Vijayapura: ನೇಣುಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ, ಬಾಲಕಿ ಮೃತದೇಹ ಪತ್ತೆ

|

Updated on: May 03, 2023 | 7:13 PM

ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಬಾಲಕಿಯ ಶವ ಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದ ಅಂಗಡಗೇರಿಯಲ್ಲಿ ನಡೆದಿದೆ.

Vijayapura: ನೇಣುಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ, ಬಾಲಕಿ ಮೃತದೇಹ ಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ವಿಜಯಪುರ: ನೇಣು ಬಿಗಿದುಕೊಂಡ (hanging) ಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಬಾಲಕಿಯ ಶವ ಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದ ಅಂಗಡಗೇರಿಯಲ್ಲಿ ನಡೆದಿದೆ. ಸಚಿನ ಮಾದರ ಹಾಗೂ ಸಕ್ಕುಬಾಯಿ ಮಾದರ ಮೃತರು. ಅಪ್ರಾಪ್ತರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಕೂಡಗಿ ಎನ್​ಟಿಪಿಸಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಕುರಿತಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಸಹೋದರರು ಸಾವನ್ನಪ್ಪಿರುವಂತಹ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಬಳಿ ನಡೆದಿದೆ.

ವೆಲ್ಡಿಂಗ್ ಕೆಲಸಗಾರರಾದ ಸುಹೇಲ್‌(27), ಸೈಯದ್(21) ಮೃತರು. ಮೃತ ಸೋದರರು ಸಾಗರದ ರಾಮನಗರ ಬಡಾವಣೆಯ ನಿವಾಸಿಗಳು. ಉಳವಿ ಗ್ರಾಮಕ್ಕೆ ಬೈಕ್‌ನಲ್ಲಿ ಮದುವೆಗೆ ತೆರಳುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸಾಗರದ ಉಪವಿಭಾಗೀಯ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹಗಳನ್ನು ರವಾನಿಸಲಾಗಿದೆ. ಸೊರಬ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪುತ್ತೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ: ನಾಲ್ವರು ಯುವಕರ ಬಂಧನ

ಮಹಿಳೆ ಮೇಲೆ ಹಲ್ಲೆ ನಡೆಸಿ ನಡು ರಸ್ತೆಯಲ್ಲಿ ಬಿಟ್ಟು ಹೋದ ಊಬರ್ ಚಾಲಕ ಅರೆಸ್ಟ್

ಬೆಂಗಳೂರು: ಕೋಟ್ಯಾಂತರ ಹೆಣ್ಣು ಮಕ್ಕಳು ಜೀವನ ಕಟ್ಟಿಕೊಂಡಿರುವ ಐಟಿ ಬಿಟಿ ಸಿಟಿ ಬೆಂಗಳೂರು ಹೆಣ್ಣು ಮಕ್ಕಳಿಗೆ ಸೇಫ್ ಇಲ್ಲ ಎಂದು ಪದೇ ಪದೇ ಸಾಬೀತಾಗುತ್ತಿದೆ. ಮಹಿಳೆಯರ ಮೇಲಿನ ಪುರುಷರ ದಬ್ಬಾಳಿಕೆ ಕಡಿಮೆಯಾಗಿಲ್ಲ. ಇತ್ತೀಚೆಗೆ ನಗರದಲ್ಲಿ ಊಬರ್ ಡ್ರೈವರ್​ನಿಂದ ಮಹಿಳೆಯ ಮೇಲೆ ದೌಜನ್ಯ ನಡೆದಿದೆ. ಊಬರ್ ಕ್ಯಾಬ್​ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿ ನಡು ರಸ್ತೆಯಲ್ಲಿ ಇಳಿಸಿ ಹೋಗಿದ್ದವನನ್ನು ಹೈಗ್ರೌಂಡ್ಸ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಮಿತ್ ಕುಮಾರ್ ಬಂಧಿತ ಆರೋಪಿ.

ಇಂದಿರಾನಗರದಿಂದ ಏರ್ಪೋರ್ಟ್​ಗೆ ಕ್ಯಾಬ್ ಬುಕ್ ಮಾಡಿದ್ದ ಮಹಿಳೆಯನ್ನು ಪಿಕ್ ಮಾಡಿದ್ದ ಊಬರ್ ಡ್ರೈವರ್ ಅಜಾಗರೂಕತೆಯಿಂದ ಹಾಗೂ ಅತೀ ವೇಗವಾಗಿ ಕಾರು ಡ್ರೈವ್ ಮಾಡಿದ್ದ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿ ಸ್ಯಾಂಕಿ ರಸ್ತೆಯಲ್ಲಿ ಬಿಟ್ಟು ತೆರಳಿದ್ದ. ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದರು. ವಿಚಾರಣೆ ವೇಳೆ ಆರೋಪಿಯ ಜಾತಕ ಬಯಲಾಗಿದೆ. ಆರೋಪಿ ಅಮಿತ್ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಳಗಾವಿ: ಯುವಕನನ್ನೇ ಬರ್ಬರ ಹತ್ಯೆಗೈದ ಮದ್ಯವ್ಯಸನಿ ಮಹಿಳೆ: ಏನಾಯಿತು ಅಂತೀರಾ? ಇಲ್ಲಿದೆ ನೋಡಿ

ಮೃತದೇಹ ಪಡೆದುಕೊಳ್ಳಲು ಹಣ ಕಟ್ಟಿದ ಪೊಲೀಸ್

ಬೆಂಗಳೂರು: ಬೈಕ್ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ್ದ ವೃದ್ಧ ಮೃತಪಟ್ಟಿದ್ದು ನಿಮ್ಹಾನ್ಸ್​ ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಬಳ್ಳಾರಿ ಮೂಲದ ಗಣೇಶ್​(60) ಎಂಬುವವರು ನಿನ್ನೆ(ಮೇ 1) ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುವಾಗ ಬೈಕ್​ ಡಿಕ್ಕಿಯಾಗಿ ಬೆಂಗಳೂರಿನ ಅಶೋಕ ಪಿಲ್ಲರ್​ ಬಳಿ ಅಸ್ವಸ್ಥರಾಗಿದ್ದರು. ಆದ್ರೆ ಬೆಡ್ ಇಲ್ಲ ಎಂಬ ಕಾರಣ ನೀಡಿದ ನಿಮ್ಹಾನ್ಸ್ ವೈದ್ಯರು ಚಿಕಿತ್ಸೆ ನಿರಾಕರಿಸಿದ್ದರು. ಆಗ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಿಸದೆ ಗಣೇಶ್ ಮೃತಪಟ್ಟಿದ್ದಾರೆ.

ಹೀಗಾಗಿ ಕುಟುಂಬಸ್ಥರು ಕಣ್ಣೀರು ಹಾಕಿದ್ದು ನಿಮ್ಹಾನ್ಸ್ ಚಿಕಿತ್ಸೆ ನೀಡಿದ್ದರೆ ಗಣೇಶ್ ಬದುಕುಳಿಯುತ್ತಿದ್ದರು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಘಟನೆಯಲ್ಲಿ ಬೈಕ್​ನಲ್ಲಿದ್ದ ಇಬ್ಬರು ಸವಾರರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:05 pm, Wed, 3 May 23