AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜೆ ವಿಚಾರವೂ ವಿವಾದಕ್ಕೆ ಕಾರಣವಾಗಿದೆ, ಏನಿದು ದಸರಾ ರಜೆ ವಿವಾದ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಕ್ಷಕರು ಬರೆದ ಪತ್ರದಲ್ಲಿ ಏನಿದೆ?

ಬೇರೆ ಇಲಾಖೆಯ ನೌಕರರಿಗೆ 30 ದಿನಗಳ ರಜೆ ಇದ್ರೆ, ಶಿಕ್ಷಕರಿಗೆ ಹತ್ತು ಗಳಿಕೆ ರಜೆಯಷ್ಟೆ. ಇದ್ಯಾವ ನ್ಯಾಯ ಎಂದು ಶಿಕ್ಷಕರ ಸಂಘ ಆಕ್ರೋಶ ಹೊರಹಾಕಿದೆ. ಶಿಕ್ಷಣ ಇಲಾಖೆ ಕಳೆದ ವರ್ಷ ಕೊರೊನಾ ಹೆಸರಲ್ಲಿ ರಜೆಯ ಅವಧಿ ವಿಸ್ತರಣೆ ಬಗ್ಗೆ ಮೌಖಿಕವಾಗಿ ಶಿಕ್ಷಕರ ಸಂಘಕ್ಕೆ ತಿಳಿಸಿತ್ತು.ಆದ್ರೆ ಈ ವರ್ಷವೂ ರಜೆಯ ಅವಧಿಯನ್ನ ವಿಸ್ತರಣೆ ಮಾಡಿಲ್ಲ, ಶಿಕ್ಷಕರ ರಜೆಯನ್ನ ಸುಖಾಸುಮ್ಮನೆ ಕಡಿತ ಮಾಡಲಾಗಿದೆ - ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ರಜೆ ವಿಚಾರವೂ ವಿವಾದಕ್ಕೆ ಕಾರಣವಾಗಿದೆ, ಏನಿದು ದಸರಾ ರಜೆ ವಿವಾದ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಕ್ಷಕರು ಬರೆದ ಪತ್ರದಲ್ಲಿ ಏನಿದೆ?
ದಸರಾ ರಜೆ ವಿಚಾರವೂ ವಿವಾದಕ್ಕೆ ಕಾರಣ, ಮುಖ್ಯಮಂತ್ರಿಗೆ ಪತ್ರ ಬರೆದ ಶಿಕ್ಷಕರು
ಶಿವಕುಮಾರ್ ಪತ್ತಾರ್
| Edited By: |

Updated on:Oct 17, 2023 | 10:06 AM

Share

ಇಡೀ ರಾಜ್ಯದಲ್ಲಿ ಶಾಲೆಗಳಿಗೆಲ್ಲ ರಜೆ ಇದೆ. ಮಕ್ಕಳು ರಜೆಯ ಖುಷಿಯಲ್ಲಿದ್ದಾರೆ.ದಸರಾ ರಜೆಯನ್ನ ಮಕ್ಕಳು ಎಂಜಾಯ್ ಮಾಡ್ತಿದಾರೆ.ಆದ್ರೆ ಇದೀಗ ದಸರಾ ರಜೆಯ ವಿಚಾರವೂ ಸುದ್ದಿಯಾಗಿದೆ.ಮಕ್ಕಳು ಎಂಜಾಯ್ ಮಾಡ್ತಿದ್ರೆ ಶಿಕ್ಷಕರು ಸುದ್ದಿಯಾಗಿದ್ದಾರೆ.ಶಿಕ್ಷಕರು ಸುದ್ದಿಯಾಗೋಕೆ ಕಾರಣ ಅದೇ ರಜೆ.ಎಸ್ ದಸರಾ ರಜೆ (Navratri) ಅವಧಿ ಕಡಿತ ಮಾಡಲಾಗಿದೆ ಎಂದು ಶಿಕ್ಷಕರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.ದಸರಾ ರಜೆಯನ್ನ ವಿಸ್ತರಣೆ ಮಾಡಬೇಕೆಂದು ಹುಬ್ಬಳ್ಳಿ (Hubballi) ಶಿಕ್ಷಕರು ಪತ್ರ ಬರೆದಿದ್ದಾರೆ.ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಕರು ಪತ್ರ ಬರೆದಿದ್ದಾರೆ. ದಸರಾ ರಜೆ ವಿಚಾರವೂ ಇದೀಗ ವಿವಾದಕ್ಕೆ ಕಾರಣವಾಗಿದೆ…ಅಷ್ಟಕ್ಕೂ ಏನಿದು ರಜಾ (Holiday) ವಿವಾದ (Controversy) ಅಂತೀರಾ ಈ ಸ್ಟೋರಿ ನೋಡಿ…ಒಂದು ಕಡೆ ರಜೆ ವಿಚಾರವಾಗಿ ಶಿಕ್ಷಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಕರಿಂದ ಪತ್ರ . ಮತ್ತೊಂದು ಕಡೆ ಮಾಜಿ ಸಿಎಂ ಬಳಿಯೂ ಮನವಿ ಸಲ್ಲಿಸಿದ ಶಿಕ್ಷಕರು. ರಜೆ ವಿಸ್ತರಣೆ ಮಾಡಿ ಎಂದು ಅಳಲು ತೋಡಿಕೊಳ್ತಿರೋ ಶಿಕ್ಷಕರು. ಇವೆಲ್ಲ ವಿದ್ಯಮಾನಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.

ಹುಬ್ಬಳ್ಳಿ ಶಿಕ್ಷಕರು ಇದೀಗ ರಜೆಗಾಗಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಎಸ್ ಇದಕ್ಕೆಲ್ಲ ಕಾರಣ ದಸರಾ ರಜೆ, ಮಕ್ಕಳಿಗೆ ಇದೀಗ ದಸರಾ ರಜೆಯನ್ನ ನೀಡಲಾಗಿದೆ. ಆದ್ರೆ ಇದೇ ತಿಂಗಳು 25 ಕ್ಕೆ ಮತ್ತೆ ಶಾಲೆ ಆರಂಭ ಎಂದು ಇಲಾಖೆ ಹೇಳಿದೆ.ಆದ್ರೆ ದಸರಾ ಹಬ್ಬ ಇರೋದು 24 ಕ್ಕೆ.ಒಂದು ದಿನದಲ್ಲಿ ಮಕ್ಕಳು ಹೇಗೆ ಶಾಲೆಗೆ ಬರೋಕೆ ಸಾಧ್ಯ ಅನ್ನೋ ಪ್ರಶ್ನೆ ಇವರದಾಗಿದೆ.

ಶಿಕ್ಷಣ ಇಲಾಖೆ ದಸರಾ ರಜೆಯನ್ನ ಕಡಿತ ಮಾಡಿದೆಯಂತೆ.ಕೊರೊನಾ ಸಮಯದಲ್ಲಿ ರಜೆ ಕಡಿತ ಮಾಡಿತ್ತು.ಆದ್ರೆ ಅದನ್ನ ಇನ್ನು ಸರಿ ಮಾಡಿಲ್ಲ.ಮೊದಲು ದಸರಾ ರಜೆ ಒಂದು ತಿಂಗಳಿತ್ತು.ಇದೀಗ ಕೇವಲ 15 ದಿನಕ್ಕೆ ರಜೆಯನ್ನ ಕಡಿತ ಮಾಡಿದೆ.ದಸರಾ ಹಬ್ಬ ಮರುದಿನವೇ ಶಾಲೆ ಆರಂಭ ಮಾಡ್ತಿರೋದು ಮಕ್ಕಳಿಗೆ ಒತ್ತಡ ಆಗತ್ತೆ,ಮಕ್ಕಳು ಹಬ್ಬಕ್ಕೆ ಹೋಗಿರ್ತಾರೆ.ಆ ಕಾರಣಕ್ಕೆ ದಸರಾ ರಜೆಯನ್ನ ವಿಸ್ತರಣೆ ಮಾಡಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಕರು ಪತ್ರ ಬರೆದಿದ್ದಾರೆ.

ಇನ್ನು ಶಿಕ್ಷಣ ಇಲಾಖೆ ಕಳೆದ ವರ್ಷ ರಜೆಯ ಅವಧಿ ವಿಸ್ತರಣೆ ಬಗ್ಗೆ ಮೌಖಿಕವಾಗಿ ಶಿಕ್ಷಕರ ಸಂಘಕ್ಕೆ ತಿಳಿಸಿತ್ತು.ಆದ್ರೆ ಈ ವರ್ಷವೂ ರಜೆಯ ಅವಧಿಯನ್ನ ವಿಸ್ತರಣೆ ಮಾಡಿಲ್ಲ,ಇದಲ್ಲದೆ ಶಿಕ್ಷಕರ ರಜೆಯನ್ನ ಸುಖಾಸುಮ್ಮನೆ ಕಡಿತ ಮಾಡಲಾಗಿದೆ ಅನ್ನೋ ಆರೋಪವೂ ಇದೆ. ಈ ಕಾರಣಕ್ಕೆ ಶಿಕ್ಷಕರ ಒಕ್ಕೂಟ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ರಜೆಯ ಅವಧಿ ವಿಸ್ತರಣೆ ಮಾಡಲು ಮನವಿ ಮಾಡಿದ್ರು.

ದಸರಾ ರಜೆ ಅಂದ ತಕ್ಷಣ ನಮಗೆಲ್ಲ ಹಬ್ಬಗಳ ನೆನಪು,ಹಬ್ಬಕ್ಕಾಗಿಯೇ ದಸರಾ ರಜೆ ಕೊಡಲಾಗಿತ್ತು,ಆದ್ರೆ ಇದೀಗ ಹಬ್ಬ ಮುಗಿದ ಮರುದಿನವೇ ಶಾಲೆ ಆರಂಭ ಮಾಡ್ತಿರೋದು ಗ್ರಾಮೀಣ ಭಾಗದ ಮಕ್ಕಳಿಗೆ ತೊಂದರೆ ಉಂಟಾಗತ್ತೆ. ಬಹುತೇಕ ಮಕ್ಕಳು ರಜೆಗಾಗಿ ಊರಿಗೆ ಹೋಗಿರ್ತಾರೆ.ಅವರಿಗೆ ಮರುದಿನವೇ ಶಾಲೆಗೆ ಬರೋದಿಕ್ಕೆ ಆಗಲ್ಲ.ಆ ಕಾರಣಕ್ಕೆ ಶಿಕ್ಷಕರ ಸಂಘ ರಜೆಯ ಅವಧಿಯನ್ನ ವಿಸ್ತರಣೆ ಮಾಡಲು ಮುಖ್ಯಮಂತ್ರಿ, ಶಿಕ್ಷಣ ಸಚಿವರ ಕದ ತಟ್ಟಿದೆ. 24 ರಂದು ಹಬ್ಬ ಇದ್ರು,25 ಕ್ಕೆ ಶಾಲೆ ಆರಂಭವಾಗಿರೋ ಕಾರಣಕ್ಕೆ ಮಕ್ಕಳು ಒತ್ತಡದಲ್ಲಿರುತ್ತವೆ, ಹಬ್ಬ ಆಚರಣೆಯೂ ಆಗಲ್ಲ ಎಂದು ಶಿಕ್ಷಕರ ಸಂಘ ಜಗದೀಶ್ ಶೆಟ್ಟರ್ ಬಳಿ ಮನವಿ ಮಾಡಿಕೊಂಡರು.ಬೇರೆ ಇಲಾಖೆಯ ನೌಕರರಿಗೆ 30 ರಜೆ ಇದ್ರೆ ,ಶಿಕ್ಷಕರಿಗೆ ಮಾತ್ರ ಹತ್ತು ಗಳಿಕೆ ರಜೆಯಷ್ಟೆ. ಇದ್ಯಾವ ನ್ಯಾಯ ಎಂದು ಶಿಕ್ಷಕರ ಸಂಘ ಆಕ್ರೋಶ ಹೊರಹಾಕಿದ್ರು…

ಒಟ್ಟಾರೆ ರಾಜ್ಯಾದ್ಯಂತ ಶಾಲೆಗಳು ರಜೆ ಇದ್ರು ಶಿಕ್ಷಕರು ಸುದ್ದಿಯಲ್ಲಿದ್ದಾರೆ. ಶಿಕ್ಷಕರಿಗೊಂದು ನ್ಯಾಯ ಬೇರೆ, ಇಲಾಖೆಯ ನೌಕರರಿಗೊಂದು ನ್ಯಾಯನಾ ಎಂದು ಶಿಕ್ಷಕರ ಸಂಘ ಅಸಮಾಧಾನ ಹೊರ ಹಾಕಿದೆ.ಈ ತಿಂಗಳು 31 ರ ವರೆಗೂ ರಜೆ ಅವಧಿ ವಿಸ್ತರಣೆ ಮಾಡಲು ಶಿಕ್ಷಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು,ಶಿಕ್ಷಣ ಇಲಾಖೆ ರಜೆ ವಿಸ್ತರಣೆ ಮಾಡತ್ತಾ,ಆಥವಾ ಈಗಿರೋ ಆದೇಶ ಮುಂದುವರೆಸುತ್ತಾ ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:02 am, Tue, 17 October 23

Follow Us
Shivakumar Pattar
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್