Belagavi: ಸುವರ್ಣಸೌಧದಲ್ಲಿ 7 ಮಹಾನ್ ನಾಯಕರ ಭಾವಚಿತ್ರಗಳ ಅನಾವರಣ, ಕಲಾವಿದ ಪೊನ್ನಪ್ಪ ಸಾಧನೆಯ ಚಿತ್ರಣ ಇಲ್ಲಿದೆ ನೋಡಿ

ಇಡೀ ವಿಶ್ವಕ್ಕೆ ಮಹಾ ಮಾನವೀಯತೆಯನ್ನು ಕಲಿಸಿದ ಗುರು ಬಸವಣ್ಣ. ಇಂತಹ ಮಹಾನ್ ಚೇತನ ಸೇರಿದಂತೆ ಇತರೆ 7 ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ಸಿಎಂ ಬೊಮ್ಮಾಯಿ ಅನಾವರಣ ಮಾಡಿದ್ಧಾರೆ. ಈ ಕಲಾಕೃತಿ ರಚಿಸಿದ ಕಲಾವಿದ ಕುರಿತಾದ ಸಚಿತ್ರ ವರದಿ ಇಲ್ಲಿದೆ ನೋಡಿ.

TV9 Web
| Updated By: ಸಾಧು ಶ್ರೀನಾಥ್​

Updated on: Dec 24, 2022 | 3:36 PM

ಇಡೀ ವಿಶ್ವಕ್ಕೆ ಮಹಾ ಮಾನವೀಯತೆಯನ್ನು ಕಲಿಸಿದ ಗುರು ಅಣ್ಣ ಬಸವಣ್ಣ. ಇಂತಹ ಮಹಾನ್ ಚೇತನ ಸೇರಿದಂತೆ ಇತರೆ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ಅನಾವರಣ ಮಾಡಲಾಗಿದೆ. ಚಳಿಗಾಲದ ಆಧಿವೇಶದ ಆರಂಭದ ದಿನ ನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಏಳು ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಅನಾವರಣ ಮಾಡಿದ್ಧಾರೆ.

1 / 15
ಅದರಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಪ್ರಮುಖವಾಗಿದೆ. ತೈಲ ವರ್ಣದಲ್ಲಿನ ಬಸವಣ್ಣನವರ ಭಾವಚಿತ್ರವನ್ನು ರಚಿಸಿದ್ದು ಅದೇ ಬಸವನಾಡಿದ ಕಲಾವಿದ ಎಂಬುದು ವಿಶೇಷ. ಸುವರ್ಣಸೌಧಲ್ಲಿ ರಾರಾಜಿಸುತ್ತಿರೋ ಬಸವಣ್ಣನವರ ಭಾವಚಿತ್ರದ ಕಲಾಕೃತಿ ರಚಿಸಿದ ಕಲಾವಿದ ಕುರಿತಾ ಸಚಿತ್ರ ವರದಿ ಇಲ್ಲಿದೆ ನೋಡಿ.

2 / 15
3 ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಆಧಿವೇಶ ನಡೆಸಲಾಗುತ್ತಿದೆ. ಆಧಿವೇಶ ಆರಂಭದ ದಿನ ಡಿಸೆಂಬರ್ 19 ರಂದು  ಸುವರ್ಣಸೌಧಲ್ಲಿ ಏಳು ಮಹಾನ್ ನಾಯಕರ ಭಾವಚಿತ್ರಗಳನ್ನು ಅನಾವರಣ ಮಾಡಲಾಗಿದೆ.

3 / 15
ಅದರಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅತ್ಯಂತ ಪ್ರಮುಖವಾಗಿದೆ. ಸಭಾಪತಿಗಳ ಆಸನದ ಹಿಂದುಗಡೆ ಹಾಗೂ ಇತರೆ ಮಹಾನ್ ವ್ಯಕ್ತಿಗಳ ಭಾವಚಿತ್ರಗಳ ಮಧ್ಯದ ಸ್ಥಳದಲ್ಲಿ ನಿಂತ ಭಂಗಿಯಲ್ಲಿರೋ ಅಣ್ಣ ಬಸವಣ್ಣನವರ ಭಾವಚಿತ್ರ ಎಲ್ಲರನ್ನೂ ಸೆಳೆಯುತ್ತಿದೆ.

4 / 15
ವಿಶ್ವಗುರು ಬಸವಣ್ಣ, ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದ, ಸುಭಾಸ್ ಚಂದ್ರ ಭೋಸ್, ಡಾ ಬಿ ಆರ್ ಅಂಬೇಡ್ಕರ್, ಸರ್ದಾರ ವಲ್ಲಭಬಾಯಿ ಪಟೇಲ್, ವೀರ ಸಾವರ್ಕರ್ ಹೀಗೆ ಏಳು ಜನ ಮಹಾತ್ಮರ ಫೋಟೋಗಳನ್ನು ಸುವರ್ಣಸೌಧದಲ್ಲಿ ಹಾಕಲು ಸರ್ಕಾರ ನಿರ್ಧಾರ ಮಾಡಿತ್ತು.

5 / 15
ಏಳು ಜನ ಮಹಾತ್ಮರ ಪೋಟೋಗಳನ್ನು ಕ್ಯಾನವಾಸ್ ನಲ್ಲಿ ತೈಲ ವರ್ಣದಲ್ಲಿ ಬಿಡಿಸಲು ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸೂಚನೆ ನೀಡಲಾಗಿತ್ತು. ಏಳು ಜನ ಕಲಾವಿದರಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಆಧ್ಯಕ್ಷರು ಸೂಚನೆ ನೀಡಿ 5 ಅಡಿ ಅಗಲ ಹಾಗೂ 8 ಅಡಿ ಎತ್ತರದ ಭಾವಚಿತ್ರ ಬಿಡಿಸಲು ಸೂಚನೆ ನೀಡಲಾಗಿತ್ತು. ಅದಕ್ಕಾಗಿ ಕ್ಯಾನವಾಸ್ ಹಾಗೂ ಬಣ್ಣಗಳನ್ನು ಅಕಾಡೆಮಿಯಿಂದಲೇ ನೀಡಲಾಗಿತ್ತು.

6 / 15
ಈ ರೀತಿ ಭಾವಚಿತ್ರಗಳ ಪೈಕಿ ಬಸವಣ್ಣನವರ ಭಾವಚಿತ್ರ ಬಿಡಿಸಲು ವಿಜಯಪುರ ಮೂಲದ ಪೊನ್ನಪ್ಪ ಕಡೇಮಿ ಎಂಬ ಕಾಲವಿದರಿಗೆ ನೀಡಲಾಗಿತ್ತು. ಸತತ ಎರಡು ತಿಂಗಳ ಕಾಲ ಸಮಯ ತೆಗೆದುಕೊಂಡು ನಿಂತ ಭಂಗಿಯಲ್ಲಿರೋ ಅಣ್ಣ ಬಸವಣ್ಣನವರ ಭಾವಚಿತ್ರವನ್ನು ಕ್ಯಾನವಾಸ್ ನಲ್ಲಿ ತೈಲ ವರ್ಣದಲ್ಲಿ ಬಿಡಿಸಿದ್ದಾರೆ ವಿಜಯಪುರದ ಕಲಾವಿದ ಕಡೇಮನಿ ಅವರು.

7 / 15
ತಾವು ರಚಿಸಿದ ಬಸವಣ್ಣನವರ ಭಾವಚಿತ್ರ ಬೆಳಗಾವಿಯ ಸುವರ್ಣಸೌಧದಲ್ಲಿ ಅಜರಾಮರವಾಗಿ ಉಳಿಯುತ್ತದೆ. ಬಸವಣ್ಣನವರ ಜನ್ಮಭೂಮಿಯ ಕಲಾವಿದನಿಗೆ ಬಸಣ್ಣನವರ ಭಾವಚಿತ್ರ ಬಿಡಿಸಲು ನೀಡಿದ್ದು ಜೀವನದ ದೊಡ್ಡ ಸಾಧನೆ ಎಂದು ಸಂತಸ ಪಟ್ಟಿದ್ದಾರೆ ಕಲಾವಿದ ಕಡೇಮನಿ ಅವರು.

8 / 15
ತಮ್ಮ ಕೈಯ್ಯಲ್ಲಿ ಅರಳಿದ ವಿಶ್ವಗುರುವಿನ ಭಾವಚಿತ್ರ ಸುವರ್ಣಸೌಧದಲ್ಲಿ ಅನಾವರಣಗೊಂಡಿದೆ ಎಂದು ಖುಷಿ ಪಟ್ಟಿದ್ದಾರೆ. ಬಸವಣ್ಣನವರ ಭಾವಚಿತ್ರ ರಚಿಸಿದ್ದಕ್ಕಾಗಿ  ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಆಧ್ಯಕ್ಷರ ಮೂಲಕ ಸರ್ಕಾರ ಒಂದು  ಲಕ್ಷ ರೂಪಾಯಿ ಗೌರವ ಧನ ನೀಡಿದೆ. ಒಟ್ಟಾರೆ ಬಸವ ಜನ್ಮಭೂಮಿಯ ಕಲಾವಿದನಿಗೆ ಬಸವಣ್ಣನವರ ಭಾವಚಿತ್ರ ರಚಿಸಲು ಅವಕಾಶ ಕೊಟ್ಟಿದ್ದು ಹಾಗೂ ಅದನ್ನು ಸುವರ್ಣಸೌಧದಲ್ಲಿ ಹಾಕಿದ್ದು ಇಡೀ ಜಿಲ್ಲೆಯ ಜನರಿಗೆ, ಕಲಾವಿದರಿಗೆ ಸಂತಸ ನೀಡಿದೆ. (ವರದಿ: ಅಶೋಕ ಯಡಳ್ಳಿ,  ಟಿವಿ 9, ವಿಜಯಪುರ)

9 / 15
ವಿಜಯಪುರ ಜಿಲ್ಲೆಯವರಾದ ಕಲಾವಿದ ಪೊನ್ನಪ್ಪ ಕಳೆದ 40 ವರ್ಷಗಳಿಂದ ವಿವಿಧ ತೈಲ ವರ್ಣದ ಕಲಾಕೃತಿಗಳನ್ನು ರಚನೆ ಮಾಡುತ್ತಾ ಬಂದಿದ್ಧಾರೆ. ಧಾರವಾಡದ ಎಎಂಜಿಡಿ ಆರ್ಟ್ ಕಾಲೇಜಿನಲ್ಲಿ ಮದವಿ ಪಡೆದ ಇವರು ಬಳಿಕ  ಹಂಪಿಯ ಕನ್ನಡ ವಿವಿಯಲ್ಲಿ‌ ಮಾಸ್ಟರ್ ಆಫ್ ವಿಶ್ಯುವಲ್ ಆರ್ಟ್ ಪದವಿ ಪಡೆದಿದ್ದಾರೆ.

10 / 15
ವಿಜಯಪುರ ಜಿಲ್ಲೆಯವರಾದ ಕಲಾವಿದ ಪೊನ್ನಪ್ಪ ಕಳೆದ 40 ವರ್ಷಗಳಿಂದ ವಿವಿಧ ತೈಲ ವರ್ಣದ ಕಲಾಕೃತಿಗಳನ್ನು ರಚನೆ ಮಾಡುತ್ತಾ ಬಂದಿದ್ಧಾರೆ. ಧಾರವಾಡದ ಎಎಂಜಿಡಿ ಆರ್ಟ್ ಕಾಲೇಜಿನಲ್ಲಿ ಮದವಿ ಪಡೆದ ಇವರು ಬಳಿಕ  ಹಂಪಿಯ ಕನ್ನಡ ವಿವಿಯಲ್ಲಿ‌ ಮಾಸ್ಟರ್ ಆಫ್ ವಿಶ್ಯುವಲ್ ಆರ್ಟ್ ಪದವಿ ಪಡೆದಿದ್ದಾರೆ. ಅಲ್ಲಿಂದ ವಿಜಯಪುರ ನಗರದ ಬಿಎಲ್ಡಿಇ ಸಂಸ್ಥೆಯ ಶ್ರೀ ಸಿದ್ದೇಶ್ವರ ‌ಚಿತ್ರಕಲಾ‌ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಾರಗಿ ಬಳಿಕ  ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿ ಇದೀಗಾ ಅಲ್ಲೇ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

11 / 15
ನಲವತ್ತು ವರ್ಷಗಳಿಂದ ಪೇಂಟಿಂಗ್, ತೈಲ ವರ್ಣ ಕಲಾಕೃತಿ, ಕ್ಯಾನ್ವಾಸ್, ಪೆನ್ಸಿಲ್ ಆರ್ಟ್, ಅಕ್ರೇಲಿಕ್ ಆರ್ಟ್, ಪೊರ್ಟೆಡ್ ಆರ್ಟ್ ನಲ್ಲಿ ಸೇವೆ ಮಾಡಿಕೊಂಡು ಬಂದಿದ್ದಾರೆ. ಪತ್ನಿ ಅನ್ನಪೂರ್ಣ ಹಾಗೂ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಇವರಿಗೆ.

12 / 15
ಇಬ್ಬರು ಗಂಡು ಮಕ್ಕಳ ಪೈಕಿ ಓರ್ವ ಪುತ್ರ ವಸಂತ ಸರ್ಕಾರಿ ಸೇವೆಯಲ್ಲಿದ್ದರೆ  ಮತ್ತೋರ್ವ ಪುತ್ರ ವರುಣ ತಂದೆಯ ಹಾದಿಯಲ್ಲೇ ಕಲಾವಿದನಾಗಿ ಪ್ರಯಾಣ ಆರಂಭಿಸಿದ್ದಾರೆ.  ಕಲಾವಿದ ಪೊನ್ನಪ್ಪ ಕಡೇಮನಿ ಅವರ ಸಾಧನೆಗೆ ಮೈಸೂರು ದಸರಾ ಅವಾರ್ಡ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಲಲಿತ‌ಕಲಾ‌ ಅಕಾಡೆಮಿ ಪ್ರಶಸ್ತಿ, ಡಿ ವಿ ಹಾಲಬಾವಿ ರಾಷ್ಟ್ರೀಯ ಪ್ರಶಸ್ತಿ, ಗದುಗಿನ ಟಿ ಪಿ ಅಕ್ಕಿ ಚಿನ್ನದ ಪದಕ,  ಸಿದ್ದೇಶ್ವರ ರತ್ನ ಪ್ರಶಸ್ತಿ ಅರಸಿ ಬಂದಿವೆ.

13 / 15
ಇನ್ನು ಕಲಾ ಜೀವನದಲ್ಲಿ ಪೊನ್ನಪ್ಪ ಅವರು 10 ಏಕ ವ್ಯಕ್ತಿ ಕಲಾಪ್ರದರ್ಶನ ಹಾಗೂ  120 ಕ್ಕೂ ಆಧಿಕ ಕಲಾ ಪ್ರದರ್ಶನ ಮಾಡಿದ್ದಾರೆ.  ಇಂತಹ ಸಾಧಕ ಕಲಾವಿದರಿಗೆ ಸುವರ್ಣಸೌಧದಲ್ಲಿ ಹಾಕಲಾಗಿರೋ ಬಸವಣ್ಣನವರ ಭಾವಚಿತ್ರ ರಚಿಸಿಲು ಅವಕಾಶ ಸಿಕ್ಕಿದ್ದು ವಿಜಯಪುರ ಜಿಲ್ಲೆಯ ಕಲಾವಿದರಿಗೆ ಸಂದ ಗೌರವವಾಗಿದೆ ಎಂದು ಕಲಾವಿದರು ಸಂತಸ ವ್ಯಕ್ತಪಡಿಸಿದ್ದಾರೆ.

14 / 15
ಸತತ ಎರಡು ತಿಂಗಳ ಪರಿಶ್ರಮದಿಂದ ಬಸವಣ್ಣನವರ ಭಾವಚಿತ್ರವನ್ನು ಬಿಡಿಸಿರೋ ಪೊನ್ನಪ್ಪರಿಗೆ ಇದು ಸುವರ್ಣಸೌಧಲ್ಲಿ ಅನಾವರಣ ಆಗುತ್ತದೆ ಎಂಬುದೂ ಸಹ ಗೊತ್ತಿಲ್ಲಾ. ಯಾವಾಗ ಆಧಿವೇಶದ ಆರಂಭವಾಗುತ್ತಿದ್ದಂತೆ ಸಿಎಂ ಬೊಮ್ಮಾಯಿ ಅವರು ಮಹಾನ್ ವ್ಯಕ್ತಿಗಳ ಭಾವಚಿತ್ರ ಅನಾವರಣ ಮಾಡಿದರೋ ಆಗಲೇ ಪೊನ್ನಪ್ಪರಿಗೆ ಆಶ್ಚರ್ಯ ಹಾಗೂ ಖುಷಿ ಇಮ್ಮಡಿಯಾಗಿದೆ.

15 / 15
Follow us
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ

ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ

ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ

Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು

ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು

ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ