‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
ಪವಿತ್ರಾ ಗೌಡ ಅವರು ಈಗ ಜೈಲಿನಲ್ಲಿ ಇದ್ದಾರೆ. ಅವರ ಪರವಾಗಿ ವಾದ ಮಾಡಲು ಹಿರಿಯ ವಕೀಲ ಬಾಲನ್ ತಯಾರಾಗಿದ್ದಾರೆ. ಪವಿತ್ರಾ ಗೌಡಗೆ ಜಾಮೀನು ಕೊಡಿಸಲು ಅವರ ಪರ ವಕೀಲರು ಪ್ರಯತ್ನಿಸುತ್ತಿದ್ದಾರೆ. ಬೇರೊಂದು ಕಾರಣವನ್ನು ನೀಡಿ ಜಾಮೀನಿಗೆ ಅರ್ಜಿ ಹಾಕಲು ಬಾಲನ್ ನಿರ್ಧರಿಸಿದ್ದಾರೆ.
ನಟಿ ಪವಿತ್ರಾ ಗೌಡ (Pavithra Gowda) ಅವರು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರ ಪರವಾಗಿ ವಾದ ಮಾಡಲು ಹಿರಿಯ ವಕೀಲ ಬಾಲನ್ (Balan) ಅವರು ತಯಾರಾಗಿದ್ದಾರೆ. ಪವಿತ್ರಾ ಗೌಡಗೆ ಜಾಮೀನು ಕೊಡಿಸಲು ಅವರ ಪರ ಲಾಯರ್ ಪ್ರಯತ್ನಿಸುತ್ತಿದ್ದಾರೆ. ಬೇರೊಂದು ಕಾರಣವನ್ನು ನೀಡಿ ಜಾಮೀನಿಗೆ ಅರ್ಜಿ ಹಾಕಲು ಅವರು ನಿರ್ಧರಿಸಿದ್ದಾರೆ. ಕೇಸ್ ಬಗ್ಗೆ ಮಾತನಾಡುವಾಗ ಪವಿತ್ರಾ ಗೌಡ ಪರಿಸ್ಥಿತಿ ಬಗ್ಗೆ ಲಾಯರ್ ವಿವರಿಸಿದ್ದಾರೆ. ‘ಜೈಲಿನಲ್ಲಿ ಇರುವ ಯಾರೂ ಕೂಡ ದೊಡ್ಡ ಶ್ರೀಮಂತರಲ್ಲ. ಸುಮಾರು ಜನ ಬಡವರೇ ಇರುತ್ತಾರೆ. ಪವಿತ್ರಾ ಗೌಡ ಕೂಡ ದೊಡ್ಡ ಶ್ರೀಮಂತೆ ಅಲ್ಲ. ಸಿನಿಮಾದಲ್ಲಿ ನಟಿಸಿ ಹತ್ತಾರು ವರ್ಷ ಆಗಿದೆ. ಅವರವರ ಕಷ್ಟಗಳು ಅವರಿಗೆ ಇರುತ್ತದೆ. ಅವರಿಗೂ ಮಗಳು ಇದ್ದಾಳೆ. ತಂದೆ-ತಾಯಿ ಇದ್ದಾರೆ. ಸಂಪಾದನೆ ಇಲ್ಲ’ ಎಂದು ಲಾಯರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
