ಮಹೇಶ್ ತಿಮರೋಡಿ ಅವರಿಗೆ ಬೇಲ್ ಸಿಕ್ಕೇ ಸಿಗುತ್ತದೆ, ಅನುಮಾನವೇ ಬೇಡ: ವಿಜಯವ್ಯಾಸ್ ಪೂಜಾರ್, ವಕೀಲ
ಆಗಸ್ಟ್ 16ರಂದು ಮಹೇಶ್ ತಿಮರೋಡಿ ಅಪ್ಲೋಡ್ ಮಾಡಿದ ವಿಡಿಯೋವೊಂದು ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತದೆ ಎಂದು ಆರೋಪಿಸಲಾಗಿದೆ, ಇದುವರೆಗೆ ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ ಮತ್ತು ತಿಮರೋಡಿ ಅವರು ಬಿಎಲ್ ಸಂತೋಷ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಾರೆಂದು ಹೇಳಲಾಗಿದೆ, ಆದರೆ ಇಲ್ಲಿ ಸಂತೋಷ ಅವರು ದೂರುದಾರರಲ್ಲ, ಎಲ್ಲ ಸಂಗತಿಗಳನ್ನು ಕೋರ್ಟ್ಗೆ ತಿಳಿಸಿದ್ದೇವೆ ಎಂದು ವಕೀಲ ಪೂಜಾರ್ ಹೇಳಿದರು.
ಉಡುಪಿ, ಆಗಸ್ಟ್ 21: ಮಹೇಶ್ ಶೆಟ್ಟಿ ತಿಮರೋಡಿಯವರನ್ನು ನ್ಯಾಯಾಲಯವು ಆಗಸ್ಟ್ 23 ರವರೆಗೆ ನ್ಯಾಯಾಂಗ ಕಸ್ಟಡಿಗೆ (judicial custody) ಒಪ್ಪಿಸಿದ ಬಳಿಕ ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರ ವಕೀಲ ವಿಜಯವ್ಯಾಸ್ ಪೂಜಾರ್, ಜಾಮೀನು ಅರ್ಜಿಯನ್ನು ಮೂವ್ ಮಾಡಲಾಗಿದೆ ಮತ್ತು ಅದು ಸಿಗುವ ಭರವಸೆ ತಮಗಿದೆ ಎಂದು ಹೇಳಿದರು. ತಿಮರೋಡಿಯವರನ್ನು ಬಂಧಿಸಿದ ರೀತಿ ಸರಿಯಿಲ್ಲ, ನೋಟೀಸನ್ನು ಹೆಂಡತಿಗೆ ನೀಡಿ ಗಂಡನನ್ನು ಬಂಧಿಸಲಾಗಿದೆ, ತಮ್ಮ ಕಕ್ಷಿದಾರ ಸಾಕ್ಷ್ಯ ನಾಶಮಾಡುವ ಪ್ರಯತ್ನ ಮಾಡಿಲ್ಲ, ತಲೆಮರೆಸಿಕೊಳ್ಳುವ ಪ್ರಯತ್ನವನ್ನೂ ಅವರು ಮಾಡಿಲ್ಲ, ಎಲ್ಲ ಸಂಗತಿಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ, ಹಾಗಾಗಿ ಅವರು ಬೇಲ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ಪೂಜಾರ್ ಹೇಳಿದರು.
ಇದನ್ನೂ ಓದಿ: ತಿಮರೋಡಿ ಮತ್ತು ಮಟ್ಟೆಣ್ಣನವರ್ ವಿರುದ್ಧ ಧರ್ಮಸ್ಥಳದಲ್ಲಿ ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

