ಶಿವಕುಮಾರ್ ಆಡಿದ ಮಾತಗಳನ್ನು ಪದೇಪದೆ ವಿಶ್ಲೇಷಣೆ ಮಾಡೋದ್ರಲ್ಲಿ ಅರ್ಥವಿಲ್ಲ: ಶರತ್ ಲೋಹಿತಾಶ್ವ, ನಟ
ಬೆಂಗಳೂರು ಚಲನಚಿತ್ರೋತ್ಸವ ಬಹಳ ಚೆನ್ನಾಗಿ ನಡೆದುಕೊಂಡು ಬರುತ್ತಿದೆ, ಹಿಂದೆಯೂ ತಾನು ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿರುವುದು ನಿಜವಾದರೂ ಈ ಬಾರಿ ತಾನು ನಟಿಸಿದ ಸಿನಿಮಾ ರಾಷ್ಟ್ರ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದ ಕಾರಣ ಉತ್ಸವದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೆ, ರಾಷ್ಟ್ರಪ್ರಶಸ್ತಿ ವಿಜೇತ ಸಂತೋಷ ಅವರ ನಿರ್ದೇಶನದಲ್ಲಿ ‘ಬಿದಾಯಿ’ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ, ಇದರಲ್ಲಿ ತನ್ನದು ಮಹತ್ತರ ಪಾತ್ರವಿದೆ ಎಂದು ಶರತ್ ಹೇಳಿದರು.
ಬೆಂಗಳೂರು, ಮಾರ್ಚ್ 6: ಡಿಕೆ ಶಿವಕುಮಾರ್ (DK Shivakumar) ಆಡಿದ ಮಾತುಗಳಿಗೆ ಕಲಾವಿದರು ಏನಾದರೂ ಹೆದರಿದರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಯಾಂಡಲ್ ವುಡ್ ಖ್ಯಾತ ನಟ ಶರತ್ ಲೋಹಿತಾಶ್ವ, ಹೆದರುವ ಪ್ರಶ್ನೆ ಅಲ್ಲ, ಯಾವುದೋ ಮಾತನ್ನು ಪದೇಪದೆ ಹೇಳುವುದರಿಂದ, ಪದಗಳನ್ನು ಎಳೆದೆಳೆದು ವಿಶ್ಲೇಷಣೆ ಮಾಡುವುದರಲ್ಲಿ ಅರ್ಥವಿಲ್ಲ, ಅಧಿಕಾರ ಶಾಶ್ವತವಲ್ಲ, ಅದರೆ ಚಲನಚಿತ್ರೋತ್ಸವ ಶಾಶ್ವತ, ಇದರಲ್ಲಿ ಎಲ್ಲರೂ ಸೇರಿ ಖುಷಿ ಪಡಬೇಕು, ನಮ್ಮ ಮುಂದಿನ ಪೀಳಿಗೆಗೆ ಮಾದರಿಯನ್ನು ಬಿಟ್ಟು ಹೋಗಬೇಕು ಎಂದಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿವಾದದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ; ಹೈಕೋರ್ಟ್ನಿಂದ ನೋಟಿಸ್