ವಿಜಯಪುರ, ಫೆಬ್ರವರಿ 13: ಯುವಕನಮೊಬ್ಬ (youth) ರೋಷಾವೇಶದಿಂದ ಯುವತಿಗೆ ಚಪ್ಪಲಿಯಿಂದ (chappal) ಥಳಿಸುವ ದೃಶ್ಯಗಳು ಸಿಸಿ ಕೆಮೆರಾ ವಿಡಿಯೋದಲ್ಲಿ ಸೆರೆಯಾಗಿದೆ. ವಿಜಯಪುರ ತಾಲೂಕಿನ ನಾಗಠಾಣಾ ಗ್ರಾಮದಲ್ಲಿ ನಿನ್ನೆ ಸೋಮವಾರ ಮಧ್ಯಾಹ್ನ ಘಟನೆ ನಡೆದಿದ್ದು, ಶ್ರೀಶೈಲ ಮಸಳಿ ಎಂಬ ಯುವಕ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ನಾಗಠಾಣಾ ಗ್ರಾಮದ (Nagathan, Vijayapura) ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಅನ್ಯ ಕೋಮಿನ ಯುವತಿ ಥಳಿತಕ್ಕೊಳಗಾದ ಮಹಿಳೆ.
ಆರೋಪಿ ಶ್ರೀಶೈಲ ಅನ್ಯಕೋಮಿನ ಯುವತಿಗೆ ಕೆಲ ದಿನಗಳಿಂದ ಚುಡಾಯಿಸುತ್ತಿದ್ದ. ನಿನ್ನೆ ಯುವತಿ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ತೆರಳುವಾಗ ಮತ್ತೆ ಮತ್ತೆ ಚುಡಾಯಿಸಿದ್ದಾನೆ. ಆಗ ಅನ್ಯ ಕೋಮಿನ ಯುವತಿಯು ಯುವಕನಿಗೆ ಚಪ್ಪಲಿ ತೋರಿಸಿದ್ದಾರೆ.
Also Read: ಮುಂದುವರೆದ ಬೀಟಮ್ಮ ಗ್ಯಾಂಗ್ ಉಪಟಳ; ಛತ್ರಿಮರ ದೇಗುಲ ಬಳಿ ಬೀಡುಬಿಟ್ಟ 26 ಕಾಡಾನೆಗಳು
ಇದರಿಂದ ಆಕ್ರೋಶಗೊಂಡ ಶ್ರೀಶೈಲ ಕಂಪ್ಯೂಟರ್ ತರಬೇತಿ ಕೇಂದ್ರದ ಒಳ ಹೋಗಿ ಯುವತಿಯನ್ನು ಹೊರ ತಂದು ಚಪ್ಪಲಿಯಿಂದ ಥಳಿಸಿದ್ದಾನೆ. ಈ ಬಗ್ಗೆ ಯುವತಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಯುವಕ ಶ್ರೀಶೈಲ ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನ್ಯಾಯಕ್ಕಾಗಿ ಯುವತಿ ಹಾಗೂ ಪೋಷಕರು ಒತ್ತಾಯಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ