AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Session: ಪೂರಕ ಬಜೆಟ್​ನಲ್ಲಿ ವಯನಾಡ್ ಸಂತ್ರಸ್ತರಿಗೆ ₹10 ಕೋಟಿ ನೀಡಿರುವ ಔಚಿತ್ಯ ಪ್ರಶ್ನಿಸಿದ ಅಶೋಕ

Karnataka Assembly Session: ಪೂರಕ ಬಜೆಟ್​ನಲ್ಲಿ ವಯನಾಡ್ ಸಂತ್ರಸ್ತರಿಗೆ ₹10 ಕೋಟಿ ನೀಡಿರುವ ಔಚಿತ್ಯ ಪ್ರಶ್ನಿಸಿದ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 21, 2025 | 7:25 PM

Share

ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ನೆರೆರಾಜ್ಯದ ಸಂತ್ರಸ್ತರಿಗೆ ಔಷಧಿ ಮತ್ತು ಆಹಾರ ಸಾಮಗ್ರಿಗಳನ್ನು ನೀಡಬಹದು, ಕರ್ನಾಟಕ ಸರ್ಕಾರ ಕೇರಳಕ್ಕೆ ಅವುಗಳನ್ನು ಕಳಿಸಿದರೆ ನಮ್ಮದೇನೂ ತಕರಾರಿಲ್ಲ, ಆದರೆ ಹಣವೇಕೆ? ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ, ಕೇರಳವೆಂದರೆ ಕೇವಲ ವಯನಾಡ್ ಮಾತ್ರವೇ? ಬೇರೆ ಜಿಲ್ಲೆಗಳಲ್ಲಿ ಸಂತ್ರಸ್ತರಿಲ್ಲವೇ? ಅವರಿಗ್ಯಾಕೆ ನೆರವು ಕಳಿಸಿಲ್ಲ ಎಂದು ಅಶೋಕ ಪ್ರಶ್ನಿಸಿದರು.

ಬೆಂಗಳೂರು, ಆಗಸ್ಟ್ 21: ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ತಮ್ಮ ಪೂರಕ ಬಜೆಟ್ ನಲ್ಲಿ ನೆರೆರಾಜ್ಯ ಕೇರಳ ಕಳೆದ ವರ್ಷ ಗುಡ್ಡ ಕುಸಿತ ಉಂಟಾಗಿ ಆಸ್ತಿಪಾಸ್ತಿ ಮನೆಗಳನ್ನು ಕಳೆದುಕೊಂಡ ಜನರಿಗೆ ಅಂತ ₹10 ಕೋಟಿ ನೀಡಿದ್ದು ಸದನದಲ್ಲಿ ಚರ್ಚೆ ಬರಲೇಬೇಕಿತ್ತು. ಇವತ್ತು ಬೆಳಗ್ಗೆ ಮಾರ್ಮಿಕವಾಗಿ ಟ್ವೀಟ್ ಕೂಡ ಮಾಡಿದ್ದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಕೇರಳದ ಸಂತ್ರಸ್ತರಿಗೆ ₹10 ಕೋಟಿ ನೀಡಿದ್ದರ ಔಚಿತ್ಯವನ್ನು ಪ್ರಶ್ನಿಸಿದರು. ಎನ್​ಡಿಆರ್​ಎಫ್ ನಿಯಮಗಳ ಅಡಿಯಲ್ಲಿ ನೀಡಲಾಗಿದೆ ಅಂತ ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ, ಆದರೆ ನಿಯಮಗಳು ಭಿನ್ನವಾಗಿವೆ, ರಾಜ್ಯದೊಳಗಿನ ಸಂತ್ರಸ್ತರಿಗೆ ಮಾತ್ರ ನೀಡಬಹುದು ಅಂತ ನಿಯಮ ಹೇಳುತ್ತದೆ ಎಂದು ಅಶೋಕ ಹೇಳಿದರು. ರಾಜ್ಯದ ಜನರು ಮನೆ ಕಳೆದುಕೊಂಡಾಗ ₹95,000 ಸರ್ಕಾರ ನೀಡುತ್ತದೆ, ಆದರೆ ವಯನಾಡ್ ಸಂತ್ರಸ್ತರಿಗೆ ತಲಾ ₹ 10 ಲಕ್ಷಗಳೇ? ಎಂದು ಅಶೋಕ ಪ್ರಶ್ನಿಸಿದರು.‘

ಇದನ್ನೂ ಓದಿ:    ಸಿಎಂ ಸಿದ್ದರಾಮಯ್ಯ ವಿರುದ್ಧ 24 ಕೊಲೆ ಮಾಡಿದ ಆರೋಪ, ಎಸ್​ಐಟಿ ರಚಿಸ್ತೀರಾ: ಸರ್ಕಾರಕ್ಕೆ ಅಶೋಕ್ ಪ್ರಶ್ನೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ