ದಸರಾ ಸಮಯದಲ್ಲಿ ಬೆಂಗಳೂರಿನಲ್ಲಿ ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳ ಮಾಹಿತಿ ಇಲ್ಲಿದೆ

ದಸರಾದ ಸಮಯದಲ್ಲಿ ಬೆಂಗಳೂರಿನಲ್ಲಿ ದುರ್ಗಾಪೂಜೆಯ ಗಮ್ಮತ್ತು ಎಲ್ಲೆಡೆ ಕಾಣ ಸಿಗುತ್ತಿದೆ. ಪ್ರತಿ ಗಲ್ಲಿಗಳಲ್ಲಿಯೂ ಹಬ್ಬದ ವಾತಾವರಣ ಕಳೆಗಟ್ಟಿದೆ. ದುರ್ಗಾ ಪುಜೆಯ ಕೊನೆಯ ದಿನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ನೀವೇನಾದರೂ ಬೆಂಗಳೂರಿನಲ್ಲಿರುವ ದುರ್ಗಾ ಪೆಂಡಾಲ್ಗಳನ್ನು ನೀವು ಹುಡುಕುತ್ತಿದ್ದರೆ ನೀವು ಭೇಟಿ ನೀಡಬಹುದಾದ ಜಾಗಗಳು ಇಲ್ಲಿವೆ.

ದಸರಾ ಸಮಯದಲ್ಲಿ  ಬೆಂಗಳೂರಿನಲ್ಲಿ ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳ ಮಾಹಿತಿ ಇಲ್ಲಿದೆ
ಬೆಂಗಳೂರಿನಲ್ಲಿರುವ ಉತ್ತಮ ದುರ್ಗಾ ಪೂಜೆಯ ಸ್ಥಳಗಳು

Updated on: Sep 29, 2025 | 12:13 PM

ಬೆಂಗಳೂರು, ಸೆಪ್ಟೆಂಬರ್ 29: ದಸರಾ (Dasara) ಸಂಭ್ರಮ, ಸಡಗರ ಎಲ್ಲೆಡೆ ಮನೆಮಾಡಿದೆ. ಬೆಂಗಳೂರಿನ ಗಲ್ಲಿಗಲ್ಲಿಗಳೂ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿವೆ. ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಿರುವ ದುರ್ಗಾ ಪೂಜೆಯ ಕೊನೆಯ ದಿನವೂ ಹತ್ತಿರವಾಗುತ್ತಿದೆ. ಈ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡುವಂತಹ ದಾಂಡಿಯಾ ನೃತ್ಯಕ್ಕಾಗಿ ಎಲ್ಲಾ ವಯೋಮಾನದವರೂ ಕಾದು ಕುಳಿತಿರುತ್ತಾರೆ. ನೀವೇನಾದರೂ ಬೆಂಗಳೂರಿನಲ್ಲಿರುವ ದುರ್ಗಾ ಪೆಂಡಾಲ್​ಗಳನ್ನು ಹುಡುಕುತ್ತಿದ್ದರೆ, ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳು ಇಲ್ಲಿವೆ.

ಬೆಂಗಳೂರಿನಲ್ಲಿರುವ  ದುರ್ಗಾ ಪೆಂಡಾಲ್​ಗಳು

1. ಬಿಡಿಪಿಸಿ, ಅರಮನೆ ಮೈದಾನ: ಅರಮನೆ ಮೈದಾನದಲ್ಲಿ ನಡೆಯುವ ಈ ಭವ್ಯ ಉತ್ಸವವು ಬೆಂಗಳೂರಿನ ಅತಿ ದೊಡ್ಡ ಸಭೆಗಳಲ್ಲಿ ಒಂದಾಗಿದೆ. ನೀವು ಹೆಚ್ಚಿನ ಪ್ರಮಾಣದ ಜನ ಸಮೂಹ ಮತ್ತು ರೋಮಾಂಚಕ ಅನುಭವಗಳನ್ನು ಬಯಸುವುದಾದರೆ ಈ ಆಯ್ಕೆ ನಿಮಗೆ ಸೂಕ್ತವಾಗಿದೆ.

2. SUC ದುರ್ಗಾ ಪೂಜೆ, ಬಿಲೆಕಹಳ್ಳಿ( ಶ್ರೀನಿವಾಸ್ ಕಲ್ಯಾಣ ಮಂಟಪ): ನೀವು ಶಾಂತವಾದ ಹಬ್ಬದ ವಾತಾವರಣವನ್ನು ಬಯಸುವುದಾದರೆ ಈ ಜಾಗ ನಿಮಗೆ ಹೇಳಿ ಮಾಡಿಸಿದಂತದ್ದು. ಇಲ್ಲಿ ನೀವು ಆರಾಮದಾಯಕವಾಗಿ ಪೂಜೆಯ ಅನುಭವವನ್ನು ಪಡೆಯಬಹುದು.

3. ಬರ್ಷಾ ಬೆಂಗಾಲಿ ಅಸೋಸಿಯೇಷನ್, HSR/ಸರ್ಜಾಪುರ: ಇದು ಎಲ್ಲಾ ದಾಂಡಿಯಾ ಪ್ರಿಯರ ನೆಚ್ಚಿನ ತಾಣವಾಗಿದೆ. ಆಹಾರ ಮಳಿಗೆಗಳೊಂದಿಗೆ ಒಳ್ಳೆಯ ವಾತಾವರಣವಿದ್ದು ನಿಮಗೆ ಸೂಕ್ತವಾಗಿದೆ.

4. ಸಾರಥಿ ಸೋಷಿಯೋ-ಕಲ್ಚರಲ್ ಟ್ರಸ್ಟ್, ಕೋರಮಂಗಲ: ಇಲ್ಲಿ ಕೇವಲ ದುರ್ಗಾ ಪೂಜೆಯ ಆಚರಣೆಯೊಂದೇ ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳು,ಹಾಡು-ಕುಣಿತವೂ ಇದ್ದು, ಮೈನವಿರೇಳಿಸುವ ಸಂಜೆಯನ್ನು ನಿಮಗೆ ನೀಡುತ್ತದೆ.

5. ಅಮದೆರ್ ಪೂಜೊ, ಕನಕಪುರ ರೋಡ್/ ಜೆಪಿ ನಗರ: ಎರಡು ಸ್ಥಳಗಳಲ್ಲಿ ನೆಲೆಯಾಗಿರುವ ಈ ಪುಜೆಯು ಕುಟುಂಬದೊಂದಿಗೆ ಭೇಟಿ ನೀಡಲು ಸೂಕ್ತವಾಗಿದೆ.

6. ಜಯಮಹಲ್ ದುರ್ಗಾ ಪೂಜೆ: ನಗರದ ಹೃದಯ ಭಾಗದಲ್ಲಿರುವ ಈ ಜಾಗ, ಹೆಚ್ಚಿನ ಸಾಂಸ್ಕೃತಿಕತೆಯೊಂದಿಗೆ ಕೂಡಿದೆ.

7. ಬೆಂಗಾಲಿ ಅಸೋಸಿಯೇಷನ್ , ಉಲ್ಸೂರು:  ನಗರದ ಈ ಜಾಗ ಹೆಚ್ಚಿನ ಜನಸಮೂಹವನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಮೊದಲಿನಿಂದಲೂ ಹೆಸರು ಮಾಡಿದೆ. ಇಲ್ಲಿ ಊಟೋಪಚಾರದ ಜೊತೆಗೆ ನವಮಿಯ ರಾತ್ರಿಯಂದು ದಾಂಡಿಯಾ ನೃತ್ಯಕ್ಕಾಗಿ ಹೆಸರುವಾಸಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:43 am, Mon, 29 September 25