ವಿಜಯಪುರ, ಫೆ.12: ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಜನರಲ್ ಮ್ಯಾನೇಜರ್ ಬಳಕೆ ಮಾಡುತ್ತಿದ್ದ ಕಾರು ಜಪ್ತಿ ಮಾಡಲಾಗಿದೆ. ನಿಗಮದಿಂದ ನೀಡಿದ ಕಾರಿನ ಬದಲು ಬೇರೆ ಕಾರು ಬಳಕೆ ಮಾಡುತ್ತಿದ್ದ ಬಗ್ಗೆ ಸಿಬ್ಬಂದಿ ನೀಡಿದ ದೂರಿನ ಅನ್ವಯ ಪೊಲೀಸರು ವಿಕಾಸ್ ಜೈಕರ್ ಬಳಸುತ್ತಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ.
ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರಲ್ ಮ್ಯಾನೇಜರ್ ಆಗಿ ವಿಕಾಸ್ ಜೈಕರ್ ಕೆಲಸ ಮಾಡುತ್ತಿದ್ದಾರೆ. ಬಿಎಸ್ಎಲ್ನಿಂದ ಕಾರು ನೀಡಿದ್ದರೂ ವಿಕಾಸ್ ಜೈಕರ್ ಅವರು ಬೆಳಗಾವಿಯಿಂದ ಖಾಸಗಿ (ವೈಟ್ ಬೋರ್ಡ್) ಕಾರು ಮೂಲಕ ವಿಜಯಪುರದ ಕಚೇರಿಗೆ ಹೋಗಿದ್ದರು.
ಇದನ್ನೂ ಓದಿ: ಕಲಬುರಗಿ: ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡ್ತಿದ್ದ ಲಾರಿ ಜಪ್ತಿ: ಹಿಂದಿದೆಯಾ ಸ್ಥಳೀಯ ಜನಪ್ರತಿನಿಧಿಗಳ ಕೈವಾಡ?
ಬಿಎಸ್ಎನ್ಎಲ್ನಿಂದ KA 22 C 8059 ಎಲೋ ಬೋರ್ಡ್ ಕಾರ್ ನೀಡಲಾಗಿತ್ತು. ಈ ಕಾರಿನ ಬದಲಾಗಿ ವಿಕಾಸ್ ಜೈಕರ್ ಅವರು KA 22 MB 0494 ನಂಬರಿನ ಕಾರ್ ಬಳಕೆ ಮಾಡುತ್ತಿದ್ದರು. ಈ ವಿಕಾಸ್ ಜೈಕರ್ ಅವರನ್ನು ಬಿಎಸ್ಎನ್ಎಲ್ ಸಿನೀಯರ್ ಆಫೀಸ್ ಅಸೋಸಿಯೇಟ್ ಸುರೇಶ ಬಿರಾದಾರ್ ಅವರು ಪ್ರಶ್ನೆ ಮಾಡಿದ್ದರು.
ಬೆಳಗಾವಿಂದ ವಿಜಯಪುರಕ್ಕೆ ಪ್ರತಿಬಾರಿ ಪತ್ನಿಯನ್ನು ಕರೆದುಕೊಂಡು ಹೋಗುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಜನರಲ್ ಮ್ಯಾನೇಜರ್ ಬೇರೆ ಕಾರು ಬಳಕೆ ಮಾಡುತ್ತಿರುವ ಕುರಿತು ಬಿಎಸ್ಎನ್ಎಲ್ ನೌಕರರೊಬ್ಬರು 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ 112 ಪೊಲೀಸರು ಪರಿಶೀಲನೆ ನಡೆಸಿ ವಿಕಾಸ್ ಜೈಕರ್ ಬಳಕೆ ಮಾಡುತ್ತಿದ್ದ ಬೇರೆ ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಗಾಂಧಿಚೌಕ್ ಠಾಣೆಯ ಪೊಲೀಸರು ವಿಚಾರಣೆ ಕೂಡ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ