ರೋಹಿಣಿ ಸಿಂಧೂರಿ ಹೆಸರಲ್ಲಿ ಇಲ್ಲಿ ನಡೆಯುತ್ತೆ ವಾರಕ್ಕೊಮ್ಮೆ ಪೂಜೆ

ಹಾಸನ: ಹಾಸನದಿಂದ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿ ವರ್ಷ ಕಳೆದರೂ ಇನ್ನೂ ಅಲ್ಲಿನ ಜನ ಅವರನ್ನು ಮರೆತಿಲ್ಲ. ಹಾಸನದ ಇತಿಹಾಸ ಪ್ರಸಿದ್ಧ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತೀ ಸೋಮವಾರ ರೋಹಿಣಿ ಸಿಂಧೂರಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ವಿರೂಪಾಕ್ಷೇಶ್ವರ ದೇವಾಲಯದ ಅರ್ಚಕರು ಪ್ರತೀ ಸೋಮವಾರ ರೋಹಿಣಿ ಸಿಂಧೂರಿ ಅವರ ಹೆಸರಿನಲ್ಲಿ ಅಭಿಷೇಕ, ವಿಶೇಷಪೂಜೆ ಮಾಡುತ್ತಾ ಬಂದಿದ್ದಾರೆ. ನೂರಾರು ವರ್ಷಗಳಿಂದ ಪಾಳುಬಿದ್ದ ದೇವಾಲಯವನ್ನು ರೋಹಿಣಿ ಸಿಂಧೂರಿ ತಮ್ಮ ಅವಧಿಯಲ್ಲಿ 30 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದರು ಎಂಬ ನೆನಪಿನಲ್ಲಿ ಇಲ್ಲಿ […]

ರೋಹಿಣಿ ಸಿಂಧೂರಿ ಹೆಸರಲ್ಲಿ ಇಲ್ಲಿ ನಡೆಯುತ್ತೆ ವಾರಕ್ಕೊಮ್ಮೆ ಪೂಜೆ

Updated on: Nov 26, 2019 | 1:54 PM

ಹಾಸನ: ಹಾಸನದಿಂದ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿ ವರ್ಷ ಕಳೆದರೂ ಇನ್ನೂ ಅಲ್ಲಿನ ಜನ ಅವರನ್ನು ಮರೆತಿಲ್ಲ. ಹಾಸನದ ಇತಿಹಾಸ ಪ್ರಸಿದ್ಧ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತೀ ಸೋಮವಾರ ರೋಹಿಣಿ ಸಿಂಧೂರಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ.

ವಿರೂಪಾಕ್ಷೇಶ್ವರ ದೇವಾಲಯದ ಅರ್ಚಕರು ಪ್ರತೀ ಸೋಮವಾರ ರೋಹಿಣಿ ಸಿಂಧೂರಿ ಅವರ ಹೆಸರಿನಲ್ಲಿ ಅಭಿಷೇಕ, ವಿಶೇಷಪೂಜೆ ಮಾಡುತ್ತಾ ಬಂದಿದ್ದಾರೆ. ನೂರಾರು ವರ್ಷಗಳಿಂದ ಪಾಳುಬಿದ್ದ ದೇವಾಲಯವನ್ನು ರೋಹಿಣಿ ಸಿಂಧೂರಿ ತಮ್ಮ ಅವಧಿಯಲ್ಲಿ 30 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದರು ಎಂಬ ನೆನಪಿನಲ್ಲಿ ಇಲ್ಲಿ ಪ್ರತೀ ವಾರ ಪೂಜೆ ಮಾಡಲಾಗುತ್ತಿದೆ.

ರೋಹಿಣಿ ಹೆಸರಲ್ಲಿ ಗಿಡನೆಟ್ಟು ಆರೈಕೆ :
ಐತಿಹಾಸಿಕ ದೇಗುಲ ದುರಸ್ಥಿ ಮಾಡಿಸಿದ ಸ್ಮರಣಾರ್ಥ ಈ ಸೇವೆ ಎಂದು ರೋಹಿಣಿ ಗುಣಗಾನ ಮಾಡಿದ್ದಾರೆ ಇಲ್ಲಿನ ಅರ್ಚಕ ವರ್ಗ. ಅಷ್ಟೇ ಅಲ್ಲದೆ ದೇವಾಲಯ ಆವರಣದಲ್ಲಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಗಿಡನೆಟ್ಟು ಅರ್ಚಕರು ಆರೈಕೆ ಮಾಡುತ್ತಿದ್ದಾರೆ.

 

Published On - 1:29 pm, Mon, 25 November 19