CM ಕೊವಿಡ್ ನಿಧಿಗೆ ಹರಿದು ಬರ್ತಿದೆ ಹಣ, ಆದ್ರೆ ನಯಾ ಪೈಸೆ ಬಳಸಿಲ್ಲ ಯಾಕೆ?
ಬೆಂಗಳೂರು: ಮಹಾಮಾರಿ ಕೊರೊನಾ ಸಂಕಷ್ಟ ಎದುರಿಸಲು ಸಿಎಂ ಕೊವಿಡ್ ಪರಿಹಾರ ನಿಧಿಯನ್ನು ಕಾಯ್ದಿಸಲಾಗಿತ್ತು. ಇದರಲ್ಲಿ ಸಂಗ್ರಹವಾಗುವ ಹಣವನ್ನು ಕೊವಿಡ್ ಚಿಕಿತ್ಸೆಗೆ ಹಾಗೂ ಇತರ ನಿರ್ವಾಹಣೆಗೆ ಬಳಸಲು ತೀರ್ಮಾನಿಸಲಾಗಿತ್ತು. ಆದರೆ ಸಿಎಂ ಕೊವಿಡ್ ಪರಿಹಾರ ನಿಧಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದೆ. ಕೋಟಿ ಗಟ್ಟಲೆ ಹಣ ಇದ್ರೂ ಸರ್ಕಾರ ನಯಾ ಪೈಸೆ ಖರ್ಚು ಮಾಡಿಲ್ಲ ಯಾಕೆ? ಸೋಂಕಿತರ ಚಿಕಿತ್ಸೆಗೆ, ವೈದ್ಯಕೀಯ ಸೇವೆಗೆ ಬಳಸಿಕೊಂಡಿಲ್ಲ ಯಾಕೆ? ಕೋಟಿ ಕೋಟಿ ಹಣವನ್ನ ಕಟ್ಟಿಟ್ಟು ಮಾಡೋದೇನು? ಎಂಬ ಪ್ರಶ್ನೆ ಎದ್ದಿದೆ. ಜೂನ್ 18ರವರೆಗೆ […]
ಬೆಂಗಳೂರು: ಮಹಾಮಾರಿ ಕೊರೊನಾ ಸಂಕಷ್ಟ ಎದುರಿಸಲು ಸಿಎಂ ಕೊವಿಡ್ ಪರಿಹಾರ ನಿಧಿಯನ್ನು ಕಾಯ್ದಿಸಲಾಗಿತ್ತು. ಇದರಲ್ಲಿ ಸಂಗ್ರಹವಾಗುವ ಹಣವನ್ನು ಕೊವಿಡ್ ಚಿಕಿತ್ಸೆಗೆ ಹಾಗೂ ಇತರ ನಿರ್ವಾಹಣೆಗೆ ಬಳಸಲು ತೀರ್ಮಾನಿಸಲಾಗಿತ್ತು.
ಆದರೆ ಸಿಎಂ ಕೊವಿಡ್ ಪರಿಹಾರ ನಿಧಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದೆ. ಕೋಟಿ ಗಟ್ಟಲೆ ಹಣ ಇದ್ರೂ ಸರ್ಕಾರ ನಯಾ ಪೈಸೆ ಖರ್ಚು ಮಾಡಿಲ್ಲ ಯಾಕೆ? ಸೋಂಕಿತರ ಚಿಕಿತ್ಸೆಗೆ, ವೈದ್ಯಕೀಯ ಸೇವೆಗೆ ಬಳಸಿಕೊಂಡಿಲ್ಲ ಯಾಕೆ? ಕೋಟಿ ಕೋಟಿ ಹಣವನ್ನ ಕಟ್ಟಿಟ್ಟು ಮಾಡೋದೇನು? ಎಂಬ ಪ್ರಶ್ನೆ ಎದ್ದಿದೆ.
ಜೂನ್ 18ರವರೆಗೆ ಸಿಎಂ ಕೊವಿಡ್ ಪರಿಹಾರ ನಿಧಿ ಖಾತೆಗೆ ಬರೋಬ್ಬರಿ ₹290 ಕೋಟಿ 98 ಲಕ್ಷ ಹಣ ಸಂಗ್ರಹವಾಗಿದೆ. ₹290 ಕೋಟಿ ಸಂಗ್ರಹವಾದ್ರೂ ಒಂದು ರೂಪಾಯಿ ಖರ್ಚು ಮಾಡಿಲ್ಲ. ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಸಿಎಂ ಕೊವಿಡ್ ಪರಿಹಾರ ನಿಧಿಗೆ ಹಣ ಜಮೆಯಾಗಿದೆ. ಸಂಗ್ರಹವಾದ ಹಣದಲ್ಲಿ ಸರ್ಕಾರ ನಯಾ ಪೈಸೆ ಖರ್ಚು ಮಾಡಿಲ್ಲ. ಆದರೆ ಆ ಪೂರ್ತಿ ಹಣವನ್ನ ಕೊವಿಡ್ ಸೇವೆಗಳಿಗೆ ಬಳಸಲು ಕಾಯ್ದಿರಿಸಲಾಗಿದೆ.
ಇದುವರೆಗೂ ಕೊರೊನಾ ತುರ್ತು ಸೇವೆಗೆ ಹಣ ಬಳಕೆ ಮಾಡಿಲ್ಲ. ಹೀಗಾಗಿ ಸಿಎಂ ಪರಿಹಾರ ನಿಧಿ ಬಳಕೆ ಮಾಡದೆ ಇರೋದಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ವಿಚಾರ ಬಹಿರಂಗವಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದೇ ದೊಡ್ಡ ಸವಾಲಾಗಿದೆ. ಈ ಮಧ್ಯೆ ಇರುವ ಹಣವನ್ನು ಬಳಸಿಕೊಳ್ಳದೆ ಅದನ್ನು ಹಾಗೇ ರಕ್ಷಿಸುತ್ತಿರುವುದ ಯಾಕೆ ಅನ್ನುವುದೇ ನಿಗೂಢವಾಗಿದೆ. ಇದಕ್ಕೆ ಉತ್ತರ ನಮ್ಮ ಸಿಎಂ ಸಾಹೇಬ್ರೇ ಕೊಡಬೇಕು.