Srirangapatna: ಮತ್ತೆ ಭುಗಿಲೆದ್ದ ಜಾಮಿಯಾ ಮಸೀದಿ ವಿವಾದ, 108 ಹನುಮ ಭಕ್ತರಿಂದ ಹೈ ಕೋರ್ಟ್ ನಲ್ಲಿ ಅಪೀಲ್
Kote Anjaneya temple: 1784 ರ ವರೆಗೂ ಇದನ್ನ ಮೂಡಲಬಾಗಿಲು ಕೋಟೆ ಆಂಜನೇಯ ದೇವಾಲಯ ಎಂದು ಕರೆಯುತ್ತಿದ್ದರು. ಆದ್ರೆ ಟಿಪ್ಪು ಆಡಳಿತಕ್ಕೆ ಬಂದಾಗ ಆಂಜನೇಯನ ವಿಗ್ರಹವನ್ನ ಕಾವೇರಿ ನದಿಗೆ ಎಸೆದು, ಅದಕ್ಕೆ ಜಾಮಿಯಾ ಮಸೀದಿ ಎಂದು ನಾಮಕರಣ ಮಾಡಿದ್ದಾನೆಂಬುದು ವಾದ.
ಜಾಮಿಯಾ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮತ್ತೊಂದು ಧರ್ಮ ದಂಗಲ್ ಗೆ ಮಂಡ್ಯ ಜಿಲ್ಲೆ ಸಾಕ್ಷಿಯಾಗಿದೆ.. ಜಾಮಿಯಾ ಮಸೀದಿ ವಿವಾದ ಈಗ ಕೋರ್ಟ್ ಮೆಟ್ಟಲೇರಿದೆ. ಅಸಲಿಗೆ ಈ ವಿವಾದವಾದರೂ ಏನು? ಜಾಮಿಯ ಮಸೀದಿಯ ಮಂದಿರ ಗದ್ದಲವಾದ್ರು ಏನು..?? ಹಿಂದೂ ಹಾಗೂ ಮುಸ್ಲಿಂ ಸಂಘಟನೆಯ (hindu, muslim) ವಾದವಾದ್ರು ಏನು ಎಂಬುದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ.
ಮತ್ತೆ ಜಾಮಿಯಾ ಮಸೀದಿ ವಿವಾದ ಮುನ್ನೆಲೆಗೆ ಬಂದಿದೆ.. ಮೂಡಲಬಾಗಿಲು ಕೋಟೆ ಆಂಜನೇಯ ದೇವಾಲಯದ (Srirangapatna in mandya) ಮೇಲೆ ಟಿಪ್ಪು ಜಾಮಿಯಾ ಮಸೀದಿಯನ್ನ ನಿರ್ಮಾಣ ಮಾಡಿದ್ದಾನೆಂದು ಹಿಂದೂ ಪರ ಸಂಘಟನೆಗಳು ಆರೋಪಿಸುತ್ತಿವೆ. ಜಾಮಿಯಾ ಮಸೀದಿಯಲ್ಲಿ ಹಿಂದೂ ದೇವರ ವಿಗ್ರಹಗಳಿಗೆ.. ದೇವಾಲಯದ ವಾಸ್ತು ಶಿಲ್ಪವಿದೆ ಜೊತೆಗೆ ಕಲ್ಯಾಣಿ ಸಹ ಇದ್ದು.. ಈ ಸ್ವತ್ತು ಹಿಂದೂಗಳಿಗೆ ಸೇರಬೇಕೆಂದು ವಾದ ಮಂಡಿಸುತ್ತಿದ್ದಾರೆ. ಜೊತೆಗೆ ಜಾಮಿಯಾ ಮಸೀದಿಯಲ್ಲಿ ನಡೆಯುತ್ತಿರುವ ಮದರಸವನ್ನ ಖಾಲಿ ಮಾಡಿಸಬೇಕು ಹನುಮ ಭಕ್ತರಿಗೆ (Kote Anjaneya temple) ಪೂಜೆ ಹಾಗೂ ಧ್ಯಾನ ನಡೆಸಲು ಅನುವು ಮಾಡಿ ಕೊಡಬೇಕೆಂದು ಬಜರಂಗಿ ಭಕ್ತರೀಗ ಕೋರ್ಟ್ ಮೊರೆ ಹೋಗಿದ್ದಾರೆ.
ಅಸಲಿಗೆ ಈ ವಿವಾದ ಶುರುವಾಗಲು ಕಾರಣವೇನು.. ಈ ಕಟ್ಟಡ ನಿರ್ಮಾಣವಾಗಿದ್ದು ಯಾವಾಗ? ಇದಕ್ಕೆ ಜಾಮಿಯಾ ಮಸೀದಿಯೆಂದು ಮರು ನಾಮಕರಣವಾಗಿದ್ದು ಯಾವಾಗ? ಅಂತ ನೋಡೊದಾದ್ರೆ.. 1784 ರ ವರೆಗೂ ಇದು ಮೂಡಲಬಾಗಿಲು ಕೋಟೆ ಆಂಜನೇಯ ದೇವಾಲಯ ಎಂದು ಜನಜನಿತವಾಗಿತ್ತು. ಆದ್ರೆ ಟಿಪ್ಪು ಯಾವಾಗ ಆಡಳಿತಕ್ಕೆ ಬರ್ತಾನೋ ಆಗ ಮೂಡಲಬಾಗಿಲು ಆಂಜನೇಯ ದೇವಾಲಯದಲ್ಲಿದ್ದ ಆಂಜನೇಯನ ವಿಗ್ರಹವನ್ನ ಕಾವೇರಿ ನದಿಗೆ ಎಸೆದು ಬಳಿಕ ಅಲ್ಲಿ ಜಾಮಿಯಾ ಮಸೀದಿ ಎಂದು ನಾಮಕರಣ ಮಾಡಿದ್ದಾನೆಂಬುದು ಹಿಂದೂ ಪರ ಸಂಘಟನೆಗಳ ವಾದವಾಗಿದೆ.
ಜೊತೆಗೆ ಮಸೀದಿಯ ವಾಸ್ತು ಶಿಲ್ಪ ನಂದಿ ವಿಗ್ರಹಾಕಾರದ ಗೋಡೆ ಕೆತ್ತನೆ ಕಲ್ಯಾಣಿ ಇರುವುದು ಇದಕ್ಕೆಲ್ಲಾ ಸಾಕ್ಷಿಯಾಗಿದೆ. ಹಾಗಾಗಿ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಹೇಗೆ ಪೂಜೆಗೆ ಅನುವು ಮಾಡಿ ಕೊಟ್ಟಿದ್ದಾರೋ ಅದೇ ರೀತಿ ಶ್ರೀರಂಗಪಟ್ಟಣದ ಜಾಮೀಯ ಮಸೀದಿಯಲ್ಲಿಯೂ ಪೂಜೆ ಹಾಗೂ ಧ್ಯಾನ ಮಾಡಲು ಅವಕಾಶವನ್ನ ಮಾಡಿ ಕೊಡಬೇಕೆಂಬುದು ಹಿಂದೂ ಸಂಘಟನೆಗಳ ವಾದವಾಗಿದೆ ಎನ್ನುತ್ತಾರೆ ಬಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್.
ಇದನ್ನೂ ಓದಿ: ದಾವಣಗೆರೆ: ಒಬ್ಬ ತಹಶೀಲ್ದಾರ್ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದ ಕೋಟ್ಯಂತರ ರೂ ಬೆಲೆಬಾಳುವ ಜಾಗ ಮತ್ತೆ ಶಾಲೆಗೆ ದಕ್ಕಿತು!
ಇದೆಲ್ಲಾ ಹಿಂದೂ ಸಂಘಟನೆಗಳ ವಾದವಾದ್ರೆ ಮತ್ತೊಂದೆಡೆ ಮುಸ್ಲಿಂ ಸಮುದಾಯದ ಮುಖಂಡರು ಹೇಳೋದೆ ಬೇರೆ.. ತಾತ ಮುತ್ತಾತ ಕಾಲದಿಂದಲೂ ಇಲ್ಲಿ ಮಸೀದಿಯೇ ಇದೆ. ನಾವು ತಲತಲಾಂತರದಿಂದ ಇಲ್ಲಿ ನಮಾಜ್ ಮಾಡುತ್ತಲೇ ಬಂದಿದ್ದೇನೆ. ಪ್ರತಿನಿತ್ಯ ಇಲ್ಲಿ ಆಜಾನ್ ಸದ್ದು ಮಾಡುತ್ತಲೇ ಇದೆ. ಜೊತೆಗೆ ಸ್ವಾತಂತ್ರ ಬಂದ ಬಳಿಕ ಹಳೆ ಕಟ್ಟಡಗಳು ಮಾನ್ಯುಮೆಂಟಲ್ ಆಕ್ಟ್ ಅಡಿ ಬರುವುದರಿಂದ ಹಳೆಯ ಕಟ್ಟಡಗಳನ್ನ ಯಥಾ ಸ್ಥಿತಿಯಲ್ಲೇ ಮುಂದುವರೆಸಿಕೊಂಡು ಹೋಗಬೇಕೆಂಬ ವಾದವನ್ನ ಮಂಡಿಸುತ್ತಿದ್ದಾರೆ ಎನ್ನುತ್ತಾರೆ ವಕ್ಫ್ ಬೋರ್ಡ್ ಸದಸ್ಯ ಇರ್ಫಾನ್.
ಅದೇನೆ ಹೇಳಿ ಸಕ್ಕರೆ ನಗರಿ ಮಂಡ್ಯ ಧರ್ಮ ದಂಗಲ್ ಗೆ ಸಾಕ್ಷಿಯಾಗಿದೆ. ಮಸೀದಿ ಮಂದಿರ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈಗಾಗ್ಲೆ ಹಿಂದೂ ಪರ ಸಂಘಟನೆಗಳು ಕಾನೂನು ಹೋರಾಟಕ್ಕೆ ಮುಂದಾಗಿವೆ. ಮುಂದಿನ ದಿನಗಳಲ್ಲಿ ನ್ಯಾಯಾಲಯ ಯಾವ ಆದೇಶ ನೀಡುತ್ತೊ ಕಾದು ನೋಡಬೇಕಿದೆ. (ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ)
ರಾಜ್ಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 am, Tue, 6 December 22