Viral Video: ಏಳುಸುತ್ತಿನ ಕೋಟೆಯಲ್ಲಿ ಕಲ್ಲಿನ ಗೋಡೆ ಏರಿದ ಐಪಿಎಸ್ ಅಧಿಕಾರಿ! ವಿಡಿಯೋ ಇಲ್ಲಿದೆ ನೋಡಿ

Edited By:

Updated on: Jun 28, 2022 | 2:12 PM

ಮಂಕಿ ಮ್ಯಾನ್ ಜ್ಯೋತಿರಾಜ್ ರೀತಿಯಲ್ಲಿ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರು ಚಿತ್ರದುರ್ಗದ ಏಳುಸುತ್ತಿನ ಕೋಟೆಯಲ್ಲಿ ಕಲ್ಲಿನ ಗೋಡೆಯನ್ನು ಹತ್ತಿ ಸಾಹಸ ಮೆರೆದಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಚಿತ್ರದುರ್ಗ: ಮಂಕಿ ಮ್ಯಾನ್ ಜ್ಯೋತಿರಾಜ್ ರೀತಿಯಲ್ಲಿ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರು ಕೋಟೆಯೊಂದರ ಕಲ್ಲಿನ ಗೋಡೆಯನ್ನು ಹತ್ತಿ ಸಾಹಸ ಮೆರೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಕೋಟೆನಾಡು ಚಿತ್ರದುರ್ಗದಲ್ಲಿನ ಏಳುಸುತ್ತಿನ ಕೋಟೆಯಲ್ಲಿನ ಕಲ್ಲಿನ ಗೋಡೆಯನ್ನು ಹತ್ತಿದ ಶಶಿಕುಮಾರ್, ನಮ್ಮೂರು ನಮ್ಮ ಹೆಮ್ಮೆ ಎಂದು ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಐಪಿಎಸ್ ಅಧಿಕಾರಿಯವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published on: Jun 28, 2022 02:12 PM