ಸಂಬಳ ಆಗದ ಸಾರಿಗೆ ನೌಕರರಿಂದ ನಾಳೆ ಡಿಪೋ ಮ್ಯಾನೇಜರ್​ಗಳ ವಿರುದ್ಧ ದೂರು: ವಕೀಲ ಬಾಲನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 12, 2021 | 8:08 PM

Karnataka Bus Strike: ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯ ನಂತರ ಮಾತನಾಡಿದ ವಕೀಲ ಬಾಲನ್, ನಾಳೆ ಡಿಪೋ ಮ್ಯಾನೇಜರ್‌ಗಳ ವಿರುದ್ಧ ದೂರು ನೀಡುವ ಕುರಿತು ಮಾಹಿತಿ ನೀಡಿದರು.

ಸಂಬಳ ಆಗದ ಸಾರಿಗೆ ನೌಕರರಿಂದ ನಾಳೆ ಡಿಪೋ ಮ್ಯಾನೇಜರ್​ಗಳ ವಿರುದ್ಧ ದೂರು: ವಕೀಲ ಬಾಲನ್
ಸರ್ಕಾರಿ ಬಸ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಜ್ಯ ಸರ್ಕಾರ ಮುಷ್ಕರ ನಿರತ ಸಾರಿಗೆ ನೌಕರರಿಗೆ ವೇತನ ನೀಡದಿರುವುದು ಕಾನೂನುಬಾಹಿರ. ಹೀಗಾಗಿ ವೇತನ ನಾಳೆ ಸಾರಿಗೆ ನೌಕರರು ಸೆಕ್ಷನ್ 406ರಡಿ ಡಿಪೋ ಮ್ಯಾನೇಜರ್‌ಗಳ ವಿರುದ್ಧ ದೂರು ನೀಡಲಿದ್ದಾರೆ ಎಂದು ಬೆಂಗಳೂರಿನಲ್ಲಿ ವಕೀಲ ಬಾಲನ್ ತಿಳಿಸಿದರು. ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯ ನಂತರ ಮಾತನಾಡಿದ ವಕೀಲ ಬಾಲನ್, ನಾಳೆ ಡಿಪೋ ಮ್ಯಾನೇಜರ್‌ಗಳ ವಿರುದ್ಧ ದೂರು ನೀಡುವ ಕುರಿತು ಮಾಹಿತಿ ನೀಡಿದರು.

ಈ ಮೊದಲು ಮಾತನಾಡಿದ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರ ಎಚ್ಚರಿಕೆಯಿಂದ ಮುದುವರಿಯಬೇಕಾಗಿದೆ. ಪ್ರೀತಿ, ವಿಶ್ವಾಸದಿಂದ ರಾಜ್ಯವನ್ನು ಕಟ್ಟಬೇಕಾಗಿದೆ. ದಬ್ಬಾಳಿಕೆ, ಬೆದರಿಕೆಯಿಂದ ರಾಜ್ಯವನ್ನು ಕಟ್ಟಲು ಸಾಧ್ಯವಿಲ್ಲ . ಇಂತಹ ಬೆದರಿಕೆಗಳು ಹೆಚ್ಚು ದಿನಗಳ ಕಾಲ ಉಳಿಯೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ನೌಕರರಿಗೆ ಸಂಬಳ ನೀಡದೆ ಸರ್ಕಾರ ವಂಚಿಸಿದೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಉಪಚುನಾವಣೆ ಮುಖ್ಯವಾಗಿದೆ. 1.30 ಲಕ್ಷ ಸಾರಿಗೆ ನೌಕರರ ಜೀವನದ ಬಗ್ಗೆ ನೋಡ್ತಿಲ್ಲ. ಸಾರಿಗೆ ನೌಕರರ ಜತೆ ಮಾತಾಡಿಲ್ಲ, ಸಮಸ್ಯೆಯನ್ನ ಆಲಿಸಿಲ್ಲ. ಮಾತುಕತೆ ಮಾಡುವುದಿಲ್ಲ ಎನ್ನುವುದು ತಪ್ಪು ನಿರ್ಧಾರ. ನಾವು ಅಹಿಂಸಾತ್ಮಕವಾಗಿ ಹೋರಾಟ ಮುಂದುವರೆಸುತ್ತೇವೆ. ಜನರ ಸಮಸ್ಯೆ ಕೇಳದಿರುವ ಸರ್ಕಾರ ಸರ್ಕಾರವೇ ಅಲ್ಲ. ನಾಳೆ ಯುಗಾದಿ ಹಬ್ಬ ಆಚರಿಸಬೇಕು. ಆದರೆ ಮಾರ್ಚ್ ತಿಂಗಳ ವೇತನ ನೀಡದೇ ಸರ್ಕಾರ ವಂಚನೆ ಮಾಡಿದೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿ ಸರ್ಕಾರದವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾಗರಿಕರ ಸಮಸ್ಯೆ ಕೇಳದ ಸರ್ಕಾರ ಸರ್ಕಾರವೇ ಅಲ್ಲ. ಸಾರಿಗೆ ಸಿಬ್ಬಂದಿಗಳು ಪ್ರತಿಭಟನೆ ಮುಂದುವರೆರೂ ಕೂಡ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದರ ಜೊತೆಗೆ ಸಂಬಳವನ್ನೂ ಕೊಟ್ಟಿಲ್ಲ. ನಾಳೆ ಯುಗಾದಿ ಹಬ್ಬ ಇದೆ . ವಿಪರ್ಯಾಸವೆಂದರೆ ಇದು ಮೊಂಡು ಧೋರಣೆ. ಹೀಗೆ ಜನರ ಸಮಸ್ಯೆ ಕೇಳದಿರುವ ಸರ್ಕಾರ ಸರ್ಕಾರವೇ ಅಲ್ಲ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ 1.30 ಲಕ್ಷ ನೌಕರರ ಜೀವನದ ಕುರಿತು ಲಕ್ಷ್ಯ ವಹಿಸುತ್ತಿಲ್ಲ. ಮಾತುಕತೆ ಮಾಡಲ್ಲ, ನಮ್ಮ ಸಮಸ್ಯೆ ಕೇಳಲ್ಲ ಎನ್ನುವುದು ತಪ್ಪು ನಿರ್ಧಾರ. ಸರ್ಕಾರಕ್ಕೆ ಚುನಾವಣೆಯೇ ಮುಖ್ಯವಾಗಿದೆ. ನಮ್ಮ ಕಷ್ಟ ಕೇಳೋದಿಲ್ಲ ಎನ್ನುತ್ತಿದೆ, ಇದು ಸರ್ಕಾರದ ತಪ್ಪು ನಿರ್ಧಾರ. ನಾವು ಅಹಿಂಸಾತ್ಮಕವಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಅವರು ಒತ್ತಿ ಹೇಳಿದರು.

ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಸಂಬಳ ನೀಡದೆ ವಂಚನೆ; ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೋಡಿಹಳ್ಳಿ ಚಂದ್ರಶೇಖರ್

ಇದನ್ನೂ ಓದಿ: Ugadi 2021: ಯುಗಾದಿ ಹಬ್ಬ, ಸಾರಿಗೆ ಸಿಬ್ಬಂದಿ ಮುಷ್ಕರ: ಸಾರ್ವಜನಿಕರ ನೆರವಿಗೆ ನೈರುತ್ಯ ರೈಲ್ವೆಯಿಂದ 20 ವಿಶೇಷ ರೈಲು

(Will lodge complaint against KSRTC depo managers tomorrow for not pay salary says Lawyer Balan instead of Ugadi 2021)