ವಿಜಯಪುರ ತಹಶೀಲ್ದಾರ್ ವಾಹನ ಚಾಲಕ ನೇಣಿಗೆ ಶರಣು
ವಿಜಯಪುರ: ತಹಶೀಲ್ದಾರ್ ಮೋಹನಕುಮಾರಿಯವರ ಖಾಸಗಿ ವಾಹನ ಚಾಲಕ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 39 ವರ್ಷದ ಆರೀಫ್ ಜುನೇದಿ ಮೃತ ದುರ್ದೈವಿ. ನಗರದ ನೂತನ ಪ್ರವಾಸಿ ಕಟ್ಟಡದ ಕಿಟಕಿಗೆ ಆರೀಫ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಇವರು ಕಳೆದ ನಾಲ್ಕು ದಿನಗಳಿಂದ ಮನೆಗೂ ಹೋಗದೆ, ಸೇವೆಗೂ ಹಾಜರಾಗಿರಲಿಲ್ಲ ಎನ್ನಲಾಗಿದೆ. ಆರೀಫ್ ಕಾಣೆಯಾಗಿರುವ ಬಗ್ಗೆ ಅವರ ಕುಟುಂಬಸ್ಥರು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರಿಗೆ […]
ವಿಜಯಪುರ: ತಹಶೀಲ್ದಾರ್ ಮೋಹನಕುಮಾರಿಯವರ ಖಾಸಗಿ ವಾಹನ ಚಾಲಕ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 39 ವರ್ಷದ ಆರೀಫ್ ಜುನೇದಿ ಮೃತ ದುರ್ದೈವಿ.
ನಗರದ ನೂತನ ಪ್ರವಾಸಿ ಕಟ್ಟಡದ ಕಿಟಕಿಗೆ ಆರೀಫ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಇವರು ಕಳೆದ ನಾಲ್ಕು ದಿನಗಳಿಂದ ಮನೆಗೂ ಹೋಗದೆ, ಸೇವೆಗೂ ಹಾಜರಾಗಿರಲಿಲ್ಲ ಎನ್ನಲಾಗಿದೆ.
ಆರೀಫ್ ಕಾಣೆಯಾಗಿರುವ ಬಗ್ಗೆ ಅವರ ಕುಟುಂಬಸ್ಥರು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರಿಗೆ ಇಂದು ಸಾಯಂಕಾಲ 5 ಗಂಟೆ ವೇಳೆಗೆ ಚಾಲಕನ ಶವ ಪತ್ತೆಯಾಗಿದೆ. ಇನ್ನು ಸ್ಥಳಕ್ಕೆ ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ ಹಾಗೂ DySP ಲಕ್ಷ್ಮೀ ನಾರಾಯಣ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿದ್ದು, ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
Published On - 7:30 pm, Sat, 20 June 20