ವೀಕೆಂಡ್​ ಕರ್ಫ್ಯೂ: ಇಂದು, ನಾಳೆ ಅನಗತ್ಯವಾಗಿ ಮನೆಯಿಂದ ಹೊರಬರುವಂತಿಲ್ಲ, ದಿನಬಳಕೆ ವಸ್ತು ಖರೀದಿಗೆ ಸಮಯ ನಿಗದಿ

|

Updated on: Apr 24, 2021 | 7:07 AM

ಅಗತ್ಯವಸ್ತುಗಳಾದ ಹಾಲು, ತರಕಾರಿ ಖರೀದಿಗೆ ಅವಕಾಶ ನೀಡಲಾಗಿದ್ದು, ಬೆಳಗ್ಗೆ 6 ರಿಂದ 10 ಗಂಟೆಯ ಒಳಗೆ ಬಂದು ಖರೀದಿ ಮಾಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ 10 ಗಂಟೆಯ ಬಳಿಕ ಜನರು ಅನಗತ್ಯವಾಗಿ ಮನೆಯಿಂದ ಹೊರಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ವೀಕೆಂಡ್​ ಕರ್ಫ್ಯೂ: ಇಂದು, ನಾಳೆ ಅನಗತ್ಯವಾಗಿ ಮನೆಯಿಂದ ಹೊರಬರುವಂತಿಲ್ಲ, ದಿನಬಳಕೆ ವಸ್ತು ಖರೀದಿಗೆ ಸಮಯ ನಿಗದಿ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕೆ ಸಿಗದೇ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ನೈಟ್​ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಘೋಷಿಸಿದೆ. ಅದರಂತೆ ನಿನ್ನೆ (ಏಪ್ರಿಲ್ 23) ರಾತ್ರಿಯಿಂದ ವಾರಾಂತ್ಯದ ಕರ್ಫ್ಯೂ ಜಾರಿಗೊಂಡಿದ್ದು, ಸೋಮವಾರ (ಏಪ್ರಿಲ್ 26) ಮುಂಜಾನೆಯ ತನಕ ಚಾಲ್ತಿಯಲ್ಲಿರಲಿದೆ. ಈ ಕಾರಣದಿಂದಾಗಿ ಇಂದು (ಏಪ್ರಿಲ್ 24) ಮತ್ತು ನಾಳೆ (ಏಪ್ರಿಲ್ 25) ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಬಂದ್ ಆಗಿರಲಿದ್ದು, ಬೆಳಗ್ಗೆ 6ರಿಂದ 10 ಗಂಟೆಯ ತನಕ ಮಾತ್ರ ನಿತ್ಯಬಳಕೆಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ.

ಅಗತ್ಯವಸ್ತುಗಳಾದ ಹಾಲು, ತರಕಾರಿ ಖರೀದಿಗೆ ಅವಕಾಶ ನೀಡಲಾಗಿದ್ದು, ಬೆಳಗ್ಗೆ 6 ರಿಂದ 10 ಗಂಟೆಯ ಒಳಗೆ ಬಂದು ಖರೀದಿ ಮಾಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ 10 ಗಂಟೆಯ ಬಳಿಕ ಜನರು ಅನಗತ್ಯವಾಗಿ ಮನೆಯಿಂದ ಹೊರಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ನಿಯಮ ಶನಿವಾರ ಹಾಗೂ ಭಾನುವಾರ ಪೂರ್ತಿ ಜಾರಿಯಲ್ಲಿರಲಿದ್ದು ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ನಿರ್ಬಂಧ
ಬಳ್ಳಾರಿ: ವೀಕೆಂಡ್ ಕರ್ಪ್ಯೂ ಹಿನ್ನೆಲೆ ಏಪ್ರಿಲ್ 27 ರಂದು ನಡೆಯಲಿರುವ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಚುನಾವಣೆ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಿಪಾಟಿ ಆದೇಶ ಹೊರಡಿಸಿದ್ದು, ವೀಕೆಂಡ್ ಕರ್ಫ್ಯೂ ವೇಳೆ ಅಭ್ಯರ್ಥಿಗಳು, ರಾಜಕೀಯ ಪಕ್ಷದ ನಾಯಕರು ಪ್ರಚಾರ ನಡೆಸುವಂತಿಲ್ಲ. ಆದೇಶ ಉಲ್ಲಂಘಿಸಿ ಪ್ರಚಾರ ನಡೆಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಬಳ್ಳಾರಿ ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಕಾರಣ ವೀಕೆಂಡ್ ಕರ್ಪ್ಯೂ ವೇಳೆ ಪ್ರಚಾರಕ್ಕೆ ನಿರ್ಬಂಧ ಹಾಕಿರುವ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:
Karnataka Weekend Lockdown: ವೀಕೆಂಡ್​ ಲಾಕ್​ಡೌನ್- ಏನಿರುತ್ತೆ ಮತ್ತು ಏನಿರಲ್ಲ, ಯಾರೆಲ್ಲ ಆಚೆ ಬರಬಹುದು, ಆಸ್ಪತ್ರೆಗಳಿಗೆ ಹೋಗಬಹುದಾ? ಇಲ್ಲಿದೆ ಮಾಹಿತಿ 

Covid 19 Treatment in Bengaluru: ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ
(Weekend Curfew in Karnataka people should not come out of home without reason)