ಧಾರವಾಡ: ಉತ್ತರ ಕರ್ನಾಟಕದ ಹಲವೆಡೆ ಭಾರಿ ಮಳೆ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 12 ರಿಂದ 14 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಡಾ.ಆರ್.ಹೆಚ್. ಪಾಟೀಲ್ ಮಾಹಿತಿ ನೀಡಿದ್ದಾರೆ. ಧಾರವಾಡ ಕೃಷಿ ವಿವಿ ಹವಾಮಾನ ಕೇಂದ್ರದ ಮುಖ್ಯಸ್ಥ, ಆರ್.ಹೆಚ್. ಪಾಟೀಲ್ ಹೀಗೆ ತಿಳಿಸಿದ್ದಾರೆ.
ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಧಾರವಾಡ, ಹಾವೇರಿ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆ, ಬಳ್ಳಾರಿ, ವಿಜಯನಗರ, ಕೊಪ್ಪಳ, ಬಾಗಲಕೋಟೆ, ವಿಜಯಪುರದಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಕಲಬುರಗಿ, ರಾಯಚೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಚೆನ್ನೈ: ಹಿಂಗಾರು ಮಾರುತಗಳು ಇನ್ನೂ ಎರಡು ವಾರ ಸಕ್ರಿಯ
ಹಿಂಗಾರು ಮಾರುತಗಳು ಇನ್ನೂ ಎರಡು ವಾರ ಸಕ್ರಿಯ ಇರಲಿವೆ. ಚೆನ್ನೈನಲ್ಲಿ ಮುಂದಿನ 48 ಗಂಟೆ ಕಾಲ ಮಳೆ ಮುಂದುವರಿಕೆ ಸಾಧ್ಯತೆ ಇದೆ. 48 ಗಂಟೆ ಬಳಿಕ ಮಳೆಯ ತೀವ್ರತೆ ಕಡಿಮೆ ಆಗುವ ಸಾಧ್ಯತೆ ಇದೆ. ಹೊಸ ಕಡಿಮೆ ಒತ್ತಡದ ಟ್ರಫ್ ನವೆಂಬರ್ 26 ರಂದು ರೂಪುಗೊಳ್ಳಲಿದೆ. ಹೀಗಾಗಿ ತಮಿಳುನಾಡಿನ ಕರಾವಳಿ ಭಾಗದಲ್ಲಿ ಮಳೆ ಮುನ್ಸೂಚನೆ ಇದೆ. ಮುಂದಿನ ವೀಕೆಂಡ್ನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹಿಂಗಾರು ಮಾರುತಗಳು 2 ವಾರಕ್ಕೂ ಹೆಚ್ಚು ವಿಸ್ತರಣೆ ಸಾಧ್ಯತೆ ಇದೆ ಎಂದು ತಮಿಳುನಾಡು ರಾಜ್ಯದ ಹವಾಮಾನ ತಜ್ಞರಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: 360 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ, ಬೆಳೆ ಹಾನಿ; 48 ಮನೆ ಸಂಪೂರ್ಣ ಕುಸಿತ
ಇದನ್ನೂ ಓದಿ: ನಿರಂತರ ಮಳೆಗೆ ಗಗನಕ್ಕೇರಿದ ತರಕಾರಿ ಬೆಲೆ; ಯಾವ ಯಾವ ತರಕಾರಿಗಳಿಗೆ ದರ ಎಷ್ಟಿದೆ ನೋಡಿ