AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಪಸಂಖ್ಯಾತರ ವೋಟ್ ತಪ್ಪುವ ಆತಂಕದಿಂದ ಅಯೋಧ್ಯೆ ಆಹ್ವಾನ‌ ತಿರಸ್ಕರಿಸಿದ ಕಾಂಗ್ರೆಸ್: ಪ್ರಲ್ಹಾದ್ ಜೋಶಿ

ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗದಿರಲು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ. ರಾಮ ಮಂದಿರದ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕುತ್ತಿದ್ದರೆ, ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದೀಗ ಸಿದ್ದರಾಮಯ್ಯ ಟ್ವೀಟ್​ಗೆ ಪ್ರತಿಟ್ವೀಟ್ ಮಾಡಿ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಅಲ್ಪಸಂಖ್ಯಾತರ ವೋಟ್ ತಪ್ಪುವ ಆತಂಕದಿಂದ ಅಯೋಧ್ಯೆ ಆಹ್ವಾನ‌ ತಿರಸ್ಕರಿಸಿದ ಕಾಂಗ್ರೆಸ್: ಪ್ರಲ್ಹಾದ್ ಜೋಶಿ
ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಆಹ್ವಾನ ತಿರಸ್ಕರಿಸಿದ್ದನ್ನು ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ ಮಾಡಿದ ಟ್ವೀಟ್​ಗೆ ಪ್ರತಿಟ್ವೀಟ್ ಮಾಡಿ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ
Sunil MH
| Edited By: |

Updated on:Jan 11, 2024 | 1:23 PM

Share

ಬೆಂಗಳೂರು, ಜ.11: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಶ್ರೀರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಗೈರಾಗುತ್ತಿರುವುದನ್ನು ಸಮರ್ಥಿಸಿಕೊಂಡು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮಾಡಿದ ಟ್ವೀಟ್​ಗೆ ಪ್ರತಿಟ್ವೀಟ್ ಮಾಡಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ.

ಅಲ್ಪಸಂಖ್ಯಾತರ ವೋಟ್ ತಪ್ಪುವ ಆತಂಕದಿಂದ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯ ಆಹ್ವಾನ‌ ತಿರಸ್ಕರಿಸಿದ್ದಾರೆ. ಈ ಹಿಂದೆಯೂ ಸೋಮನಾಥ ದೇವಸ್ಥಾನ ಉದ್ಘಾಟನೆಗೆ ಹೋಗಿಲ್ಲ. ಕಾಂಗ್ರೆಸ್​ನ ತುಷ್ಟೀಕರಣದ ಪರಾಕಾಷ್ಠೆಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಅಯೋಧ್ಯೆಯಲ್ಲಿ ರಾಜಕೀಯ ಮಾಡಲು, ಅಲ್ಲಿ ನಡೆಯುತ್ತಿರುವುದು 140 ಕೋಟಿ ಭಾರತೀಯರ ಅಸ್ಮಿತೆ ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹೊರತು ವಿದೇಶಿ ವ್ಯಕ್ತಿಯೊಬ್ಬ ಸ್ಥಾಪಿಸಿದ ಕಾಂಗ್ರೆಸ್ ಪಕ್ಷದ ಚುನಾವಣಾ ರ್ಯಾಲಿ ಅಲ್ಲ ಎಂದು ಜೋಶಿ ಟ್ವೀಟ್ ಮಾಡಿದ್ದಾರೆ.

ಶ್ರೀರಾಮನ ಮೇಲೆ ನಂಬಿಕೆ ಭಕ್ತಿ ಶ್ರದ್ಧೆ ಇದ್ದವರು ಖಂಡಿತವಾಗಿಯೂ ಯಾವುದೇ ರಾಜಕೀಯ ಮಾಡದೆ ಮಂದಿರಕ್ಕೆ ಭೇಟಿ ನೀಡುತ್ತಾರೆ. ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ನೀವು ನಿಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು ಇಂತಹ ವಿಚಾರ ಮುನ್ನಲೆಗೆ ತರುವ ಪ್ರಯತ್ನ ಬೇಡ, ರಾಜ್ಯ ಮಾತ್ರವಲ್ಲ ಇಡೀ ದೇಶದ ಜನತೆಗೆ ಅರ್ಥವಾಗಿದೆ ಕರ್ನಾಟಕದಲ್ಲಿ ನಿಮ್ಮ “ಸುಳ್ಳಿನ ಸರಕಾರ ಎತ್ತ ಸಾಗುತ್ತಿದೆ” ಎಂದು! ಜೋಶಿ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಪ್ರಲ್ಹಾದ್ ಜೋಶಿ ಟ್ವೀಟ್

ಗ್ಯಾರಂಟಿ ಯೋಜನೆಗಳಿಗೆ ಸಮಿತಿ ರಚಿಸಿ ದುಂದುವೆಚ್ಚ ಮಾಡುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಜೋಶಿ, ತಮ್ಮ ‌ಬೆಂಬಲಿಗರನ್ನು ತೃಪ್ತಿಪಡಿಸಲು ಸಮಿತಿ ರಚಿಸುತ್ತಿದ್ದಾರೆ. ಸಮಿತಿ ರಚಿಸಿ ಸರ್ಕಾರದಿಂದ ಅವರಿಗೆ ಸಂಬಳ ಕೊಡುತ್ತಿದ್ದಾರೆ. ಬೊಕ್ಕಸದ ಹಣವನ್ನು ರಾಜ್ಯ ಸರ್ಕಾರ ದುಂದು ವೆಚ್ಚ ಮಾಡುತ್ತಿದೆ. ಇದು‌ ಕಾನೂನಾತ್ಮಕವಾಗಿ ಸರಿಯಲ್ಲ, ನಿಮಗೆ ನೆನಪಿರಲಿ. ಇದರ ವಿರುದ್ಧ ಕಾನೂನಾತ್ಮಕವಾಗಿ,‌ ರಾಜಕೀಯವಾಗಿ ನಾವು ಹೋರಾಟ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಅಪೂರ್ಣ ರಾಮ ಮಂದಿರ ಉದ್ಘಾಟನೆ: ಮೋದಿಗೆ ಸಾಧನೆ ಮುಂದಿಟ್ಟು ಗೆಲ್ಲುವ ಆತ್ಮವಿಶ್ವಾಸ ಇಲ್ಲ ಎಂದ ಸಿದ್ದರಾಮಯ್ಯ

ಸ್ತಬ್ಧಚಿತ್ರ ವಿಚಾರದಲ್ಲಿ‌ ಕರ್ನಾಟಕ ಕಡೆಗಣನೆ ಆರೋಪ ವಿಚಾರವಾಗಿ ಮಾತನಾಡಿದ ಜೋಶಿ, ಕಳೆದ ಹದಿನಾಲ್ಕು ವರ್ಷದಲ್ಲಿ ಹತ್ತು ವರ್ಷ ಅವಕಾಶ ಸಿಕ್ಕಿದೆ ಅಂತ‌ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆ ಹತ್ತು ವರ್ಷದಲ್ಲಿ ಬಹಳಷ್ಟು ಕಾಲ‌ ನಮ್ಮದೇ (ಬಿಜೆಪಿ)‌ ಸರ್ಕಾರ ಇತ್ತು. ಅಲ್ಲಿಗೆ ನಾವೇ ಅವಕಾಶ ಮಾಡಿಕೊಟ್ಟಂತೆ ಆಯ್ತಲ್ಲ ಎಂದು ಕೈ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ರಾಜ್ಯದ ಸ್ತಬ್ಧಚಿತ್ರಗಳಿಗೆ 2006, 2007, 2009, 2010 ರಲ್ಲಿ ಅವಕಾಶ ಕೊಟ್ಟಿರಲಿಲ್ಲ. ಆಗ ನಮ್ಮ ನಾಡಿಗೆ ಅಪಮಾನ ಆಗಿರಲಿಲ್ಲವೇ? ಆಗ ಯಾಕೆ ಸಿದ್ದರಾಮಯ್ಯ ಮಾತಾಡಲಿಲ್ಲ? ಇದಕ್ಕೊಂದು ಸಮಿತಿ ಇದೆ. ಆ ಸಮಿತಿ ನ್ಯಾಯಯುತವಾಗಿ ಎಲ್ಲ ರಾಜ್ಯಗಳಿಗೂ ಕೊಡುತ್ತದೆ. ಪ್ರತೀ ವರ್ಷ ಆಯ್ಕೆ ಮಾಡುತ್ತಾರೆ. ಹತ್ತು ವರ್ಷ ನಮ್ಮ (ಬಿಜೆಪಿ) ಅವಧಿಯಲ್ಲಿ ಆಯ್ಕೆ ಮಾಡಿದ್ದಾರೆ. ಸಿದ್ದರಾಮಯ್ಯ ಚಿಲ್ಲರೆ ರಾಜಕಾರಣ ಬಂದ್ ಮಾಡಲಿ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Thu, 11 January 24