ಕೊವಿಡ್ ಟೈಮ್‌ನಲ್ಲಿ ಅಧಿಕಾರಿಗಳ ಮೋಜು-ಮಸ್ತಿ.. ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ನಿನ್ನೆ ಹಿರಿಯ ಅರಣ್ಯಾಧಿಕಾರಿಗಳ ತಂಡ ಪಾರ್ಟಿ ಮಾಡಲು 10ಕ್ಕೂ ಹೆಚ್ಚು ವಾಹನಗಳಲ್ಲಿ ಚಿಕ್ಕಮಗಳೂರಿನಿಂದ ಸಂತವೇರಿ ಸಮೀಪದ ‘ಗೇಮ್ ಫಾರೆಸ್ಟ್‌’ಗೆ ಹೊರಟಿದ್ದರು. ಆದರೆ ಸಂತವೇರಿ ಬಳಿ ವಾಹನ ತಡೆದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಇದೆ. ಅದರಲ್ಲೂ ಗಾಡಿಗಳನ್ನು ಬಿಡಬೇಡಿ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಒಂದೋ ಎರಡೋ ವಾಹನಗಳು ಹೋದ್ರೆ ಪರವಾಗಿಲ್ಲ.

ಕೊವಿಡ್ ಟೈಮ್‌ನಲ್ಲಿ ಅಧಿಕಾರಿಗಳ ಮೋಜು-ಮಸ್ತಿ.. ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ಅಧಿಕಾರಿಗಳನ್ನು ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

Updated on: May 21, 2021 | 3:24 PM

ಚಿಕ್ಕಮಗಳೂರು: ಮಹಾಮಾರಿ ಕೊರೊನಾ ಸಂಕಷ್ಟದ ಸಮಯದಲ್ಲೂ ಅಧಿಕಾರಿಗಳು ಮೋಜು-ಮಸ್ತಿಯಲ್ಲಿ ತೊಡಗಿಕೊಂಡಿದ್ದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಂತವೇರಿ ಬಳಿ ನಡೆದಿದೆ.

ನಿನ್ನೆ ಹಿರಿಯ ಅರಣ್ಯಾಧಿಕಾರಿಗಳ ತಂಡ ಪಾರ್ಟಿ ಮಾಡಲು 10ಕ್ಕೂ ಹೆಚ್ಚು ವಾಹನಗಳಲ್ಲಿ ಚಿಕ್ಕಮಗಳೂರಿನಿಂದ ಸಂತವೇರಿ ಸಮೀಪದ ‘ಗೇಮ್ ಫಾರೆಸ್ಟ್‌’ಗೆ ಹೊರಟಿದ್ದರು. ಆದರೆ ಸಂತವೇರಿ ಬಳಿ ವಾಹನ ತಡೆದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಇದೆ. ಅದರಲ್ಲೂ ಗಾಡಿಗಳನ್ನು ಬಿಡಬೇಡಿ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಒಂದೋ ಎರಡೋ ವಾಹನಗಳು ಹೋದ್ರೆ ಪರವಾಗಿಲ್ಲ. ಆದ್ರೆ 10-15 ವಾಹನಗಳು ಹೋಗ್ತಿವೆ. ಕೊರೊನಾ ಟೈಮಿನಲ್ಲಿ ನಿಮಗೆ ಮೋಜು-ಮಸ್ತಿ ಬೇಕಾ? ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ಗ್ರಾಮಸ್ಥರಿಂದ ಘೇರಾವ್ ಹಿನ್ನೆಲೆ ಅಧಿಕಾರಿಗಳು ವಾಪಸ್ ಹೋಗಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ ಹೊರಗೆ ತನಿಖೆ ವರ್ಗಾಯಿಸಬೇಕು ಎಂಬ ಪರಮ್ ಬಿರ್ ಸಿಂಗ್ ಮನವಿ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಮುಂಬೈ ಪೊಲೀಸ್ ಇನ್​ಸ್ಪೆಕ್ಟರ್