ್ಲ ಅವರಿಗೆ ಭೇಷ್ ಎಂದಿದ್ಧಾರೆ.

ಅಷ್ಟೆಲ್ಲಾ ಒಬ್ಬಂಟಿಯಾದ ನನಗೆ ಬೇಸರವಾಗಬಾರೆಂದು ತಮ್ಮ ಜಮೀನಿನ ಕೊನೆಯ ಭಾಗದಲ್ಲಿ ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಅನತಿ ದೂರದಲ್ಲಿ ಓಡಾಡೋ ನಮ್ಮ ಬಂಧುಗಳು ಗೆಳೆಯರು ನನ್ನ ನೋಡಿ ಓಡೋಡಿ ಬರುತ್ತಾರೆ. ಹತ್ತಿರ ಬಂದು ನನ್ನ ಸ್ಥಿತಿ ಕಂಡು ಮರುಕ ಪಡುತ್ತಾರೆ. ನನಗೆ ಧೈರ್ಯ ತುಂಬುತ್ತಾರೆ. ನನ್ನವರನ್ನು ಭೇಟಿಯಾದಾಗ ನನಗೂ ತುಸು ನೆಮ್ಮದಿ ಖುಷಿ ಸಿಗುತ್ತದೆ.

ಸದ್ಯ ನಾನು ರೈತ ಗಿರಿಮಲ್ಲ ಪಾಟೀಲ್ ಅವರ ಬಳಿ ಸುರಕ್ಷತವಾಗಿದ್ದೇನೆ. ನನ್ನ ಸಾಕಿ ಸಲುಹಲು ಕಾನೂನು ಭಯ ಹೊಂದಿರೋ ಗಿರಿಮಲ್ಲ ಅವರಿಗೆ ಅರಣ್ಯಾಧಿಕಾರಿಗಳು ಸಾಥ್ ನೀಡಬೇಕಿದೆ. ಮುಂದಿನ ದಿನಗಳಲ್ಲಿ ನನ್ನ ಕಾಲುಗಳ ಸ್ವಾಧೀನ ಮರಳಿ ಬರೋ ವಿಶ್ವಾಸ ನನಗಿದೆ. ನಾನು ಸುಧಾರಿಸಿಕೊಂಡು ನಮ್ಮ ಬಳಗವನ್ನು ಸೇರಲು ಕಾತರದಿಂದ ಕಾಯುತ್ತಿದ್ದೇನೆ. ನನಗೆ ಉತ್ತಮ ಚಿಕಿತ್ಸೆ ನೀಡಿದರೆ ಬೇಗನೇ ಚೇತರಿಸಿಕೊಳ್ಳಬಹುದು. ನಮ್ಮನ್ನು ಬೇಟೆಯಾಡಿ ಅಟ್ಟಹಾಸ ಮೆರೆಯೋ ಮನುಷ್ಯರ ಮಧ್ಯೆ ಇರುವ ಗಿರಿಮಲ್ಲ ಹಾಗೂ ಇತರೆ ರೈತರಿಗೆ ನಾನು ಸದಾ ಋಣಿಯಾಗಿರುವೆ.

ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ

Published On - 12:00 pm, Mon, 22 May 23

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ