ಹಾಸನ ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ ಹಾವಳಿ, ಜಮೀನುಗಳಿಗೆ ನುಗ್ಗಿ ಕಾಫಿ, ಭತ್ತ ಮತ್ತು ಮೆಣಸು ಬೆಳೆ ಸರ್ವನಾಶ

|

Updated on: Jan 11, 2024 | 1:18 PM

ಈ ಭಾಗಕ್ಕೆ ಸೌರವ್ ಕುಮಾರ್ ಹೆಸರಿನ ಒಬ್ಬ ದಕ್ಷ ಅರಣ್ಯಾಧಿಕಾರಿ ಬಂದಿರೋದು ಗೊತ್ತಾಗಿದೆ, ಅವರ ಬಗ್ಗೆ ಹೆಚ್ಚು ಕೇಳಿದ್ದೇವೆ, ಈಗ ಅವರೇ ನಮ್ಮ ನೆರವಿಗೆ ಬರಬೇಕು ಎಂದು ಹೇಳುವ ಸಾಮಾಜಿಕ ಕಾರ್ಯಕರ್ತ ಅಪಾರ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ (wild elephants) ಹಾವಳಿ ನಿಲ್ಲುವ ಲಕ್ಷಣಗಳಿಲ್ಲ. ಸಕಲೇಶಪುರದ (Sakleshpur) ಯಡೇಹಳ್ಳಿ ಹೆಸರಿನ ಊರಲ್ಲಿ ಇಬ್ಬರು ರೈತರ ಜಮೀನು ಮತ್ತು ಗದ್ದೆಗಳನ್ನು ಕಾಡಾನೆಗಳ ಹಿಂಡೊಂದು ಸಂಪೂರ್ಣವಾಗಿ ನಾಶಮಾಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಈ ಭಾಗದ ಸಾಮಾಜಿಕ ಕಾರ್ಯಕರ್ತೊಬ್ಬರು ಹೇಳುವ ಪ್ರಕಾರ ಗ್ರಾಮದ ಕಾಫಿತೋಟವೊಂದರಲ್ಲಿ ಬೀಡುಬಿಟ್ಟಿರುವ ಆನೆಗಳು ಕಳೆದ ರಾತ್ರಿ ರುದ್ರಪ್ಪ ಹೆಸರಿನ ರೈತನ ಜಮೀನು ಮತ್ತು ತೋಟಕ್ಕೆ ನುಗ್ಗಿ ಸುಮಾರು 5,000 ಮೆಣಸು ಗಿಡ ಮತ್ತು ಕಾಫಿ ಗಿಡಗಳನ್ನು ತುಳಿದು ಹಾಳು ಮಾಡುವ ಜೊತೆಗೆ ನೀರಿನ ಪೈಪ್, ಡ್ರಮ್ ಗಳನ್ನು ತುಳಿದು ಒಡೆದು ಹಾಕಿವೆ. ಬಾಳೆತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಸಹ ಹಾಳು ಮಾಡಿವೆ ಎಂದು ಅವರು ಹೇಳುತ್ತಾರೆ. ರುದ್ರಪ್ಪ ಜಮೀನು ಪಕ್ಕದಲ್ಲಿರುವ ಸಾಗರ್ ಎನ್ನುವ ರೈತನ ಭತ್ತದ ಗದ್ದೆಗೂ ದಾಳಿಯಿಟ್ಟರುವ ಆನೆಗಳು ಭತ್ತದ ಬೆಳೆಯನ್ನು ಒಂದೇಒಂದು ಕಾಳು ಕೈಗೆ ಹತ್ತದ ಹಾಗೆ ತುಳಿದು ಧ್ವಂಸಗೊಳಿಸಿವೆ ಎಂದು ಅವರು ಹೇಳಿದರು. ಈ ಭಾಗಕ್ಕೆ ಸೌರವ್ ಕುಮಾರ್ (Sourav Kumar) ಹೆಸರಿನ ಒಬ್ಬ ದಕ್ಷ ಅಧಿಕಾರಿ ಬಂದಿರೋದು ಗೊತ್ತಾಗಿದೆ, ಅವರ ಬಗ್ಗೆ ಹೆಚ್ಚು ಕೇಳಿದ್ದೇವೆ, ಈಗ ಅವರೇ ನಮ್ಮ ನೆರವಿಗೆ ಬರಬೇಕು ಎಂದು ಹೇಳುವ ಸಾಮಾಜಿಕ ಕಾರ್ಯಕರ್ತ ಅಪಾರ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on