AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಪ್ರಕರಣವೆಂದು ಮಕ್ಕಳಿಲ್ಲದ ಮಹಿಳೆಗೆ ಅನುಕಂಪದ ಹುದ್ದೆ:ಕೋರ್ಟ್ ಮಾನವೀಯತೆ ಆದೇಶ

ನಿರ್ದಿಷ್ಟ ಅನುದಾನಿತ ಕಾಲೇಜಿನಲ್ಲಿ ಉದ್ಯೋಗ ಖಾಲಿಯಿಲ್ಲ ಎಂಬ ಕಾರಣಕ್ಕಾಗಿ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ನಿರಾಕರಿಸಲು ಸಾಧ್ಯವಿಲ್ಲ. ರಾಜ್ಯದ ಇತರೆ ಅನುದಾನಿತ ಕಾಲೇಜಿನಲ್ಲಿ ಖಾಲಿಯಿರುವ ನೌಕರಿ ಹುಡುಕಿ ನೀಡಬೇಕಾಗುತ್ತದೆ ಎಂದು ಈ ಹಿಂದೆ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅದರಂತೆ ಇದೀಗ ಮತ್ತೊಂದು ಪ್ರಕರಣದಲ್ಲಿ ಮಕ್ಕಳಿಲ್ಲದ ಕಾರಣ 45 ವರ್ಷ ಮೀರಿದ ಮಹಿಳೆಗೆ ಅನುಕಂಪದ ಹುದ್ದೆ ನೀಡಿ ಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ.

ವಿಶೇಷ ಪ್ರಕರಣವೆಂದು ಮಕ್ಕಳಿಲ್ಲದ ಮಹಿಳೆಗೆ ಅನುಕಂಪದ ಹುದ್ದೆ:ಕೋರ್ಟ್ ಮಾನವೀಯತೆ ಆದೇಶ
Karnataka High Court
Ramesha M
| Edited By: |

Updated on: Aug 21, 2025 | 9:04 PM

Share

ಬೆಂಗಳೂರು, (ಆಗಸ್ಟ್ 21): ವಿಶೇಷ ಪ್ರಕರಣವೆಂದು ವಯೋಮಿತಿ ಮೀರಿದ ಮಹಿಳೆಗೆ (Woman) ಅನುಕಂಪದ ಹುದ್ದೆ ನೀಡಿ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ. NWKSRTC ಉದ್ಯೋಗಿಯಾಗಿದ್ದಾಗಲೇ ಲಕ್ಷ್ಮವ್ವ ಪತಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅನುಕಂಪದ ಹುದ್ದೆ ಕೋರಿ ಲಕ್ಷ್ಮವ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮಕ್ಕಳೂ ಇಲ್ಲದ 45 ವರ್ಷ ಮೀರಿದ ಮಹಿಳೆಗೆ ಅನುಕಂಪದ ಹುದ್ದೆ ನೀಡಿ NWKSRTCಗೆ ನಿರ್ದೇಶನ ನೀಡಿದೆ. ಮಕ್ಕಳಿಲ್ಲದ ಮಹಿಳೆಯಾದ್ದರಿಂದ ಮಾನವೀಯತೆಯಿಂದ ಪರಿಗಣಿಸಿ. ವಯೋಮಿತಿಯ ಕಠಿಣ ಹೇರಿಕೆಯಿಂದ ಅನ್ಯಾಯವಾಗಬಾರದು. ಇಂತಹ ಪ್ರಕರಣಗಳಲ್ಲಿ ಮಾನವೀಯತೆಯ ನೀತಿ ರೂಪಿಸಲು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್​ರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಗದಗ ಜಿಲ್ಲೆಯ ಶಿರಾಹಟ್ಟಿ ತಾಲೂಕಿನ ರಾಮಣ್ಣ NWKSRTC ಉದ್ಯೋಗಿಯಾಗಿದ್ದರು. ಆದ್ರೆ, ಅವರು 2021ರಲ್ಲಿ ಸಾವನ್ನಪ್ಪಿದ್ದರು. ಆದ್ರೆ, ರಾಮಣ್ಣ ಹಾಗೂ ಲಕವ್ವ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ಅನುಕಂಪದ ಹುದ್ದೆಯನ್ನು ತನಗೆ ನೀಡಬೇಕೆಂದು ಪತ್ನಿ ಲಕ್ಕವ್ವ NWKSRTC ಗೆ ಮನವಿ ಮಾಡಿದ್ದಳು. ಆದ್ರೆ, ವಯೋಮಿತಿ ಆಧಾರದ ಮೇಲೆ ಅನುಕಂಪದ ಹುದ್ದೆ ನೀಡಲು ಬರುವುದಿಲ್ಲ ಎಂದು NWKSRTC ಹೇಳಿದ್ದರು. ಇದನ್ನು ಪ್ರಶ್ನಿಸಿ ಲಕ್ಕವ್ವ ಹೈಕೋರ್ಟ್​ ಗೆ ಮೊರೆ ಹೋಗಿದ್ದರು.

ಇದೀಗ ಕೋರ್ಟ್ ಮಾನವೀಯತೆ ಆಧಾರದ ಮೇಲೆ ಲಕ್ಕವ್ವಳಿಗೆ ಅನುಕಂಪದ ಹುದ್ದೆ ನೀಡುವಂತೆ NWKSRTC ಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.