ಜಲ ಸಂಪನ್ಮೂಲ ಇಲಾಖೆ ನೇಮಕಾತಿ 2022 ಅಧಿಸೂಚನೆ ಪ್ರಕಟ
ಕರ್ನಾಟಕ ಜಲಸಂಪನ್ಮೂಲ ಇಲಾಖೆ ನೇಮಕಾತಿ 2022, 155 ಗ್ರೂಪ್ ಸಿ ದ್ವಿತೀಯ ದರ್ಜೆಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬೆಂಗಳೂರು: ಕರ್ನಾಟಕ ಜಲ ಸಂಪನ್ಮೂಲ ಇಲಾಖೆ (Karnataka water resources department) ನೇಮಕಾತಿ 2022, 155 ಗ್ರೂಪ್ ಸಿ ದ್ವಿತೀಯ ದರ್ಜೆಯ ಸಹಾಯಕ ಹುದ್ದೆಗಳಿಗೆ (Group C Second Division Assistant) ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ (Application) ಸಲ್ಲಿಸಬಹುದಾಗಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 11, 2022 ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 8, 2022 ಇದೆ.
ಇದನ್ನು ಓದಿ: IREL Recruitment 2022: ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜಲಸಂಪನ್ಮೂಲ ಇಲಾಖೆ ನೇಮಕಾತಿ 2022- ಅಧಿಸೂಚನೆ ಲಿಂಕ್ ಇಲ್ಲಿದೆ
- ಅಧಿಕೃತ ವೆಬ್‌ಸೈಟ್ waterresources.karnataka.gov.in ಗೆ ಭೇಟಿ ನೀಡಿ
- ನಂತರ ಆನ್‌ಲೈನ್ ಅರ್ಜಿ ನಮೂನೆಯ ಮೇಲೆ ಕ್ಲಿಕ್ ಮಾಡಿ – ಜುಲೈ 11, 2022 ರಂದು ಬಿಡುಗಡೆ ಮಾಡಲಾಗುತ್ತದೆ.
- ನೋಂದಾಯಿಸಿಕೊಳ್ಳಿ ನಂತರ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತನ್ನು ಸ್ವೀಕರಿಸುತ್ತಾರೆ.
- ಬಳಿಕ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ನೊಂದಿಗೆ ಲಾಗಿನ್ ಮಾಡಿ
- ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ನಂತರ ಶುಲ್ಕವನ್ನು ಪಾವತಿಸಿ ಕೊನೆಗೆ ಸಬ್ಮಿಟ್ ಕೊಡಿ
- ಫಾರ್ಮ್ನ್ನು ಡೌನ್‌ಲೋಡ್ ಮಾಡಿ
ಇದನ್ನು ಓದಿ: POWERGRID Recruitment 2022: ಪವರ್ಗ್ರೀಡ್ ನೇಮಕಾತಿ: ಯುವಕರಿಗೆ ಇಲ್ಲಿದೆ ಸುವರ್ಣಾವಕಾಶ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯಲ್ಲಿರುವ ಎಲ್ಲಾ ಸೂಚನೆಗಳು ಮತ್ತು ಅಗತ್ಯ ವಿವರಗಳನ್ನು ಓದಿ. ಫಾರ್ಮ್‌ಗಳನ್ನು ಜುಲೈ 11, 2022 ರಂದು ಬಿಡುಗಡೆ ಮಾಡಲಾಗುತ್ತದೆ. ನಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಪ್ರಕಟಣೆಗಳಿಗಾಗಿ ವೈಬ್ಸೈಟ್ಗೆ ಭೇಟಿ ನೀಡಿ.