ಕೊಲೆಯಾದ ವರ್ಷಿತಾ ಮತ್ತು ಆರೋಪಿ ಚೇತನ್ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿದ ಪೊಲೀಸ್
ನಿನ್ನೆಯ ವರದಿಗಳ ಪ್ರಕಾರ ಚೇತನ್ ಕ್ಯಾನ್ಸರ್ ವ್ಯಾಧಿಯಿಂದ ಬಳಲುತ್ತಿದ್ದಾನೆ. ಅವನು ವರ್ಷಿತಾಳನ್ನು ಪ್ರೀತಿಸುತ್ತಿದ್ದ ಆದರೆ ಯುವತಿ ಬೇರೊಬ್ಬ ಯುವಕನೊಂದಿಗೆ ದೈಹಿಕ ಸಂಪರ್ಕವಿಟ್ಟುಕೊಂಡಿದ್ದಳು ಮತ್ತು ಗರ್ಭಿಣಿ ಕೂಡ ಆಗಿದ್ದಳಂತೆ, ಆಕೆ ತನಗೆ ಮೋಸ ಮಾಡಿದ್ದು ಗೊತ್ತಾಗಿ ಕುಪಿತಗೊಂಡ ಚೇತನ್ ಕೊಲೆ ಸಂಚು ರೂಪಿಸಿದನಂತೆ. ವಿಚಾರಣೆಯ ವೇಳೆ ಅವನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಚಿತ್ರದುರ್ಗ, ಆಗಸ್ಟ್ 21: ಚಿತ್ರದುರ್ಗದ ಪ್ರಥಮ ವರ್ಷ ಪದವಿ ವಿದ್ಯಾರ್ಥಿನಿ 19-ವರ್ಷದ ವರ್ಷಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತಷ್ಟು ಸುಳಿವುಗಳು ಸಿಕ್ಕಿವೆ. ಚೇತನ್ (Chetan) ಎಂಬ ಯುವಕನನ್ನು ನಿನ್ನೆಯೇ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು ಅವನು ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ. ಆಗಸ್ಟ್ 14 ರಂದು ವರ್ಷಿತಾ ಮತ್ತು ಚೇತನ್ ರಸ್ತೆಯ ಮೇಲೆ ನಡೆದು ಹೋಗುತ್ತಿರುವುದು ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ಮುಂದೆ ನಡೆದು ಹೋಗುತ್ತಿರುವವನೇ ಚೇತನ್ ಮತ್ತು ಅವನನ್ನು ವರ್ಷಿತಾ ಹಿಂಬಾಲಿಸುತ್ತಿದ್ದಾಳೆ. ಅವರಿಬ್ಬರು ದ್ವಿಚಕ್ರವಾಹನವೊಂದಕ್ಕೆ ಪೆಟ್ರೋಲ್ ಬಂಕೊಂದರಲ್ಲಿ ಇಂಧನ ತುಂಬಿಸಿಕೊಂಡಿರುವ ದೃಶ್ಯ ಕೂಡ ಅಲ್ಲಿನ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಚೇತನ್ನ ಪೂರ್ವನಿಯೋಜಿತ ಸಂಚಿಗೆ ವರ್ಷಿತಾ ಬಲಿಯಾಗಿರುವಳೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಚಿತ್ರದುರ್ಗ: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕನಿಂದಲೇ ವಿದ್ಯಾರ್ಥಿನಿಯ ಕೊಲೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

