Mosque Darshan for Hindus: ಹಿಂದೂಗಳಿಗೆ ಮಸೀದಿ ದರ್ಶನ, ಸಂವಾದ ಕಾರ್ಯಕ್ರಮ: ವಿಜಯಪುರದಲ್ಲಿ ವಿಶೇಷ ಕಾರ್ಯಕ್ರಮ

| Updated By: ಸಾಧು ಶ್ರೀನಾಥ್​

Updated on: Dec 14, 2022 | 2:29 PM

ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಕೆಲ ಮುಖಂಡರು ಹಣೆಗೆ ತಿಲಕವಿಟ್ಟು ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕಂಡು ಬಂದಿತು. ನಾವೆಲ್ಲರೂ ಒಂದಾಗಿ ಭಾವೈಕ್ಯತೆಯಿಂದ ಬಾಳೋಣ ಎಂದು ಹಿಂದೂ ಮುಸ್ಲಿಂ ಮುಖಂಡರು ಮಾತನಾಡಿದರು.

Mosque Darshan for Hindus: ಹಿಂದೂಗಳಿಗೆ ಮಸೀದಿ ದರ್ಶನ, ಸಂವಾದ ಕಾರ್ಯಕ್ರಮ: ವಿಜಯಪುರದಲ್ಲಿ ವಿಶೇಷ ಕಾರ್ಯಕ್ರಮ
ವಿಜಯಪುರದಲ್ಲಿ ಹಿಂದೂಗಳಿಗೆ ಮಸೀದಿ ದರ್ಶನ, ಸಂವಾದ ಕಾರ್ಯಕ್ರಮ
Follow us on

ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಧಾರ್ಮಿಕ ದಂಗಲ್ ನಡೆದಿರೋದು ಎಲ್ಲರಿಗೂ ಗೊತ್ತಿದೆ. ಹಿಂದೂ ಮುಸ್ಲಿಂ ಸಮುದಾಯಗಳ ಮಧ್ಯೆ ಸಾಮರಸ್ಯ ಕದಡಿದೆ. ಎರಡೂ ಸಮುದಾಯಗಳ ಮಧ್ಯೆ ದ್ವೇಷ ಹಬ್ಬಿದೆ. ಪರಸ್ಪರ ಮಧ್ಯೆ ಘರ್ಷಣೆಗಳು ನಡೆದಿವೆ. ಉಭಯ ಸಮುದಾಯಗಳ ಜೀವ ಹಾನಿಯಾಗಿದೆ. ಹಿಜಾಬ್ ದಿಂದ ಹಿಡಿದು ಇತರೆ ವಿಚಾರಗಳಲ್ಲಿ ಪರಸ್ಪರ ಧರ್ಮಗಳ ಮಧ್ಯದ ಅಂತರ ಹೆಚ್ಚಾಗುತ್ತಲೇ ಹೋಗಿದೆ. ಹಾಗಾಗಿ ಸಾಮರಸ್ಯ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಭಾವೈಕ್ಯತೆ ಬೆಳೆಸಲು, ಕೋಮು ದ್ವೇಷ ಅಳಿಸಿ ಹಾಕಲು ಮುಸ್ಲಿಂ ಸಮುದಾಯದವರು ಮುಂದೆ ಬಂದಿದ್ದಾರೆ. ಅದು ಹೇಗೆ ಅಂತೀರಾ ಈ ಸ್ಟೋರಿ ಓದಿ. ರಾಜ್ಯದಲ್ಲಿ ಧರ್ಮ ದಂಗಲ್ ಮಧ್ಯೆ ಕೋಮು ಸೌಹಾರ್ದತೆ ಬೆಳೆಸಲು, ಹಿಂದೂ ಮುಸ್ಲಿಂ ಭಾಯಿ ಭಾಯ್ ಎಂದು ಸಾರಲು ಹೊರಟಿರುವ ಮುಸ್ಲಿಂ ಸಮುದಾಯದ ಜನರು ಹಿಂದೂಗಳಿಗೆ ಮಸೀದಿ ದರ್ಶನ ಹಾಗೂ ಪ್ರಾರ್ಥನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂಥ ಒಂದು ಅಪರೂಪದ ನಡೆಗೆ ವಿಜಯಪುರ ಜಿಲ್ಲೆ ಸಾಕ್ಷಿಯಾಗಿದೆ. ಇತ್ತೀಚಿನ ಕೆಲ ವರ್ಷಗಳಿಂದ ನಡೆದ ಘಟನೆಗಳು ವಿದ್ಯಮಾನಗಳು ಹಿಂದೂ ಮುಸ್ಲಿಂ ಭಾವೈಕ್ಯತೆ, ಸೋದರತೆಗೆ ಕೊಳ್ಳಿ ಇಟ್ಟಿದ್ದವು. ಅದು ಎರಡೂ ಸಮುದಾಯಗಳಲ್ಲಿ ದ್ವೇಷಕ್ಕೆ ಕಾರಣವಾಗಿದೆ.

ಇದನ್ನು ತೊಡೆದು ಹಾಕಲು ವಿಜಯಪುರ ನಗರದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ ಹಿಂದೂ ಸಮುದಾಯದವರಿಗೆ ಮಸೀದಿ ದರ್ಶನ ಎಂಬ ವಿಶೇಷ ಕಾರ್ಯವನ್ನು ಮುಸ್ಲಿಂ ಸಮುದಾಯದವರು ಮಾಡುತ್ತಿದ್ದಾರೆ. ವಿಜಯಪುರ ನಗರದ (Vijayapura) ಎಸ್ ಆರ್ ಕಾಲೋನಿಯಲ್ಲಿರೋ ಮಸ್ ಜೀದ್ ಎ ಅಲ್ ಅಕ್ಸಾ ಮುಸ್ಲಿಂ ಜಮಾತೆ ಮಸೀದಿಯಲ್ಲಿ (Masjid) ಮಸೀದಿ ದರ್ಶನ (Mosque Darshan) ಆಯೋಜಿಸಲಾಗಿದೆ.

ಬೆಂಗಳೂರು, ಮಂಗಳೂರು ಹೊರತುಪಡಿಸಿದರೆ ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ವಿಜಯಪುರದಲ್ಲಿ ಮಸೀದಿ ದರ್ಶನ ಕಾರ್ಯಕ್ರಮ ನಡೆದಿದೆ. ಮಸೀದಿಗಳಲ್ಲಿ ಭಯೋತ್ಪಾದನೆ ತರಬೇತಿ ನೀಡುತ್ತಾರೆ, ಮಸೀದಿಯಲ್ಲಿ ಹಿಂದೂಗಳಿಗೆ ಪ್ರವೇಶವಿಲ್ಲ, ಹಿಜಾಬ್, ಆಜಾನ್, ಹಲಾಲ್ ಕಟ್, ಜಟಕಾ ಕಟ್ ಸೇರಿದಂತೆ ಇತರೆ ವಿಚಾರಗಳು ಕೋಮು ಸೌಹಾರ್ದತೆಯಲ್ಲಿ ಬಿರುಕು ಮೂಡಿಸಿದ್ದವು. ಇದಲ್ಲದಕ್ಕೆ ಪರಿಹಾರವೆಂಬಂತೆ ಮಸೀದಿ ದರ್ಶನ ಕಾರ್ಯಕ್ರಮ ನಡೆಸಲಾಗಿದೆ.

ಇದನ್ನೂ ಓದಿ:

Srirangapatna: ಮತ್ತೆ ಭುಗಿಲೆದ್ದ ಜಾಮಿಯಾ ಮಸೀದಿ ವಿವಾದ, 108 ಹನುಮ ಭಕ್ತರಿಂದ ಹೈ ಕೋರ್ಟ್ ನಲ್ಲಿ ಅಪೀಲ್

ಕಾರ್ಯಕ್ರಮದ ಅಂಗವಾಗಿ ಹಿಂದೂ ಸಮುದಾಯವರನ್ನು ಮಸೀದಿಗೆ ಕರೆದು ಸಂವಾದ ಮಾಡಲಾಯಿತು. ಮಸೀದಿಯಲ್ಲಿ ಪ್ರಾರ್ಥನೆ ಹೇಗೆ ಮಾಡಲಾಗುತ್ತದೆ, ಅದರ ನಿಯಮಾವಳಿಗಳು ಏನು ಎಂದೆಲ್ಲಾ ವಿವರಿಸಲಾಯಿತು. ಬಳಿಕ ಹಿಂದೂ ಸಮುದಾಯದವರೊಂದಿಗೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಈ ಮೂಲಕ ಸೋದರತೆಯನ್ನು ಎಲ್ಲ ಜಾತಿಯವರಲ್ಲೂ ಬೆಳೆಸಲು ಮುಂದಾಗಿದ್ಧಾರೆ ಮುಸ್ಲಿಂ ಸಮುದಾಯದವರು ಎಂದು ಮುಸ್ಲಿಂ ಸಮುದಾಯದ ಮುಖಂಡರಾದ ಡಾ. ಅಮೀರುದ್ದೀನ್ ಖಾಜಿ ತಿಳಿಸಿದ್ದಾರೆ.

ಸದ್ಯ ರಾಜ್ಯದಲ್ಲಿನ ಧರ್ಮ ದಂಗಲ್ ಅಂಗವಾಗಿ ಕರಾವಳಿ ಭಾಗದಲ್ಲಿ ಹಿಂದೂಗಳ ದೇವಸ್ಥಾನದ ಆವರಣ ಹಾಗೂ ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂಬ ಮಾದರಿಯಲ್ಲಿ ಇದೇ ಮುಂದಿನ ತಿಂಗಳು 2023 ರ ಜನವರಿಯ ಸಂಕ್ರಾಂತಿ ವೇಳೆ ನಗರದ ಸಿದ್ದೇಶ್ವರ ಜಾತ್ರೆ ಎಂಟು ದಿನ ನಡೆಯುತ್ತಿದ್ದು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಈ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ವಿಜಯಪುರ ಜಿಲ್ಲಾ ಶ್ರೀರಾಮ ಸೇನೆ ಸಿದ್ದೇಶ್ವರ ಸಂಸ್ಥೆಯ ಆಧ್ಯಕ್ಷ ಹಾಗೂ ನಗರ ಶಾಸಕ ಯತ್ನಾಳ ಅವರಿಗೆ ಮನವಿ ನೀಡಿದೆ. ಈ ವಿಚಾರ ತಾರಕಕ್ಕೇರುವ ಸಾಧ್ಯತೆಯಿದೆ. ಇಷ್ಟರ ಮಧ್ಯೆ ಮುಸ್ಲಿಂ ಸಮುದಾಯದ ಜನರು ಹಿಂದೂಗಳಿಗೆ ಮಸೀದಿ ದರ್ಶನ ಕಾರ್ಯಕ್ರಮ ಆಯೋಜಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಮಂಗಳವಾರ ನಡೆದ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಪ್ತ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಕಾಂಗ್ರೆಸ್ಸಿನ ಪಾಲಿಕೆ ಸದಸ್ಯ ದಿನೇಶ್ ಹಳ್ಳಿ, ಕೆಪಿಸಿಸಿ ಪ್ರಚಾರ ಸಮೀತಿ ಆಧ್ಯಕ್ಷ ಎಂ ಬಿ ಪಾಟೀಲ್ ಆಪ್ತ ಸೋಮನಾಥ್ ಕಳ್ಳಿಮನಿ ಸೇರಿದಂತೆ ಇತರೆ ಮುಖಂಡರು ಹಾಗೂ ಹೆಚ್ಚಿನ ಸಂಖ್ಯೆಯ ಹಿಂದೂ ಸಮುದಾಯದವರು ಭಾಗಿಯಾಗಿ ಹಿಂದು ಮುಸ್ಲಿಂ ಮಧ್ಯೆ ಸೌಹಾರ್ದತೆ ಮೆರೆದಿದ್ದಾರೆ. ಭಾವೈಕ್ಯತೆಯ ಸಂಕೇತವಿದು ಎಂದು ಬಣ್ಣಿಸಿದ್ಧಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು

ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಕೆಲ ಮುಖಂಡರು ಹಣೆಗೆ ತಿಲಕವಿಟ್ಟು ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕಂಡು ಬಂದಿತು. ಭೇದಭಾವ ಮರೆತು ಎಲ್ಲರೂ ಒಂದಾಗಿ ಬಾಳಬೇಕು ಎಂದು ಹಿಂದೂ ಮುಸ್ಲಿಂ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜಕಾರಣಕ್ಕಾಗಿ ಕೋಮು ಸಂಘರ್ಷ, ಮತ್ತಿತರ ಕಾರಣಕ್ಕೆ ಹಿಂದೂ ಮುಸ್ಲಿಂ ಮಧ್ಯೆ ಒಡಕು ಮೂಡಿಸಲಾಗುತ್ತಿದೆ.

ನಾವೆಲ್ಲರೂ ಒಂದಾಗಿ ಭಾವೈಕ್ಯತೆಯಿಂದ ಬಾಳೋಣ ಎಂದು ಹಿಂದೂ ಮುಸ್ಲಿಂ ಮುಖಂಡರು ಮಾತನಾಡಿದರು. ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಿಂದೂ ಫೈಯರ್ ಬ್ರಾಂಡ್ ಎಂದು ಗುರುತಿಸಿಕೊಂಡಿದ್ದು, ಅವರ ಕ್ಷೇತ್ರದಿಂದಲೇ ಮುಸ್ಲಿಮರು ಹಿಂದೂಗಳಿಗೆ ಮಸೀದಿ ದರ್ಶನ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಎಲ್ಲೆಡೆ ಸೌಹಾರ್ದತೆ ಸಂದೇಶ ರವಾನಿಸಿದ್ದಾರೆ ಎನ್ನಬಹುದು.

ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ

ರಾಜ್ಯ ಮತ್ತಷ್ಟು ಸುದ್ದಿ ಓದಲು  ಇಲ್ಲಿ ಕ್ಲಿಕ್  ಮಾಡಿ