ಜೆಡಿಎಸ್ ಪಕ್ಷದವರು ಸಂಭ್ರಮಿಸಿದರೆ, ಸಮಾವೇಶ ನಡೆಸಲಿಚ್ಛಿಸಿದರೆ ಬೇಡ ಅನ್ನಲಾದೀತೇ? ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2024 | 1:09 PM

ಕಾಂಗ್ರೆಸ್ ಪಕ್ಷದವರು ಸಂಭ್ರಮಾಚರಣೆ ಮಾಡೋದಿಕ್ಕೆ ಇನ್ನೂ ಟೈಮಿದೆ ಎಂದು ಹೇಳಿದ ಸುರೇಶ್ ಜೆಡಿಎಸ್ ಆಗಲೇ ಸಂಭ್ರಮಿಸುತ್ತಿರುವ ವಿಚಾರ ಅವರಿಗೆ ಬಿಟ್ಟಿದ್ದು, ಅವರು ಸಂಭ್ರಮಿಸಲು ಮತ್ತು ಸಮಾವೇಶ ನಡೆಸಲು ಯಾರೂ ಬೇಡ ಅನ್ನಲಾಗಲ್ಲ, ಮತದಾರ ಈಗಾಗಲೇ ತೀರ್ಪು ನೀಡಿದ್ದಾನೆ, ಕಾದು ನೋಡಬೇಕು ಎಂದು ಹೇಳಿದರು.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಡಿಕೆ ಸುರೇಶ್ ನಿನ್ನೆ ಸಿಪಿ ಯೋಗೇಶ್ವರ್ ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದ ಬಗ್ಗೆ ನಿರಾಶಾದಾಯಕ ಪ್ರತಿಕ್ರಿಯೆ ನೀಡಿದ್ದಕ್ಕೆ ಪ್ರತಿಯಾಗಿ ಸ್ಪಷ್ಟ ಉತ್ತರಗಳನ್ನು ನೀಡಲಿಲ್ಲ. ಕಾಂಗ್ರೆಸ್ ನಾಯಕರು ಹೆಚ್​ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಕುರಿತು ಮಾಡಿದ ಕಾಮೆಂಟ್​ಗಳು ಪಕ್ಷಕ್ಕೆ ಮುಳ್ಳಾದವೇ ಅಂತ ಕೇಳಿದ್ದಕ್ಕೆ ಅವರು, ತನಗೆ ಗೊತ್ತಿಲ್ಲ, ವಿಷಯವನ್ನು ಮಾಧ್ಯಮದವರು ವಿಶ್ಲೇಷಣೆ ಮಾಡುವ ರೀತಿಯೇ ಬೇರೆ ತಾನು ವಿಶ್ಲೇಷಿಸುವ ರೀತಿ ಬೇರೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ದೇವೇಗೌಡ ಮತ್ತು ಕುಮಾರಸ್ವಾಮಿಯವರ ಪ್ರಯತ್ನ ಮತ್ತು ಹಠ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ: ಯೋಗೇಶ್ವರ್

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.