Voter ID: ವೋಟರ್​ ಐಡಿಗೆ ಆಧಾರ್ ನಂಬರ್​ ಲಿಂಕ್​ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ

|

Updated on: May 08, 2023 | 2:22 PM

ರಾಜ್ಯದ ಎಲ್ಲ ಮತದಾರರು ತಮ್ಮ ಮತದಾನ ಗುರುತಿನ ಚೀಟಿ ಸಂಖ್ಯೆಗೆ ಕೂಡಲೇ ಆಧಾರ್ ನಂಬರ್​ನ್ನು ಲಿಂಕ್​ ಮಾಡಿಕೊಳ್ಳಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

Voter ID: ವೋಟರ್​ ಐಡಿಗೆ ಆಧಾರ್ ನಂಬರ್​ ಲಿಂಕ್​ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯದ ಎಲ್ಲ ಮತದಾರರು (Voters) ತಮ್ಮ ಮತದಾನ ಗುರುತಿನ ಚೀಟಿಗೆ ಆಧಾರ್ (Aadhar) ನಂಬರ್​ನ್ನು ಲಿಂಕ್​ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಸಂಬಂಧ ಚುನಾವಣಾ ಆಯೋಗ ಕೆಲ ತಿಂಗಳ ಹಿಂದೆ ಸುತ್ತೋಲೆ ಹೊರಡಿಸಿತ್ತು. ಚುನಾವಣಾ ಆಯೋಗ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು (Election Commission) ರಾಜ್ಯದ ಎಲ್ಲಾ ಮತದಾರರ ಗುರುತಿನ ಚೀಟಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ನಿರ್ಧರಿಸಿದ್ದು, ಎಲ್ಲಾ ಮತದಾರರು ವೋಟರ್​​ ಐಡಿ ಸಂಖ್ಯೆಗೆ ಕೂಡಲೇ ಆಧಾರ್ ನಂಬರನ್ನು ಲಿಂಕ್ ಮಾಡಿಕೊಳ್ಳಬೇಕೆಂದು ಸುತ್ತೋಲೆ ಹೊರಡಿಸಿದೆ.

ಆಧಾರ್ ಲಿಂಕ್​ ಮಾಡಿಕೊಳ್ಳುವ ವಿಧಾನ

  1. ಫ್ಲೇಸ್ಟೋರ್​​ (Play Store)ಗೆ ಹೋಗಿ voter Helpline App ನ್ನು Download ಮಾಡಿ
  2. Download ಮಾಡಿಕೊಂಡ ಮೇಲೆ ಆ್ಯಪ್​ನ್ನು Install ಮಾಡಿ
  3. Electoral Authentication form-6B ನ್ನು Select ಮಾಡಿ
  4. Mobile Number ನ್ನು ಹಾಕಿ
  5. ನಿಮ್ಮ ಆಧಾರ್ ನಂಬರ್​ನ್ನು ಹಾಕಿ
  6. Proceed ನ್ನು ಒತ್ತಿ
  7. Successfully ಅಂತ ಒಂದು Reference ಬರುವುದನ್ನು ಖಚಿತ ಪಡಿಸಿಕೊಳ್ಳಿ

ಅಥವಾ ನಿಮ್ಮ ಹತ್ತಿರದ ಮತಗಟ್ಟೆಯ BLO ಹತ್ತಿರ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಿ ಲಿಂಕ್​ ಮಾಡಿಕೊಳ್ಳಬಹುದಾಗಿದೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:47 pm, Tue, 9 August 22