ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಪಂಚತಾರಾ ಹೋಟೆಲ್​ನಲ್ಲಿದ್ದಿದ್ದು ಯಾಕೆ? ಸಿದ್ದರಾಮಯ್ಯ, ಮುಖ್ಯಮಂತ್ರಿ

|

Updated on: Oct 23, 2023 | 1:23 PM

ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ವೆಸ್ಟ್ ಎಂಡ್ ಹೋಟೆಲ್​ನಲ್ಲಿದ್ದರಲ್ಲ ಅದ್ಯಾಕೆ ಅಂತ ಮಾರ್ಮಿಕವಾಗಿ ಪ್ರಶ್ನಿಸಿ ಕಾವೇರಿ ನಿವಾಸವನ್ನು ಅವರು ಕೇಳಿದ್ದರೆ ಬಿಟ್ಟು ಕೊಡುತ್ತಿದ್ದೆ ಅಂತ ಹೇಳಿದರು.

ಬೆಂಗಳೂರು: ಕಳೆದ ವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಸ್ಟ್ರೇಲಿಯ ಮತ್ತು ಪಾಕಿಸ್ತಾನದ ನಡುವೆ ನಡೆದ ಐಸಿಸಿ ವಿಶ್ವಕಪ್ 2023 (ICC CWC 2023) ಟೂರ್ನಿಯ ರೌಂಡ್ ರಾಬಿನ್ ಪಂದ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮೈದಾನಕ್ಕೆ ಹೋಗಿ ವೀಕ್ಷಿಸಿದ್ದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹಲವು ಕಾಮೆಂಟ್ ಗಳನ್ನು ಮಾಡಿದ್ದಾರೆ. ಮಜಾ ಮಾಡಲು ಹೋಗಿದ್ರು, ಪಾಕಿಸ್ತಾನವನ್ನು ಬೆಂಬಲಿಸಲು ಹೋಗಿದ್ದರು ಅಂತೆಲ್ಲ ಅವರು ಹೇಳಿದ್ದಾರೆ. ಅವರ ಕಾಮೆಂಟ್ ಗಳಿಗೆ ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ, ನಗುತ್ತಾ ಉತ್ತರಿಸಿದ ಮುಖ್ಯಮಂತ್ರಿ, ಕ್ರೀಡೆಯನ್ನು ಬೆಂಬಲಿಸಲು ನಾವು ಹೋಗಿದ್ದು ಬೇರೆ ಯಾವ ಕಾರಣಕ್ಕೂ ಅಲ್ಲ ಎಂದು ಹೇಳಿದರು. ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ವೆಸ್ಟ್ ಎಂಡ್ ಹೋಟೆಲ್​ನಲ್ಲಿದ್ದರಲ್ಲ ಅದ್ಯಾಕೆ ಅಂತ ಮಾರ್ಮಿಕವಾಗಿ ಪ್ರಶ್ನಿಸಿ ಕಾವೇರಿ ನಿವಾಸವನ್ನು ಅವರು ಕೇಳಿದ್ದರೆ ಬಿಟ್ಟು ಕೊಡುತ್ತಿದ್ದೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ