ಲಾಕ್ಡೌನ್ ಎಫೆಕ್ಟ್; ನಂದಿಗಿರಿಧಾಮದಲ್ಲಿ ಆಹಾರವಿಲ್ಲದೆ ಪ್ರಾಣಿ-ಪಕ್ಷಿಗಳ ಪರದಾಟ
ನಂದಿಗಿರಿಧಾಮ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶ ಇದ್ದಾಗ ಕೆಲವು ಪ್ರಾಣಿ ಪ್ರಿಯರು ಗಿರಿಧಾಮದಲ್ಲಿರುವ ಪ್ರಾಣಿಗಳಿಗಾಗಿ ತರಕಾರಿ, ಹಣ್ಣು ಹಂಪಲು ಸೇರಿದಂತೆ ಆಹಾರ ತಂದು ಹಾಕುತ್ತಿದ್ದರು. ಆದರೆ ಲಾಕ್ಡೌನ್ ಜಾರಿ ಹಿನ್ನೆಲೆ ಯಾರು ಇತ್ತ ಕಡೆ ಸುಳಿಯುತ್ತಿಲ್ಲ.
ಚಿಕ್ಕಬಳ್ಳಾಪುರ: ನಂದಿಗಿರಿಧಾಮ ಪ್ರಸಿದ್ಧ ಪ್ರವಾಸಿ ತಾಣ. ಇಲ್ಲಿಗೆ ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಬಂದು ವಿಶ್ರಾಂತಿ ಪಡೆಯುತ್ತಾರೆ. ಇಂತಹ ತಾಣದಲ್ಲಿ ಒಂದಲ್ಲ ಎರಡಲ್ಲ ನೂರಾರು ಪ್ರಾಣಿ, ಪಕ್ಷಿಗಳಿವೆ. ಪ್ರವಾಸಕ್ಕೆ ಬಂದ ಪ್ರವಾಸಿಗರು ಪ್ರಾಣಿಗಳಿಗೆ ಅನ್ನ, ತಿಂಡಿ-ತಿನಿಸುಗಳನ್ನು ನೀಡಿ ಮಾನವೀಯತೆ ಮೆರೆಯುತ್ತಾರೆ. ಆದರೆ ಈಗ ಕೊರೊನಾ ಸೋಂಕನ್ನು ತಡೆಗಟ್ಟಲು ಸರ್ಕಾರ ಲಾಕ್ಡೌನ್ ಜಾರಿ ಮಾಡಿದ್ದೆ ತಡ, ಪ್ರವಾಸಿಗರು ಅತ್ತ ಸುಳಿಯುತ್ತಿಲ್ಲ. ಇದರಿಂದ ನಂದಿಗಿರಿಧಾಮದಲ್ಲಿರುವ ನೂರಾರು ಪ್ರಾಣಿ, ಪಕ್ಷಿಗಳು ಆಹಾರ ನೀರು ಇಲ್ಲದೆ ಪ್ರಾಣ ಕೈಯಲ್ಲಿಡಿದು ಬದುಕುತ್ತಿವೆ.
ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವಪ್ರಸಿದ್ಧ ನಂದಿಗಿರಿಧಾಮದ ಸುತ್ತಲು ಸಾವಿರಾರು ಎಕರೆ ಕಾಡಿದೆ. ಎತ್ತ ನೋಡಿದರೂ ಹಚ್ಚ ಹಸಿರಿನ ಪ್ರಕೃತಿ ಸೊಬಗಿದೆ. ಇಂಥ ಪ್ರಕೃತಿ ಸೌಂದರ್ಯವನ್ನು ಅರಸಿಕೊಂಡು ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದರು. ಹೀಗೆ ಬಂದವರು ಇಲ್ಲಿರುವ ಕೋತಿಗಳು, ನಾಯಿಗಳು ಸೇರಿದಂತೆ ಕೆಲವು ಪಕ್ಷಿಗಳಿಗೆ ಅನ್ನ, ತಿಂಡಿ-ತಿನಿಸುಗಳನ್ನು ನೀಡಿ ಮಾನವೀಯತೆ ಮೆರೆಯುತ್ತಿದ್ದರು. ಆದರೆ ಈಗ ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ ಹಿನ್ನೆಲೆ ಪ್ರವಾಸಿಗರು ನಂದಿಗಿರಿಧಾಮದತ್ತ ಆಗಮಿಸುತ್ತಿಲ್ಲ. ಇದರಿಂದ ಗಿರಿಧಾಮದಲ್ಲಿರುವ ನೂರಾರು ಕೋತಿಗಳು, ನಾಯಿಗಳು ಆಹಾರ ನೀರು ಇಲ್ಲದೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿವೆ.
ನಂದಿಗಿರಿಧಾಮ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶ ಇದ್ದಾಗ ಕೆಲವು ಪ್ರಾಣಿ ಪ್ರಿಯರು ಗಿರಿಧಾಮದಲ್ಲಿರುವ ಪ್ರಾಣಿಗಳಿಗಾಗಿ ತರಕಾರಿ, ಹಣ್ಣು ಹಂಪಲು ಸೇರಿದಂತೆ ಆಹಾರ ತಂದು ಹಾಕುತ್ತಿದ್ದರು. ಆದರೆ ಲಾಕ್ಡೌನ್ ಜಾರಿ ಹಿನ್ನೆಲೆ ಯಾರು ಇತ್ತ ಕಡೆ ಸುಳಿಯುತ್ತಿಲ್ಲ. ಗಿರಿಧಾಮ ಬಂದ್ ಹಿನ್ನೆಲೆ ಗಿರಿಧಾಮದಲ್ಲಿರುವ ಸಿಬ್ಬಂದಿಯೂ ಇಲ್ಲ. ಜೊತೆಗೆ ಗಿರಿಧಾಮದಲ್ಲಿ ಎಲ್ಲಿಯೂ ನೀರು ಹಣ್ಣು, ತಿಂಡಿ ಸಿಗುತ್ತಿಲ್ಲ. ಇದರಿಂದ ಯಾರಾದರು ಪ್ರಾಣಿ ಪ್ರಿಯರು ತರಕಾರಿ, ಹಣ್ಣು ಹಂಪಲು ತಂದು ಹಾಕುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಲಾಕ್ಡೌನ್ ಜಾರಿಯಾದ್ದರಿಂದ ನಂದಿಗಿರಿಧಾಮದ ಮೇಲಿರುವ ಪ್ರಾಣಿಗಳು ಆಹಾರಕ್ಕಾಗಿ ಪರದಾಡುತ್ತಿವೆ. ಹಾಕಿದ್ದನ್ನು ತಿಂದು ತಮ್ಮ ಪಾಡಿಗೆ ತಾವು ಆರಾಮವಾಗಿ ಇದ್ದ ಪ್ರಾಣಿಗಳು ಈಗ ಯಾರಾದರು ಆಹಾರ ನಿಡುತ್ತಾರೆಂದು ಪ್ರಾಣನ್ನು ಕೈಯಲ್ಲಿ ಹಿಡಿದು ಕಾಯುತ್ತಿವೆ.
ಇದನ್ನೂ ಓದಿ
ಕೊರೊನಾ ಸಾಂಕ್ರಾಮಿಕ ಕಾಯಿಲೆ ಸಮಯದಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಇಡ್ಲಿ, ದೋಸೆ
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ ಮಹೇಶ್ ಆಕ್ರೋಶ
(Animal birds are struggling without food in Chikkaballapur)