ಬೆಂಗಳೂರು: ಚಿತ್ರಸಂತೆ ಯಾವಾಗ ಶುರುವಾಗುತ್ತೊ ಅಂತ ಕಾಯುವ ತುಂಬಾ ಜನ ಕಲಾರಸಿಕರಿದ್ದಾರೆ. ಆದ್ರೆ ಈ ಬಾರಿಯ ಚಿತ್ರಸಂತೆಗೆ ಕೊರೊನಾ ಅಡ್ಡಿಯಾಗಿದೆ. ಈ ವರ್ಷ ಚಿತ್ರಸಂತೆಗೆ ಹೋಗಬೇಕೆಂದುಕೊಂಡವರಿಗೆ ನಿರಾಸೆಯಾಗಿದೆ. ಯಾಕಂದ್ರೆ ಈ ಬಾರಿಯ ಚಿತ್ರಸಂತೆಯನ್ನ ಆನ್ ಲೈನ್ ನಲ್ಲೇ ಮಾಡಲು ನಿರ್ಧರಿಸಿದ್ದಾರೆ.
ಚಿತ್ರಕಲಾ ಪರಿಷತ್ನಿಂದ ನಡೆಯಲಿರುವ ವಾರ್ಷಿಕ ಚಿತ್ರಸಂತೆ ಇಂದಿನಿಂದ (ಜನವರಿ 3) ಒಂದು ತಿಂಗಳ ಕಾಲ ಆನ್ ಲೈನ್ ಮೂಲಕ ನಡೆಯಲಿದೆ. ಚಿತ್ರಕಲಾ ಪರಿಷತ್ ಗೆ 60 ವರ್ಷ ತುಂಬಿದೆ. ಹೀಗಾಗಿ ಚಿತ್ರ ಸಂತೆ ನಿಲ್ಲಿಸಬಾರದು ಎಂಬ ನಿರ್ಧಾರದಿಂದ ಇದೇ ಮೊದಲ ಬಾರಿಗೆ ಆನ್ ಲೈನ್ ನಲ್ಲಿ ಚಿತ್ರಸಂತೆಯನ್ನು ಆಯೋಜನೆ ಮಾಡಲಾಗಿದೆ.
ಕುಮಾರಕೃಪಾ ರಸ್ತೆ ಮತ್ತು ಚಿತ್ರಕಲಾ ಪರಿಷತ್ ಆವರಣದಲ್ಲಿ 18ನೇ ಚಿತ್ರಸಂತೆ ಆಯೋಜಿಸಲಾಗಿದೆ. ಈ ಬಾರಿಯ ಚಿತ್ರಸಂತೆಯನ್ನು ಕೊರೊನಾ ಸೇನಾನಿಗಳಿಗೆ ಅರ್ಪಣೆ ಮಾಡಲಾಗುತ್ತಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ ಮಾಹಿತಿ ನೀಡಿದ್ದಾರೆ.
ಈ ಬಾರಿ ಚಿತ್ರಸಂತೆಯಲ್ಲಿ 1500 ಕಲಾವಿದರು ಪಾಲ್ಗೊಳ್ಳಲಿದ್ದಾರೆ. Chitra Santhe.Org ಜಾಲತಾಣದಲ್ಲಿ ಚಿತ್ರ ಸಂತೆ ವೀಕ್ಷಿಸಬಹುದಾಗಿದೆ. ಪ್ರತಿ ಲಾವಿದರಿಗೆ ಪ್ರತ್ಯೇಕ ಒಂದು ಆನ್ ಲೈನ್ ಪುಟ ಮೀಸಲಿಟ್ಟಿದ್ದು, ಒಬ್ಬ ಕಲಾವಿದ ತನ್ನ 10 ಕಲಾಕೃತಿ ಪ್ರದರ್ಶನಕ್ಕೆ ಅವಕಾಶ ವಿದೆ. ಈ ಆನ್ ಲೈನ್ ಪುಟದಲ್ಲಿ ಸಂಪರ್ಕದ ವಿವರ ಹಾಗೂ ಅವರ ಕಲಾಕೃತಿ ಪ್ರದರ್ಶಿಸಲಾಗುತ್ತೆ. ಇನ್ನು ಆನ್ ಲೈನ್ ಚಿತ್ರಸಂತೆಯಲ್ಲಿ ಮಾರಾಟ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.
Published On - 7:52 am, Sun, 3 January 21