ವಿಜಯಪುರ: ಶಿಕ್ಷಕನೋರ್ವ(Teacher) ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಇಂದು(ಫೆಬ್ರವರಿ 12) ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಸಿಂದಗಿ ತಹಶೀಲ್ದಾರ್ ಕಚೇರಿಯ(sindagi tehsil office )ಆವರಣದಲ್ಲಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂದಗಿ ತಾಲೂಕಿನ ಸಾಸಾಬಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ್ ಎಂದು ಗುರುತಿಸಲಾಗಿದೆ.
ಇನ್ನು ಶಿಕ್ಷಕ ಬಸವರಾಜ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಸಿಂದಗಿ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದು, ಆತ್ಮಹತ್ಯೆಗೆ ಕಾರಣ ಏನು ಎನ್ನುವುದನ್ನು ತನಿಖೆ ನಡೆಸಿದ್ದಾರೆ.
ಕಾರವಾರ: ನಾಯಿ (Dog) ಜೊತೆ ಆಟವಾಡುತ್ತಾ ಬಾವಿಗೆ(Well) ಬಿದ್ದು ಏಳು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಇಂದು(ಫೆಬ್ರವರಿ 12) ಹೊನ್ನಾವರ(honnavar) ತಾಲೂಕಿನ ವಂದೂರು ಗ್ರಾಮದ ಬಳಿ ನಡೆದಿದೆ. ನಾಗಭೂಷಣ ಹೆಗಡೆ(7) ಮೃತ ದುರ್ದೈವಿ ಬಾಲಕ. ಮನೆಯ ನಾಯಿಯೊಂದಿಗೆ ತೋಟದ ಬಳಿ ಆಟವಾಡುತ್ತಿರುವಾಗ ಆಯತಪ್ಪಿ ತೆರೆದ ಬಾವಿಗೆ ಬಿದ್ದಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಮಗು ಕಾಣಿಸದಿದ್ದಾಗ ಮನೆಯವರು ಸುತ್ತಾಮುತ್ತ ಹುಡುಕಾಡಿದ್ದಾರೆ. ಆದ್ರೆ, ಎಲ್ಲೂ ಕಾಣಿಸಿಲ್ಲ. ಕೊನೆಗೆ ಬಾವಿಯೊಳಗೆ ಇಣುಕಿ ನೋಡಿದಾಗ ಮಗು ಬಿದ್ದಿರುವುದು ಬೆಳಕಿಗೆ ಬಂದಿದೆ.