ಒಂಬತ್ತು ವರ್ಷದ ಬಾಲಕಿ‌ ಮೇಲೆ 60 ವರ್ಷದ ವೃದ್ಧನಿಂದ ಅತ್ಯಾಚಾರ, ಆರೋಪಿ ವೃದ್ಧ ಅರೆಸ್ಟ್

ಆಟವಾಡಲು ಮನೆಗೆ ಬರುತ್ತಿದ್ದ ಒಂಬತ್ತು ವರ್ಷದ ಬಾಲಕಿ‌ ಮೇಲೆ 60 ವರ್ಷದ ವೃದ್ಧ ಅತ್ಯಾಚಾರ ಎಸಗಿದ್ದಾನೆ. ಬಾಲಕಿಗೆ ತೀವ್ರ ರಕ್ತಸ್ರಾವವಾದ ವೇಳೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಒಂಬತ್ತು ವರ್ಷದ ಬಾಲಕಿ‌ ಮೇಲೆ 60 ವರ್ಷದ ವೃದ್ಧನಿಂದ ಅತ್ಯಾಚಾರ, ಆರೋಪಿ ವೃದ್ಧ ಅರೆಸ್ಟ್
ಪ್ರಾತಿನಿಧಿಕ ಚಿತ್ರ
Edited By: ಆಯೇಷಾ ಬಾನು

Updated on: Oct 14, 2021 | 8:08 AM

ವಿಜಯಪುರ: ಆಟವಾಡಲು ಹೋಗಿದ್ದ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ ನಡೆದಿರುವ ಘಟನೆ ವಿಜಯಪುರದ ಗಾಂಧಿಚೌಕ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿಗೆ ರಕ್ತಸ್ರಾವವಾದ ಬಳಿಕ ಘಟನೆ ಬೆಳಕಿಗೆ ಬಂದಿದ್ದು 60 ವರ್ಷದ ವೃದ್ಧನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆಟವಾಡಲು ಮನೆಗೆ ಬರುತ್ತಿದ್ದ ಒಂಬತ್ತು ವರ್ಷದ ಬಾಲಕಿ‌ ಮೇಲೆ 60 ವರ್ಷದ ವೃದ್ಧ ಅತ್ಯಾಚಾರ ಎಸಗಿದ್ದಾನೆ. ಬಾಲಕಿಗೆ ತೀವ್ರ ರಕ್ತಸ್ರಾವವಾದ ವೇಳೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಸದ್ಯ ರಕ್ತಸ್ರಾವದಿಂದ ಬಳಲುತ್ತಿರುವ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕಿ ಹೇಳಿಕೆ ಆಧರಿಸಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಘಟನೆ ಸಂಬಂಧ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರವೆಸಗಿ, ದರೋಡೆ ಆರೋಪ
ಇನ್ನು ಮತ್ತೊಂದು ಇಂತಹದ್ದೇ ಘಟನೆ ಸಂಭವಿಸಿದೆ. ಅಪ್ರಾಪ್ತೆಯನ್ನ ಅಪಹರಿಸಿ ಅತ್ಯಾಚಾರವೆಸಗಿ, ಆಕೆ ಮೈಮೇಲಿದ್ದ ಚಿನ್ನಾಭರಣ ದೋಚಿದ ಆರೋಪ ಕೇಳಿ ಬಂದಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಘಟನೆಯಲ್ಲಿ ನಡೆದಿದೆ. ಸಂಗಡಿಗರ ಸಹಾಯದಿಂದ ಶಿವಯ್ಯ ಜಂಬಯ್ಯ ರುದ್ರಸ್ವಾಮಿಮಠ (32) ಎಂಬಾತ ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದು ನಂತರ ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿದ್ದಾನೆ.

ಬಾಲಕಿಗಾಗಿ ಪೋಷಕರು ಹುಡುಕಾಡಿದ್ದು ತಡವಾಗಿ ಮನೆಗೆ ಬಂದ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಸದ್ಯ ಮದ್ದೇಬಿಹಾಳ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು ಆರೋಪಿ ರುದ್ರಯ್ಯನನ್ನು ಬಂಧಿಸಲಾಗಿದೆ. ಹಾಗೂ ಇತರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: Kotigobba 3, Salaga Release LIVE: ತೆರೆ ಮೇಲೆ ‘ಕೋಟಿಗೊಬ್ಬ 3’, ‘ಸಲಗ’ ಹವಾ ಶುರು; ಇಲ್ಲಿದೆ ಲೈವ್ ಅಪ್ಡೇಟ್ಸ್

Published On - 7:50 am, Thu, 14 October 21

Web contact

TV9 Kannada

Read More
Follow Us