ಚಿಕ್ಕಬಳ್ಳಾಫುರ: ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ನಂದಿಹಿಲ್ಸ್ ಹೇಳಿ ಕೇಳಿ ಪ್ರಕೃತಿ ಸೌಂದರ್ಯದ ಖಣಿ. ಅದ್ರಲ್ಲೂ ಪ್ರೇಮಿಗಳಿಗೆ ಅಚ್ಚು ಮೆಚ್ಚಿನ ತಾಣ. ಪ್ರಕೃತಿ ಸೌಂದರ್ಯದ ಅದ್ಬುತವನ್ನೆ ಸೃಷ್ಟಿಸಿರುವ ಈ ಪ್ರವಾಸಿತಾಣಕ್ಕೆ ಸಾವಿರಾರು ಜನರು ಬರುತ್ತಾರೆ. ಬಂದವರು ಇಲ್ಲಿನ ಈ ಪ್ರಕೃತಿ ಸೌಂದರ್ಯ ನೋಡಿ ರೊಮಾಂಚನಗೊಳ್ಳುತ್ತಾರೆ. ಆದ್ರೆ ಕೊರೊನಾ ವೀಕೆಂಡ್ ಕರ್ಫ್ಯೂನಿಂದಾಗಿ ನಂದಿ ಹಿಲ್ಸ್ ಮಂಕಾಗಿದೆ.
ಮಹಾಮಾರಿ ಕೊರೊನಾದಿಂದಾಗಿ ಎಲ್ಲಾ ಪ್ರವಾಸಿ ಕ್ಷೇತ್ರಗಳು ಬಂದಾಗಿದ್ದವು. ಸದ್ಯ ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಅನ್ಲಾಕ್ ಮಾಡಲಾಗುತ್ತಿದೆ. ಎರಡು ತಿಂಗಳಿಂದ ಬಂದ್ ಆಗಿದ್ದ ವಿಶ್ವವಿಖ್ಯಾತ ನಂದಿಗಿರಿಧಾಮ ಸದ್ಯ ಓಪನ್ ಆಗಿದೆ. ಆದರೆ ಈ ಪ್ರವಾಸಿ ತಾಣಕ್ಕೆ ವೀಕೆಂಡ್ ಕರ್ಪ್ಯೂ ಎಫೆಕ್ಟ್ ಹೊಡೆದಿದೆ. ನಂದಿಗಿರಿಧಾಮ ಓಪನ್ ಆಗಿದ್ರೂ ಪ್ರವಾಸಿಗರು ಮಾತ್ರ ಇತ್ತ ಸುಳಿಯುತ್ತಿಲ್ಲ. ಕೊರೊನಾ ಸೋಂಕಿನ ಭೀತಿಯಿಂದಾಗಿ ಪ್ರವಾಸಿಗರು ಗಿರಿಧಾಮದತ್ತ ಮುಖ ಮಾಡುತ್ತಿಲ್ಲ.
ಭಾನುವಾರ ರಜೆ ದಿನವಾಗಿದ್ರೂ ಬೆರಳೆಣಿಕೆಯಷ್ಟು ಜನ ಮಾತ್ರ ನಂದಿ ಹಿಲ್ಸ್ಗೆ ಆಗಮಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಸಾವಿರಾರು ಜನ ಪ್ರವಾಸಿಗರು ಗಿರಿಧಾಮಕ್ಕೆ ಆಗಮಿಸುತ್ತಿದ್ರು. ಆದರೆ ಈಗ ಚಿತ್ರಣ ಬದಲಾಗಿದೆ. ಸದ್ಯ 36 ಕಾರುಗಳು, 30 ಬೈಕ್ಗಳಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಆದರೆ ಇಲ್ಲೂ ಕೂಡ ಕೊರೊನಾ ಮಾರ್ಗಸೂಚಿ ಪಾಲಿಸುತ್ತಿಲ್ಲ. ಗಿರಿಧಾಮಕ್ಕೆ ಬಂದವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಸ್ವರ್ಗ ನೋಡಲು ಬಂದ ಪ್ರವಾಸಿಗರು ಕೊರೊನಾ ಮಾರ್ಗಸೂಚಿಯನ್ನು ಪಾಲಿಸಿ ಸರ್ಕಾರ ನೀಡಿರುವ ಅವಕಾಶವನ್ನು ಒಳಸಿಕೊಳ್ಳಬೇಕಿದೆ.
ಮತ್ತೆ ನಂದಿ ಗಿರಿಧಾಮಕ್ಕೆ ಪ್ರವಾಸಿಗರಿಗೆ ಪ್ರವೇಶ ಬಂದ್
ಇನ್ನು ನಿಯಮ ಉಲ್ಲಂಘಿಸಿ ನಂದಿ ಗಿರಿಧಾಮಕ್ಕೆ ಭೇಟಿ ಹಿನ್ನೆಲೆಯಲ್ಲಿ ಮತ್ತೆ ನಂದಿ ಗಿರಿಧಾಮಕ್ಕೆ ಪ್ರವಾಸಿಗರಿಗೆ ಪ್ರವೇಶ ಬಂದ್ ಮಾಡಲಾಗಿದೆ. ಪೊಲೀಸರು ಪ್ರವಾಸಿಗರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಗಿರಿಧಾಮದ ಪ್ರವೇಶದ್ವಾರದಿಂದಲೇ ಪ್ರವಾಸಿಗರು ವಾಪಸ್ ಆಗುತ್ತಿದ್ದಾರೆ. 1 ವಾರದಿಂದ ಗಿರಿಧಾಮ ಓಪನ್ ಮಾಡಲಾಗಿತ್ತು. ಕೊವಿಡ್ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಮತ್ತೆ ಬಂದ್ ಮಾಡಲಾಗಿದೆ.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್; ನಂದಿಗಿರಿಧಾಮದಲ್ಲಿ ಆಹಾರವಿಲ್ಲದೆ ಪ್ರಾಣಿ-ಪಕ್ಷಿಗಳ ಪರದಾಟ
Published On - 9:57 am, Sun, 27 June 21