ಯುಗಾದಿ ಹಬ್ಬಕ್ಕೆ ಸಂಬಳ ನೀಡದೆ ವಂಚನೆ; ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೋಡಿಹಳ್ಳಿ ಚಂದ್ರಶೇಖರ್

Karnataka Bus Strike: ಸರ್ಕಾರ 1.30 ಲಕ್ಷ ನೌಕರರ ಜೀವನದ ಕುರಿತು ಲಕ್ಷ್ಯ ವಹಿಸುತ್ತಿಲ್ಲ. ನಮ್ಮ ಜತೆ ಮಾತುಕತೆ ಮಾಡಲ್ಲ, ನಮ್ಮ ಸಮಸ್ಯೆ ಕೇಳಲ್ಲ ಎನ್ನುವುದು ತಪ್ಪು ನಿರ್ಧಾರ. ಸರ್ಕಾರಕ್ಕೆ ಚುನಾವಣೆಯೇ ಮುಖ್ಯವಾಗಿದೆ: ಕೋಡಿಹಳ್ಳಿ ಚಂದ್ರಶೇಖರ್

ಯುಗಾದಿ ಹಬ್ಬಕ್ಕೆ ಸಂಬಳ ನೀಡದೆ ವಂಚನೆ; ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್
Follow us
guruganesh bhat
|

Updated on: Apr 12, 2021 | 5:44 PM

ಬೆಂಗಳೂರು: ಸಾರಿಗೆ ನೌಕರರಿಗೆ ಸಂಬಳ ನೀಡದೆ ಸರ್ಕಾರ ವಂಚಿಸಿದೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಉಪಚುನಾವಣೆ ಮುಖ್ಯವಾಗಿದೆ. 1.30 ಲಕ್ಷ ಸಾರಿಗೆ ನೌಕರರ ಜೀವನದ ಬಗ್ಗೆ ಲಕ್ಷ್ಯ ವಹಿಸಿಲ್ಲ. ಸಾರಿಗೆ ನೌಕರರ ಜತೆ ಮಾತಾಡಿಲ್ಲ, ಸಮಸ್ಯೆಯನ್ನು ಆಲಿಸುತ್ತಿಲ್ಲ. ಮಾತುಕತೆ ಮಾಡುವುದಿಲ್ಲ ಎನ್ನುವುದು ತಪ್ಪು ನಿರ್ಧಾರ. ನಾವು ಅಹಿಂಸಾತ್ಮಕವಾಗಿ ಹೋರಾಟ ಮುಂದುವರೆಸುತ್ತೇವೆ. ಜನರ ಸಮಸ್ಯೆಯನ್ನು ಕೇಳದಿರುವ ಸರ್ಕಾರ ಸರ್ಕಾರವೇ ಅಲ್ಲ. ನಾಳೆ ಯುಗಾದಿ ಹಬ್ಬ ಆಚರಿಸಬೇಕು. ಆದರೆ ಮಾರ್ಚ್ ತಿಂಗಳ ವೇತನ ನೀಡದೇ ಸರ್ಕಾರ ವಂಚನೆ ಮಾಡಿದೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಟಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾಗರಿಕರ ಸಮಸ್ಯೆ ಕೇಳದ ಸರ್ಕಾರ ಸರ್ಕಾರವೇ ಅಲ್ಲ. ಸಾರಿಗೆ ಸಿಬ್ಬಂದಿಗಳು ಪ್ರತಿಭಟನೆ ಮುಂದುವರೆದರೂ ಕೂಡ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದರ ಜೊತೆಗೆ ಸಂಬಳವನ್ನೂ ಕೊಟ್ಟಿಲ್ಲ. ನಾಳೆ ಯುಗಾದಿ ಹಬ್ಬ ಇದೆ . ವಿಪರ್ಯಾಸವೆಂದರೆ ಇದು ಮೊಂಡು ಧೋರಣೆ. ಹೀಗೆ ಜನರ ಸಮಸ್ಯೆ ಕೇಳದಿರುವ ಸರ್ಕಾರ ಸರ್ಕಾರವೇ ಅಲ್ಲ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರ 1.30 ಲಕ್ಷ ನೌಕರರ ಜೀವನದ ಕುರಿತು ಲಕ್ಷ್ಯ ವಹಿಸುತ್ತಿಲ್ಲ. ನಮ್ಮ ಜತೆ ಮಾತುಕತೆ ಮಾಡಲ್ಲ, ನಮ್ಮ ಸಮಸ್ಯೆ ಕೇಳಲ್ಲ ಎನ್ನುವುದು ತಪ್ಪು ನಿರ್ಧಾರ. ಸರ್ಕಾರಕ್ಕೆ ಚುನಾವಣೆಯೇ ಮುಖ್ಯವಾಗಿದೆ. ನಮ್ಮ ಕಷ್ಟ ಕೇಳೋದಿಲ್ಲ ಎನ್ನುತ್ತಿದೆ, ಇದು ಸರ್ಕಾರದ ತಪ್ಪು ನಿರ್ಧಾರ. ನಾವು ಅಹಿಂಸಾತ್ಮಕವಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಅವರು ಒತ್ತಿ ಹೇಳಿದರು.

ಇದನ್ನೂ ಓದಿ: ಕರ್ತವ್ಯಕ್ಕೆ ಹಾಜರಾದ 10,430 ಸಿಬ್ಬಂದಿಗೆ ಮಾರ್ಚ್ ತಿಂಗಳ ಸಂಬಳ ಪಾವತಿಸಿದ ಸಾರಿಗೆ ಸಂಸ್ಥೆ

ಸಾರಿಗೆ ಮುಷ್ಕರ; ಬಸ್​ಗಳಿಲ್ಲದೆ ಪರದಾಡುತ್ತಿದ್ದ ತಲ್ಸೇಮಿಯಾ ರೋಗಿಗೆ ನೆರವಾದ ಟಿವಿ9

(Kodihalli Chandrashekar says Karnataka govt. playing a cheap game in the matter of employees salary ahead of Ugadi 2021)

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM