AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್

ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್

ರಮೇಶ್ ಬಿ. ಜವಳಗೇರಾ
|

Updated on:Aug 21, 2025 | 9:38 PM

Share

ಆರ್​​ ಸಿಬಿ ಗೆಲುವಿನಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಂಡಿರುವ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ಎದ್ದು ನಿಂತ ಡಿಕೆಶಿ, ನಾನು ಕ್ರಿಕೆಟ್ ಅಭಿಮಾನಿ , ಕೆಎಸ್​ ಸಿಎ ಸದಸ್ಯ, ಕ್ರೀಡಾಂಗಣಕ್ಕೆ ಹೋಗಿದ್ದೆ. ಕಫ್ ಗೂ ಮುತ್ತು ಕೊಟ್ಟಿದ್ದೆನೆ ಎಂದರು. ನಂತರ ಕೌಂಟರ್ ಎಂಬಂತೆ ಆರ್​ ಎಸ್​ ಎಸ್​ ಚಡ್ಡಿ ಹಾಕಿರುವುದನ್ನೂ ಸಹ ಹೇಳಿ ಎಂದ ಅಶೋಕ್ ಟಾಂಕ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಡಿಕೆಶಿ, ನಮಸ್ತೆ ಸದಾ ವತ್ಸಲೆ ಎಂದು ಆರ್​ ಎಸ್​ ಎಸ್​ ಗೀತೆ ಹಾಡಿ ಗಮನಸೆಳೆದರು.

ಬೆಂಗಳೂರು, (ಆಗಸ್ಟ್ 21): ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ಸಂಭ್ರಮಾಚರಣೆ ವೇಲೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಆರ್​ ಸಿಬಿ ಅಭಿಮಾನಿಗಳು ಮೃತಟ್ಟಿದ್ದಾರೆ. ಈ ಸಂಬಂಧ ಇಂದು (ಆಗಸ್ಟ್ 21) ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಉತ್ತರ ನೀಡಿದರು. ಇದೇ ವೇಳೆ ವಿಪಕ್ಷ ನಾಯಕ ಅಶೋಕ್, ಆರ್​​ ಸಿಬಿ ಗೆಲುವಿನಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಂಡಿರುವ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ಎದ್ದು ನಿಂತ ಡಿಕೆಶಿ, ನಾನು ಕ್ರಿಕೆಟ್ ಅಭಿಮಾನಿ , ಕೆಎಸ್​ ಸಿಎ ಸದಸ್ಯ, ಕ್ರೀಡಾಂಗಣಕ್ಕೆ ಹೋಗಿದ್ದೆ. ಕಫ್ ಗೂ ಮುತ್ತು ಕೊಟ್ಟಿದ್ದೆನೆ ಎಂದರು. ನಂತರ ಕೌಂಟರ್ ಎಂಬಂತೆ ಆರ್​ ಎಸ್​ ಎಸ್​ ಚಡ್ಡಿ ಹಾಕಿದ್ರಲ್ಲ ಎಂದು ಅಶೋಕ್ ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಡಿಕೆಶಿ, ನಮಸ್ತೇ ಸದಾ ವತ್ಸಲೇ ಎಂದು ಆರ್​ ಎಸ್​ ಎಸ್​ ಗೀತೆ ಹಾಡಿದರು. ಈ ಮೂಲಕ ಅಶೋಕ್ ಅವರಿಗೆ ತಿರುಗೇಟು ನೀಡಿದರು.

Published on: Aug 21, 2025 09:31 PM