ಕಾರವಾರ: ಕೊರೊನಾ ಸೋಂಕು ಹರಡುವಿಕೆ ತಡೆಯಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಮನೆಗೆ ತೆರಳಿ ಜ್ವರದ ಸರ್ವೆ ನಡೆಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ತಿಳಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಹಳ್ಳಿಗರ ಸರ್ವೆ ನಡೆಸಲಿದ್ದಾರೆ. ಕೆಮ್ಮು, ಜ್ವರ, ನೆಗಡಿ ಲಕ್ಷಣಗಳಿದ್ದರೆ ಸ್ಥಳದಲ್ಲೇ ಆ್ಯಂಟಿಜೆನ್ ಟೆಸ್ಟ್ ನಡೆಸಲಾಗುವುದು. ಮುಂದೆ ಕೊರೊನಾ ಬರುವ ಲಕ್ಷಣಗಳಿದ್ದರೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೊರೊನಾ ಪೀಡಿತರು ದಾಖಲಾಗುವ ಸಂಖ್ಯೆ ಇಳಿಕೆಯಾಗಿದ್ದು, ಮರಣ ಪ್ರಮಾಣವೂ ಇಳಿಕೆಯಾಗಿದೆ. ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಯಾರೂ ಸಹ ಮುಚ್ಚಿಟ್ಟುಕೊಳ್ಳಬೇಡಿ. ಸರ್ಕಾರದ ಮೂಲಕವೇ ಬೆಡ್ ವಿತರಣೆ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿ ಕೊವಿಡ್ನಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಈ ಗುರಿ ಸಾಧಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಉತ್ತರ ಕನ್ನಡದಲ್ಲಿ ಕಡಿಮೆಯಿಲ್ಲ ಸೋಂಕಿನ ಪ್ರಮಾಣ
ಉತ್ತರ ಕನ್ನಡ ಕೊವಿಡ್ ಸೋಂಕಿನ ಪಾಸಿಟಿವಿಟಿ ದರದಲ್ಲಿ ದೇಶಮಟ್ಟದಲ್ಲಿ ಸ್ಥಾನ ಗಿಟ್ಟಿಸಿತ್ತು. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉತ್ತರ ಕನ್ನಡಕ್ಕೆ ಸೋಂಕು ಹರಡದಂತೆ ತಡೆಯಲು ಸದ್ಯದ ಮಟ್ಟಿಗೆ ಅಗತ್ಯ ಇರುವ ಕ್ರಮಗಳನ್ನು ಬಿಗಿಯಾಗಿಯೇ ಕೈಗೊಂಡಿದ್ದಾರೆ. ಮೇ 16ರಿಂದ ಜಿಲ್ಲೆಯ ರಸ್ತೆಗಳಲ್ಲಿ ಯಾವುದೇ ಖಾಸಗಿ ವಾಹನ ಓಡಾಡಬಾರದು ಎಂದು ಆದೇಶಿಸಿದ್ದಾರೆ. ಅಲ್ಲದೇ ಅವರ ಸ್ವಂತ ವಿಧಾನಸಭಾ ಕ್ಷೇತ್ರ ಯಲ್ಲಾಪುರದ ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲೂ ಸ್ವಂತ ಖರ್ಚಿನಲ್ಲಿ ಹೆಬ್ಬಾರ್ ಕೊವಿಡ್ ಹೆಲ್ಪ್ಲೈನ್ ಆರಂಭಿಸಿದ್ದಾರೆ. ಈ ಸೇವೆ ಕೊವಿಡ್ ಸೋಂಕಿತರ ಸಕಲ ಆಗುಹೋಗುಗಳನ್ನು ಉಚಿತವಾಗಿ ನೋಡಿಕೊಳ್ಳಲಿದೆ. ಜತೆಗೆ 40 ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದರೆ ಕಂಟೇನ್ಮೆಂಟ್ ಝೋನ್ ಮಾಡುವುದು, ಮದುವೆಗಳಿಗೆ ನಿಯಂತ್ರಣ ಹೇರುವುದು ಸೇರಿದಂತೆ ಮುಂತಾದ ಆದೇಶಗಳನ್ನು ಸಚಿವ ಶಿವರಾಮ್ ಹೆಬ್ಬಾರ್ ಹೊರಡಿಸಿದ್ದಾರೆ.
ಕೊವಿಡ್ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ ನಟಿ ಹರ್ಷಿಕ ಪೂಣಚ್ಚ, ನಟ ಭುವನ್ ಪೊನ್ನಣ್ಣ; ರೋಗಿಗಳು ಫುಲ್ ಖುಷ್
(Village Covid Survey will be Conducted in Uttara Kannada district to stop Corona spread)