KBJNL ಎಡ ದಂಡೆ ಕಾಲುವೆಯಲ್ಲಿ ಘೋರ ದುರಂತ: ಒಂದೇ ಕುಟುಂಬದ ಮೂವರು ನಾಪತ್ತೆ

ಕೆಬಿಜೆಎನ್ಎಲ್ ಎಡ ದಂಡೆ ಕಾಲುವೆಯಲ್ಲಿ ಘೋರ ದುರಂತವೊಂದು ನಡೆದಿದೆ. ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಮೂವರು ನಾಪತ್ತೆಯಾಗಿದ್ದಾರೆ. ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿಯ ಸುಡಗಾಡು ಸಿದ್ದ ಸಮುದಾಯದ ಬಾಲಕರು ಹಾಗೂ ಯುವತಿ ನಾಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಶೋಧ ಕಾರ್ಯ ನಡೆಸಿದ್ದಾರೆ.

KBJNL  ಎಡ ದಂಡೆ ಕಾಲುವೆಯಲ್ಲಿ ಘೋರ ದುರಂತ: ಒಂದೇ ಕುಟುಂಬದ ಮೂವರು ನಾಪತ್ತೆ
Kbjnl Left Canal
Updated By: ರಮೇಶ್ ಬಿ. ಜವಳಗೇರಾ

Updated on: Nov 11, 2025 | 5:00 PM

ವಿಜಯಪುರ, (ನವೆಂಬರ್ 11): ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಮೂವರು ನಾಪತ್ತೆಯಾಗಿರುವ ಘಟನೆ ವಿಜಯಪುರ (Vijayapura)  ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ. ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿಯ ಸುಡಗಾಡು ಸಿದ್ದ ಸಮುದಾಯದ ಬಸಮ್ಮ ಕೊಣ್ಣೂರು(21), ಸಂತೋಷ(16), ರವಿ ಕೊಣ್ಣೂರು(15) ಎನ್ನುವರು ಕಾಲು ಜಾರಿ ಶಿರೋಳ ಬಳಿ ಕೆಬಿಜೆಎನ್ಎಲ್ ಎಡದಂಡೆ ಕಾಲುವೆಗೆ ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ.

ಸುಡಗಾಡು ಸಿದ್ದ ಸಮುದಾಯಕ್ಕೆ ಸೇರಿದ ಬಸಮ್ಮ ಕೊಣ್ಣೂರು, ಸಂತೋಷ, ರವಿ ಇಂದು (ನವೆಂಬರ್ 11) ಕೆಬಿಜೆಎನ್ಎಲ್ ಎಡ ದಂಡೆ ಕಾಲುವೆಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಗ್ನಿಶಾಮಕ ದಳ ಸಿಬ್ಬಂದಿಗ ದೌಡಾಯಿಸಿ ನಾಪತ್ತೆಯಾದವರ ಪತ್ತೆಗೆ ಶೋಧ ನಡೆಸಿದ್ದಾರೆ.

ತೆಪ್ಪ ಮುಳುಗಿ ಓರ್ವ ಮೀನುಗಾರ ಸಾವು

 ಚಾಮರಾಜನಗರ: ತೆಪ್ಪ ಮುಳುಗಿ ಓರ್ವ ಮೀನುಗಾರ ಸಾವನ್ನಪ್ಪಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯದಲ್ಲಿ ನಡೆದಿದೆ. ಅಟ್ಟಗುಳಿಪುರ ಗ್ರಾಮದ ನಿವಾಸಿ ಶಿವಸ್ವಾಮಿ(32) ಮೃತ ದುರ್ದೈವಿ. ಇನ್ನು ಸ್ನೇಹಿತ ದಿಲೀಪ್, ತೆಪ್ಪ ಮುಳುಗಿದ ನಂತರ ಈಜಿ ದಡ ಸೇರಿದ್ದಾರೆ. ಸುವರ್ಣಾವತಿ ಜಲಾಶಯದಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ತೆಪ್ಪ ಮುಳುಗಿದೆ. ಸ್ಥಳಕ್ಕೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರ ಭೇಟಿ ನೀಡಿದ್ದು, ಶಿವಸ್ವಾಮಿ ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.