ವಿಜಯಪುರ, ಜೂ.26: ವಿಜಯಪುರ(Vijayapura) ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಗ್ರಾಮದ ಬಳಿಯ ಶ್ರೀ ಗುರುದೇವ ರಾನಡೆ ಆಶ್ರಮದಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ (RSS Sarsanghchalak Mohan Bhagwat) ಬೀಡು ಬಿಟ್ಟಿದ್ದಾರೆ. ಜೂನ್ 24 ರಿಂದಲೇ ರಾನಡೆ ಆಶ್ರಮದಲ್ಲಿ ಬೀಡು ಬಿಟ್ಟಿರುವ ಅವರು ಯಾರ ಭೇಟಿಗೂ ಸಿಗದೇ ಧ್ಯಾನಾಸಕ್ತರಾಗಿದ್ದಾರೆ.
ಜೂನ್ 24 ರಿಂದ ರಾನಡೆ ಆಶ್ರಮದಲ್ಲಿ ಧ್ಯಾನ ಮಾಡುತ್ತಿರುವ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್, ಪ್ರತಿ ವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ಶ್ರೀ ಗುರುದೇವ ರಾನಡೆ ಆಶ್ರಮಕ್ಕೆ ಬರುತ್ತಾರೆ. ಜೊತೆಗೆ ನಾಲ್ಕು ದಿನಗಳ ಕಾಲ ಇಲ್ಲಿಯೇ ತಂಗುವುದು ವಾಡಿಕೆಯಾಗಿದೆ. ಹಲವಾರು ವರ್ಷಗಳಿಂದ ಶ್ರೀ ಗುರುದೇವ ರಾನಡೆ ಆಶ್ರಮಕ್ಕೆ ತಪ್ಪದೇ ಬರುತ್ತಿದ್ದಾರೆ.
ಇದನ್ನೂ ಓದಿ:ಮಣಿಪುರಕ್ಕೆ ಆದ್ಯತೆ ನೀಡಬೇಕು, ಹಿಂಸೆ ನಿಲ್ಲಿಸಬೇಕು; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಇನ್ನು ಇಲ್ಲಿಗೆ ಬರುವ ಅವರು, ಸಂಘ ಸಂಘಟನೆ ರಾಜಕೀಯ ವಿಚಾರಗಳಿಂದ ದೂರವಿದ್ದು, ಕೇವಲ ಧ್ಯಾನದಲ್ಲೇ ಕಾಲ ಕಳೆಯುತ್ತಾರೆ. ಈ ಆಶ್ರಮದಲ್ಲಿ ಕೆಲವೇ ಜನರ ಜೊತೆಗಿರೋ ಮೋಹನ್ ಭಾಗವತ್ ಅವರಿಗೆ ಝಡ್ ಪ್ಲಸ್ ಭದ್ರತೆ ಇದ್ದು, ಭಾಗವತ್ ಅವರ ಭೇಟಿಗೆ ಯಾರಿಗೂ ಅವಕಾಶವಿಲ್ಲ. ರಾನಡೆ ಆಶ್ರಮದ ಹೊರಗಡೆ ಜಿಲ್ಲಾ ಪೊಲೀಸರಿಂದ ಭದ್ರತೆ ಮಾಡಲಾಗಿದೆ. ನಾಳೆ(ಜೂ.27) ಬೆಳಿಗ್ಗೆ ರಾನಡೆ ಆಶ್ರಮದಿಂದ ಹೊರಟು ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ದೇವರನಿಂಬರಗಿ ಗ್ರಾಮದ ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮಹಾರಾಷ್ಟ್ರದ ಉಮದಿಗೆ ತೆರಳಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ